More

    ಆ ಒಂದು ಸೀನ್ ನೋಡಿ ರಶ್ಮಿಕಾ ಅಲ್ಲ ಕ್ರಶ್ಮಿಕಾ ಎಂದಿದ್ದೇಕೆ ಆಲಿಯಾ ಭಟ್? ಪತಿಯ ಬಗ್ಗೆ ಹೇಳಿದ್ದೇನು?

    ಮುಂಬೈ: ಬಾಲಿವುಡ್​ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್​ ಮಾಡುತ್ತಿರುವ ಅನಿಮಲ್​ ಚಿತ್ರವನ್ನು ವೀಕ್ಷಣೆ ಮಾಡಿರುವ ನಟಿ ಆಲಿಯಾ ಭಟ್​, ಮುಖ್ಯ ಪಾತ್ರದಲ್ಲಿ ನಟಿಸಿರುವ ತಮ್ಮ ಪತಿ ರಣಬೀರ್​ ಕಪೂರ್​, ನಿರ್ದೇಶಕ ಸಂದೀಪ್​ ರೆಡ್ಡಿ ವಂಗಾ, ನಟಿ ರಶ್ಮಿಕಾ ಮಂದಣ್ಣ ಹಾಗೂ ಬಾಬಿ ಡಿಯೋಲ್​ ಸೇರಿದಂತೆ ಇಡೀ ಚಿತ್ರತಂಡವನ್ನು ಹೊಗಳಿದ್ದಾರೆ.

    ನಿರ್ದೇಶಕ ಸಂದೀಪ್​ ರೆಡ್ಡಿಯಿಂದ ತನ್ನ ಬರವಣಿಗೆ ಆರಂಭಿಸಿರುವ ಆಲಿಯಾ, ನಿಮ್ಮಂತೆ ಯಾರು ಇಲ್ಲ ಎಂದಿದ್ದಾರೆ. ಈ ಚಿತ್ರದ ಪ್ರತಿಯೊಂದು ಬೀಟ್‌ಗಳು ಅದ್ಭುತ, ಆಶ್ಚರ್ಯಕರ, ಅವಾಸ್ತವಿಕ ಮತ್ತು ಸಂಪೂರ್ಣ ಲೋಡೆಡ್​ ಆಗಿದ್ದು, ಗೂಸ್​ಬಂಪ್‌ಗಳು ತುಂಬಿವೆ ಎಂದಿದ್ದಾರೆ. ಇದಾದ ಬಳಿಕ ನಟಿ ರಶ್ಮಿಕಾರನ್ನು ಕೊಂಡಾಡಿರುವ ಆಲಿಯಾ, ರಶ್ಮಿಕಾ, ಕ್ರಶ್ಮಿಕಾ ಕ್ಲಬ್​ಗೆ ಸೇರಿದ್ದಾರೆ. ರಶ್ಮಿಕಾ ಮಂದಣ್ಣ ನೀವು ಚಿತ್ರದಲ್ಲಿ ತುಂಬಾ ಸುಂದರ ಮತ್ತು ಪ್ರಾಮಾಣಿಕ! ನಾನು ನಿಮಗೆ ಖುದ್ದಾಗಿ ಹೇಳಿದಂತೆ, ಆ ಒಂದು ದೃಶ್ಯ ಮಾತ್ರ ತುಂಬಾ ಹಿಡಿಸಿತು. ಆ ದೃಶ್ಯ ತುಂಬಾ ವಿಶೇಷ ಮತ್ತು ಸ್ಪೂರ್ತಿದಾಯಕ ಎಂದಿದ್ದಾರೆ.

    ಬಾಬಿ ಡಿಯೋಲ್ ನನ್ನ ಅತ್ಯಂತ ಮೆಚ್ಚಿನ ನಟ. ನೀವು ತೆರೆಯ ಮೇಲೆ ಬಂದಾಗಲೆಲ್ಲಾ ನೀವು ಮ್ಯಾಜಿಕ್ ಮಾಡಿದ್ದೀರಿ. ಅನಿಲ್ ಕಪೂರ್ ಅವರು ಎಂದಿನಂತೆ ಅಬ್ಬರಿಸಿದ್ದಾರೆ. ನಿಜಕ್ಕೂ ಅವರು ಸ್ಫೂರ್ತಿ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

    Alia 1

    ವಿಶೇಷವಾಗಿ ತಮ್ಮ ಪತಿ ರಣಬೀರ್ ಕಪೂರ್ ಅವರನ್ನು ಹೊಗಳಿರುವ ಆಲಿಯಾ, ನೀವು ಕ್ಯಾಮೆರಾ ಮತ್ತು ಕ್ಯಾಮೆರಾದಿಂದಾಚೆಗೆ ತಾಳ್ಮೆ, ಮೌನ ಮತ್ತು ಪ್ರೀತಿಯಿಂದ ಉತ್ತಮವಾದುದ್ದನ್ನು ನೀಡುತ್ತೀರಿ. ನಿಮ್ಮ ಕುಟುಂಬಕ್ಕಾಗಿ ಇರುವು ವ್ಯಕ್ತಿ ನೀವು. ಕಲಾವಿದನಾಗಿ ಇಂಥಾ ದೊಡ್ಡ ಹೆಜ್ಜೆ ಇಟ್ಟಿದ್ದಕ್ಕೆ, ನಮ್ಮ ಮಗಳು ಇಂದು ಮೊದಲ ಹೆಜ್ಜೆ ಇಡುವಂತೆ ಮಾಡಿದ್ದಕ್ಕಾಗಿ ಮತ್ತು ನಿಮ್ಮ ಅಭಿನಯದಿಂದ ನಮ್ಮನ್ನು ಸಂಪೂರ್ಣವಾಗಿ ಬೆಚ್ಚಿ ಬೀಳಿಸಿದ್ದಕ್ಕಾಗಿ ಅಭಿನಂದನೆಗಳು ಎಂದಿದ್ದಾರೆ.

    ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರವು ಕಳೆದ ಶುಕ್ರವಾರ ಚಿತ್ರಮಂದಿರಕ್ಕೆ ಅಪ್ಪಳಿಸಿತು. ಚಿತ್ರದಲ್ಲಿ ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈವರೆಗೂ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆಯೊಂದಿಗೆ ಗಲ್ಲಾಪೆಟ್ಟಿಗಯಲ್ಲಿ ಅನಿಮಲ್​ ಸಿನಿಮಾ ಕಮಾಲ್​ ಮಾಡುತ್ತಿದೆ. (ಏಜೆನ್ಸೀಸ್​)

    ಅಗಲಿದ ‘ಅರ್ಜುನ’ ಸಾವಿನ ಬಗ್ಗೆ ತನಿಖೆ ಪ್ರಾರಂಭಿಸಲು ಸೂಚನೆ: ಸಿಎಂ ಸಿದ್ದರಾಮಯ್ಯ

    ಹತ್ಯೆಯ ಸಂಚಿಗೆ ಪ್ರತೀಕಾರ! ಡಿ.13ರೊಳಗೆ ಸಂಸತ್ತಿನ ಮೇಲೆ ದಾಳಿ ಮಾಡುವುದಾಗಿ ಖಲಿಸ್ತಾನಿ ಉಗ್ರನ ಬೆದರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts