More

    ಅಜ್ಞಾತವಾಸಿಯಾದ ರಂಗಾಯಣ ರಘು; ಹೇಮಂತ್ ನಿರ್ಮಾಣ, ಜನಾರ್ದನ್ ನಿರ್ದೇಶನ

    ಬೆಂಗಳೂರು: ‘ಗೋಧಿ ಬಣ್ಣ’ ಖ್ಯಾತಿಯ ಹೇಮಂತ್ ರಾವ್​ಗೆ ಫೋನ್​ನಲ್ಲೇ ಒಂದು ಕಥೆ ಹೇಳಿದರಂತೆ ‘ಗುಲ್ಟು’ ಖ್ಯಾತಿಯ ಜನಾರ್ದನ್ ಚಿಕ್ಕಣ್ಣ. ಈ ಚಿತ್ರ ಯಾರು ನಿರ್ವಿುಸುತ್ತಿದ್ದಾರೆ ಎಂದು ಕೇಳಿದರೆ, ನಿರ್ಮಪಕರು ಸಿಕ್ಕಿಲ್ಲ ಎಂದು ಉತ್ತರ ಕೊಟ್ಟರಂತೆ. ಈ ಕಥೆಯನ್ನು ತಾನೇ ಯಾಕೆ ನಿರ್ವಿುಸಬಾರದು ಎಂದು ಹೇಮಂತ್​ಗೆ ಅನಿಸಿದೆ. ಹಾಗನಿಸಿದ್ದೇ ತಡ, ಅವರು ನಿರ್ವಪಕರಾಗಿದ್ದಾರೆ. ಜನಾರ್ದನ್​ಗೆ ನಿರ್ದೇಶನದ ಜವಾಬ್ದಾರಿ ವಹಿಸಿದ್ದಾರೆ. ಹೀಗೆ ಪ್ರಾರಂಭವಾದ ಚಿತ್ರವೇ ‘ಅಜ್ಞಾತವಾಸಿ’.

    ‘ಅಜ್ಞಾತವಾಸಿ’ಯ ಪ್ರಯಾಣ ಇತ್ತೀಚೆಗೆ ಶುರುವಾಗಿದೆ. ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಚಿತ್ರತಂಡ ಚಿತ್ರೀಕರಣ ಮಾಡುವುದಕ್ಕೆ ಹೊರಟು ನಿಂತಿದೆ. ‘ಅಜ್ಞಾತವಾಸಿ’ಯಾಗಿ ರಂಗಾಯಣ ರಘು ನಟಿಸುತ್ತಿದ್ದು, ಜತೆಗೆ ಪಾವನಾ ಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ ಮುಂತಾದವರು ನಟಿಸುತ್ತಿದ್ದಾರೆ.

    ಈ ಕಥೆಯನ್ನು ಜನಾರ್ದನ್​ಗೆ ಹೇಳಿದವರು ಅವರ ಗುರುಗಳಾದ ಕೃಷ್ಣರಾಜ್ ಅಂತೆ. ‘1997ರಲ್ಲಿ ಮಲೆನಾಡಿನಲ್ಲಿ ನಡೆಯುವ ಒಂದು ಕೊಲೆಯ ಸುತ್ತ ಕಥೆ ಸುತ್ತುತ್ತದೆ. ಅವರು ಈ ಕಥೆಯನ್ನು ಆಡಿಯೋ ಮಾಡಿ ಕಳಿಸಿದರು. ಅರ್ಧ ಗಂಟೆ ಕಥೆ ಕೇಳಿ ಅದ್ಭುತವಾಗಿದೆ ಎಂದನಿಸಿತು. ಅದನ್ನು ಹೇಮಂತ್​ಗೆ ಕೇಳಿಸಿದೆ. ಅವರು ಚಿತ್ರ ನಿರ್ವಿುಸುವುದಕ್ಕೆ ಮುಂದಾದರು. ಒಂದೊಳ್ಳೆಯ ತಂಡ ಸಿಕ್ಕಿದೆ. ಚಿತ್ರ ಚೆನ್ನಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ’ ಎನ್ನುತ್ತಾರೆ ಜನಾರ್ದನ್.

    ಸರಿ ಕಥೆ ಏನು? ನಿರ್ವಪಕರು, ನಿರ್ದೇಶಕರು ಹೇಳುವುದಿಲ್ಲ. ಅವರ ಕಷ್ಟ ನೋಡಿ ರಘು ಉತ್ತರಿಸಿದರು. ‘ನಾನಿಲ್ಲಿ ಇನ್​ಸ್ಪೆಕ್ಟರ್ ಪಾತ್ರ ಮಾಡುತ್ತಿದ್ದೇನೆ. ಒಂದು ಕೊಲೆ ಆಗುತ್ತದೆ. ಒಂಬತ್ತು ಜನ ನೋಡುತ್ತಾರೆ. ಆಮೇಲೆ ಏನಾಗುತ್ತದೆ ಎನ್ನುವುದೇ ಸಸ್ಪೆನ್ಸ್’ ಎನ್ನುತ್ತಾರೆ ರಘು.

    ಇಪ್ಪತ್ತರ ಯುವತಿಯ ಹುಡುಕಾಟದಲ್ಲಿ ‘ರಾಮಾ ರಾಮಾ ರೇ’ ಸತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts