More

    ಕಳ್ಳತನ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ವಿದ್ಯಾರ್ಥಿಗಳಿಗೆ ಪ್ರೊಫೆಸರ್​ ವಾರ್ನಿಂಗ್!

    ಬೆಂಗಳೂರು: ಕಳ್ಳತನವಾದ್ರೂ ಮಾಡಿ, ಭಿಕ್ಷೆಯಾದ್ರೂ ಬೇಡಿ.. ಒಟ್ನಲ್ಲಿ ಲ್ಯಾಪ್​ಟಾಪ್​ ಕಡ್ಡಾಯವಾಗಿ ಇರಲೇ ಬೇಕು… ಊಟ- ತಿಂಡಿಗೆ ಖರ್ಚು ಮಾಡೋಕೆ ಆಗುತ್ತೆ.. ಲ್ಯಾಪ್​ಟಾಪ್​ ತಗೋಳೋಕೆ ಏನ್​ ಪ್ರಾಬ್ಲಂ? ನಿಮ್ಮ ಲೈಫ್​ ಸ್ಪೈಲ್​ ಆಗಬಾರದು ಅಂದ್ರೆ ನಾವೇಳ್ದಾಗೆ ಮಾಡಿ…

    ಇದು ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಎಚ್​ಒಡಿ ಪ್ರೊ. ಮುರಳೀಧರ್​ ಕೊಟ್ಟ ಖಡಕ್​ ವಾರ್ನಿಂಗ್​. ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಇದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಲು ವಿಡಿಯೋ ಕಾಲ್​ ಮಾಡಿ ಸಂವಹನ ನಡೆಸಿದ ಪ್ರೊ.ಮುರಳೀಧರ್​, ಮಾತಿನ ಆರಂಭದಲ್ಲೇ ‘ಇವಾಗ ಇನ್ನೊಂದು ಮಳೆ ಬರುತ್ತೆ ನೋಡಿ’ ಎಂದು ಶಾಕ್​ ನೀಡಿದರು.

    ಇದನ್ನೂ ಓದಿರಿ ಯುಪಿಎಸ್​ಸಿ ಪ್ರಿಲಿಮಿನರಿ ಪರೀಕ್ಷೆ ಯಾವಾಗ? ಇಲ್ಲಿದೆ ನೋಡಿ ಮಾಹಿತಿ

    ಗ್ರಾಮೀಣ ಭಾಗದ ಮಹಿಳಾ ವಿದ್ಯಾರ್ಥಿಗಳಾದಿಯಾಗಿ ‘ಸರ್​… ಏಕಾಏಕಿ ಲ್ಯಾಪ್​ಟಾಪ್​ ಅಂದ್ರೆ ಹೇಗೆ? ನಮ್ಮ­ತ್ರ ಹಣ ಇಲ್ಲ…’ ಎಂದು ಗೋಗರೆದರೂ ಕ್ಯಾರೆ ಎನ್ನಲಿಲ್ಲ. ಇನ್ನೂ ಕೆಲ ವಿದ್ಯಾರ್ಥಿಗಳು, ‘ಈ ಬಗ್ಗೆ ಲೆಟರ್ ಕೊಡಿ. ನಮ್ಮ ತಹಸೀಲ್ದಾರ್ ಬಳಿ ಮಾತಾಡುತ್ತೇವೆ. ಇಲ್ಲವೇ ನಾವು ಕಟ್ಟಿದ ಶುಲ್ಕದ ಹಣ ವಾಪಸ್​ ಕೊಟ್ಟುಬಿಡಿ’ ಎಂದರು. ‘ಇದ್ಯಾವುದರ ಬಗ್ಗೆಯೂ ಕೇಳಬೇಡಿ… ಕಡ್ಡಾಯವಾಗಿ ಎಲ್ಲರೂ ಲ್ಯಾಪ್​ಟಾಪ್​ ಹೊಂದಿಸಿಕೊಳ್ಳಬೇಕು ಅಷ್ಟೆ. ಇದು ಫೈನಲ್’​ ಎಂದು ಎಚ್ಚರಿಸಿದರು.

    ಇದನ್ನೂ ಓದಿರಿ ಮೃತ ಸ್ನೇಹಿತನ ಮನೆ ಕಟ್ಟಿ.. ಅಲ್ಲೇ 11ನೇ ದಿನದ ಕಾರ್ಯ ನೆರವೇರಿಸಿದ ಯುವಕರ ಸಾಹಸಗಾಥೆ ಇದು!

    ಮುಂದಿನ ವಾರದಲ್ಲಿ ಇಂಟರ್ನಲ್​ ಎಕ್ಸಾಂ ಶುರುವಾದ್ರೆ ಲ್ಯಾಪ್​ಟಾಪ್​ ಹೊಂದಿಸೋದು ಹೇಗೆ? ಲ್ಯಾಪ್​ಟಾಪ್​ ಇಲ್ಲಾಂದ್ರೆ ಎಕ್ಸಾಂ ಮಿಸ್​ ಆಗುತ್ತೆ.. ಎಂಬ ಟೆನ್ಶನ್​ ವಿದ್ಯಾರ್ಥಿಗಳಲ್ಲಿ ಶುರುವಾಗಿದೆ. ಪ್ರೊಫೆಸರ್ ಬಳಿ ವಿದ್ಯಾರ್ಥಿಗಳು, ‘ನಮ್ಮ ಲೈಪ್​ ಹಾಳಾಗುತ್ತೆ ಸರ್​.. ದಯವಿಟ್ಟು ಪರ್ಯಾಯ ವ್ಯವಸ್ಥೆ ಮಾಡಿ’ ಎಂದರೂ ಅವರು, ‘ನಿಮ್ಮ ಜೀವನ ಹಾಳಾಗಬಾರದು ಅಂದ್ರೆ ಲ್ಯಾಪ್​ಟಾಪ್​ ತಗೋಳಿ’ ಎಂದು ಖಾರವಾಗಿಯೇ ಪ್ರತಿಕ್ರಿಯಿಸಿದರು, ಈ ಸಂಭಾಷಣೆಯ ಪೂರ್ಣ ವಿವರ ಈ ವಿಡಿಯೋದಲ್ಲಿದೆ ನೋಡಿ.

    ಈ ವಿಡಿಯೋ ನೋಡಿ

    ವಿದ್ಯಾರ್ಥಿಗಳಿಗೆ 'ಕಳ್ಳ'ಪಾಠ ಹೇಳಿದ ಪ್ರೊಫೆಸರ್​..!

    ವಿದ್ಯಾರ್ಥಿಗಳು ಕಳ್ಳತನ ಮಾಡಿ ಇಲ್ಲವೇ ಭಿಕ್ಷೆ ಬೇಡಿಯಾದ್ರೂ ಲ್ಯಾಪ್​ಟಾಪ್ ​ತಗೋಬೇಕಂತೆ.. ! ಹೀಗಂತ ಬೆಂಗಳೂರಿನ ಎಂವಿಜೆ ಕಾಲೇಜಿನ ಸಿವಿಲ್​ ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಗೆ ಎಚ್​ಒಡಿ ಪ್ರೊ. ಮುರಳೀಧರ್​ ವಿಡಿಯೋ ಕಾಲ್​ನಲ್ಲೇ ವಾರ್ನಿಂಗ್​ ಮಾಡಿದ್ದಾರೆ. ವಿದ್ಯಾರ್ಥಿಗಳು ಹಣ ಇಲ್ಲ ಅಂದ್ರೂ ಕ್ಯಾರೆ ಎನ್ನದ ಪ್ರೊಫೆಸರ್​ ಹೇಗೆ ಮಾತಾಡಿದ್ದಾರೆ ಈ ವಿಡಿಯೋ ನೋಡಿ…#Beg #Laptop #Warning #Students #Bangalore #MVJCollege

    Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶುಕ್ರವಾರ, ಜೂನ್ 5, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts