More

    ಅನಿಮಲ್ ಸಿನಿಮಾ​ ವಿವಾದ: ಹಿಂಸೆಯನ್ನೇ ವೈಭವೀಕರಿಸುವ ಚಿತ್ರಗಳಿಗೆ ಬೀಳಲಿದೆಯಾ ಕಡಿವಾಣ?

    ಮುಂಬೈ: ವಿವಾದದ ಹೊರತಾಗಿಯೂ ರಣಬೀರ್​ ಕಪೂರ್​ ಅಭಿನಯದ “ಅನಿಮಲ್”​ ಸಿನಿಮಾ 500 ಕೋಟಿ ರೂ. ಗಳಿಕೆಯೊಂದಿಗೆ ಬಾಕ್ಸ್​​ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಮಾಡುತ್ತಿದೆ. ಈ ಚಿತ್ರದ ಬಗ್ಗೆ ಸಿನಿ ಅಭಿಮಾನಿಗಳು ಮಾತ್ರವಲ್ಲ, ರಾಜಕಾರಣಿಗಳು ಕೂಡ ಮಾತನಾಡುತ್ತಿದ್ದಾರೆ. ಚಿತ್ರಮಂದಿರದೊಳಗೆ ಮಾತ್ರವಲ್ಲ, ಸಂಸತ್ತಿನ ಒಳಗೂ ಅನಿಮಲ್​ ಸಿನಿಮಾ ಸದ್ದು ಮಾಡುತ್ತಿದೆ. ಹಿಂಸೆಯನ್ನೇ ವೈಭವೀಕರಿಸುವ ಸಿನಿಮಾ ವಿರುದ್ಧ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದೇ ಮೊದಲ ಬಾರಿಗೆ ಸದನದಲ್ಲೂ ಸಿನಿಮಾ ಒಂದರ ಬಗ್ಗೆ ತುಂಬಾ ಚರ್ಚೆಯಾಗಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಿಂಸಾತ್ಮಕ ಚಿತ್ರಗಳಿಗೆ ಕಡಿವಾಣ ಬೀಳಬಹುದು ಎಂದು ಮಾತುಗಳು ಸಹ ಕೇಳಿಬರುತ್ತಿವೆ.

    ಚಳಿಗಾಲ ಅಧಿವೇಶನ ಹಿನ್ನೆಲೆಯಲ್ಲಿ ನಿನ್ನೆ ಕಾಂಗ್ರೆಸ್​ ಸಂಸದೆ ರಂಜೀತ್​ ರಂಜನ್​ ಅವರು ಅನಿಮಲ್​ ಸಿನಿಮಾ ವಿರುದ್ಧ ಸದನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಮಗಳು ಸಿನಿಮಾದಿಂದ ಅರ್ಧಕ್ಕೆ ಎದ್ದು ಹೊರಬಂದಿದ್ದಾಗಿ ತಿಳಿಸಿದರು. ಇಡೀ ಸಿನಿಮಾದಲ್ಲಿ ಹಿಂಸೆ, ನಗ್ನತೆ, ಅಸಭ್ಯತೆಯೇ ಪ್ರಧಾನವಾಗಿದ್ದು, ಸದನದಲ್ಲೇ ಧ್ವನಿ ಎತ್ತಿರುವುದು ಮುಂದಿನ ದಿನಗಳಲ್ಲಿ ಇಂತಹ ಸಿನಿಮಾಗಳ ಮೇಲೆ ಕಡಿವಾಣ ಬಿದ್ದರೂ ಎಚ್ಚರಿಯಿಲ್ಲ.

    ಹಿಂಸೆಯೇ ಪ್ರಧಾನ
    ಕಬಿರ್​ ಸಿಂಗ್​, ಪುಷ್ಪ, ಕೆಜಿಎಫ್​ 2 ಸೇರಿದಂತೆ ಇತ್ತೀಚಿನ ಸಿನಿಮಾಗಳಲ್ಲಿ ಹಿಂಸೆಯನ್ನೇ ಕೇಂದ್ರಿಕರಿಸಲಾಗಿದೆ. ಕೆಲ ಸಿನಿಮಾಗಳಲ್ಲಿ ನಗ್ನತೆಯು ಇದೆ. ಯುವಕರನ್ನು ತಪ್ಪು ದಾರಿಗೆ ಎಳೆಯುವ ಸನ್ನಿವೇಶಗಳೇ ಚಿತ್ರದ ಪ್ರಧಾನ ಕತೆಯಾಗಿದೆ. ಕೆಜಿಎಫ್​-2 ಸಿನಿಮಾ ನೋಡಿ ಅದೇ ಮಾದರಿಯಲ್ಲಿ ಮಧ್ಯಪ್ರದೇಶದ ಯುವಕನೊಬ್ಬ ಸುತ್ತಿಗೆಯಿಂದ ನಾಲ್ವರನ್ನು ಕೊಂದಿರುವ ಉದಾಹರಣೆ ಇದೆ. ಪುಷ್ಪ ಸಿನಿಮಾದಿಂದ ಸ್ಫೂರ್ತಿಗೊಂಡು ಅದೇ ಮಾದರಿಯಲ್ಲಿ ರಕ್ತಚಂದನ ಸಾಗಾಣೆಯಲ್ಲಿ ಸಿಕ್ಕಿಬಿದ್ದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಕೆಜಿಎಫ್​ ಸಿನಿಮಾದಲ್ಲಿ ನಟ ಯಶ್​ ಸಿಗರೇಟ್​ ಸೇದುವ ಶೈಲಿಯಿಂದ ಪ್ರಭಾವಿತನಾದ ಹುಡುಗನೊಬ್ಬ ಒಂದು ಪ್ಯಾಕ್​ ಸಿಗರೇಟ್​ ಸೇದಿ ಆಸ್ಪತ್ರೆಗೆ ಸೇರಿದ್ದ. ಸಮಾಜದಲ್ಲಿ ಅನಾಹುತಗಳನ್ನು ಸೃಷ್ಟಿಸುತ್ತಿರುವ ಸಿನಿಮಾಗಳಿಗೆ ಕಡಿವಾಣ ಬೀಳಬೇಕಿದೆ ಎಂಬ ಮಾತುಗಳು ಕೇಳಿಬರುತ್ತಲೇ ಇದೆ. ಇದೀಗ ಸದನದಲ್ಲೇ ಸಂಸದೆಯೊಬ್ಬರು ಧ್ವನಿ ಎತ್ತಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಹಿಂಸೆಯನ್ನು ವೈಭವೀಕರಿಸುವ ಸಿನಿಮಾಗಳಲ್ಲಿ ಕಡಿವಾಣ ಬೀಳುವ ಭರವಸೆ ಇದೆ. ರಂಜೀತ್​ ರಂಜನ್​ರಂತೆ ಅನೇಕ ಧ್ವನಿ ಎತ್ತಿದರೆ ಇಂತಹ ಚಿತ್ರಗಳಿಗೆ ಕಡಿವಾಣ ಗ್ಯಾರೆಂಟಿ ಬೀಳಲಿದೆ.

    KGF Tragidy

    ರಂಜಿತ್​ ರಂಜನ್​ ಹೇಳಿದ್ದೇನು?
    ಸಿನಿಮಾ ನೋಡಿಕೊಂಡೆ ನಾವು ಬೆಳೆದವು. ಸಿನಿಮಾಗಳು ನಮ್ಮ ಸಮಾಜ ಕನ್ನಡಿಯಿದ್ದಂತೆ. ಸಿನಿಮಾ ನೋಡಲು ಕಾಲೇಜು ಸ್ನೇಹಿತರ ಜೊತೆ ನನ್ನ ಮಗಳು ಚಿತ್ರಮಂದಿರಕ್ಕೆ ಹೋಗಿದ್ದಳು. ಸಿನಿಮಾದಿಂದ ಅರ್ಧಕ್ಕೆ ಕಣ್ಣೀರಿಡುತ್ತಾ ಹೊರಬಂದಿದ್ದಾಳೆ. ಆಕೆ ಅಳುವುದನ್ನು ನಿಲ್ಲಿಸಲಿಲ್ಲ. ಇಡೀ ಚಿತ್ರದಲ್ಲಿ ಹಿಂಸೆಯನ್ನೇ ಚಿತ್ರಿಸಲಾಗಿದೆ ಎಂಬುದನ್ನು ಕೇಳಿ ಆಘಾತಗೊಂಡೆ. ಅನಿಮಲ್​ನಂತಹ ಚಲನಚಿತ್ರಗಳು ಯುವಕರನ್ನು ಜೀವನದಲ್ಲಿ ವಿಪತ್ತಿನ ಹಾದಿಯನ್ನು ತುಳಿಯುವಂತೆ ಪ್ರಭಾವಿಸುತ್ತವೆ ಎಂದು ರಂಜೀತ್ ರಂಜನ್ ಅವರು ಸದನದಲ್ಲಿ ಹೇಳಿದರು.

    ಇದೇ ಸಿನಿಮಾದಲ್ಲಿ ‘ಅರ್ಜನ್ ವೈಲಿ’ ಹಾಡನ್ನು ಬಳಸಿರುವುದನ್ನು ಸಂಸದರು ಟೀಕಿಸಿದ್ದಾರೆ. ರಣಬೀರ್ ಕಪೂರ್ ಪಾತ್ರವು ಕೊಲೆಯಂತಹ ಕೃತ್ಯಗಳನ್ನು ಮಾಡುವಾಗ ಪಂಜಾಬಿ ಯುದ್ಧದ ಹಾಡನ್ನು ಹಿನ್ನೆಲೆಯಾಗಿ ಬಳಸುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಹುದು ಎಂದು ರಂಜೀತ್ ರಂಜನ್ ಹೇಳಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಕಳೆದ ಶುಕ್ರವಾರ ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್​ ಸಿನಿಮಾ ಕಮಾಲ್​ ಮಾಡುತ್ತಿದೆ. (ಏಜೆನ್ಸೀಸ್​)

    ಆ ಒಂದು ಸೀನ್ ನೋಡಿ ರಶ್ಮಿಕಾ ಅಲ್ಲ ಕ್ರಶ್ಮಿಕಾ ಎಂದಿದ್ದೇಕೆ ಆಲಿಯಾ ಭಟ್? ಪತಿಯ ಬಗ್ಗೆ ಹೇಳಿದ್ದೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts