More

    ಡ್ರೈವಿಂಗ್​ ವೇಳೆ ಮೊಬೈಲ್​ನಲ್ಲಿ ಚಾಟಿಂಗ್​ ಮಾಡ್ತಿದ್ದ ಬಸ್​ ಚಾಲಕನನ್ನು ವಶಕ್ಕೆ ಪಡೆದ ಸಾರಿಗೆ ಇಲಾಖೆ ಅಧಿಕಾರಿಗಳು!

    ಕೊಚ್ಚಿ: ಡ್ರೈವಿಂಗ್​ ಮಾಡುತ್ತಾ ಮೊಬೈಲ್​ ಚಾಟಿಂಗ್ ಬಿಜಿಯಾಗಿದ್ದ ಖಾಸಗಿ ಬಸ್ ಚಾಲಕನನ್ನು ಕೇರಳದ ಮೋಟಾರು ವಾಹನ ಇಲಾಖೆ (ಎಂವಿಡಿ) ವಶಕ್ಕೆ ಪಡೆದಿದೆ.

    ಅಲುವಾ ಮತ್ತು ಥೀವರಾ ಮಾರ್ಗದ ನಡುವೆ ಸಂಚರಿಸುತ್ತಿದ್ದ ಖಾಸಗಿ ಬಸ್​ನಲ್ಲಿ ಚಾಲಕ ರುಬೀಶ್​ ಮೊಬೈಲ್​ನಲ್ಲಿ ಚಾಟಿಂಗ್​ ಮಾಡುತ್ತಾ ಡ್ರೈವಿಂಗ್ ಮಾಡುತ್ತಿದ್ದ. ಪ್ರಯಾಣಿಕರೊಬ್ಬರು ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಫೋಟೋ ವೈರಲ್​ ಆಗುತ್ತಿದ್ದಂತೆ ಚಾಲಕ ರುಬೀಶ್​ನನ್ನು ವಶಕ್ಕೆ ಪಡೆಯಲಾಗಿದೆ.

    ಫೋಟೋವನ್ನು ನೋಡಿ ತಕ್ಷಣ ಕಾರ್ಯಪ್ರವೃತ್ತರಾದ ಎಂವಿಡಿ ಅಧಿಕಾರಿಗಳು ಬಸ್​ ಚೇಸ್​ ಮಾಡಿ ಚಾಲಕನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ, ಬಸ್​ ಸಹ ಸೀಜ್​ ಮಾಡಲಾಗಿದ್ದು, ಸ್ಪೀಡ್​ ಗವರ್ನರ್ ಕಡಿತ ಸೇರಿದಂತೆ​ ಅನೇಕ ಗಂಭೀರ ಸ್ವರೂಪದ ಸಂಚಾರ ನಿಯಮ ಉಲ್ಲಂಘನೆಯಾಗಿರುವುದು ಗಮನಕ್ಕೆ ಬಂದಿದೆ.

    ಡ್ರೈವಿಂಗ್​ ಮಾಡುವಾಗ ಮೊಬೈಲ್​ ಬಳಕೆ ಕಾನೂನಿಗೆ ವಿರುದ್ಧವಾಗಿದೆ. ಭಾರತದಲ್ಲಿ ಬಹುತೇಕರು ಡ್ರೈವಿಂಗ್​ ಮಾಡುವಾಗ ಅಥವಾ ಇನ್ನಿತರ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. (ಏಜೆನ್ಸೀಸ್​)​

    ವಿಜಯವಾಣಿ ಅಚ್ಚಗನ್ನಡ ಅಭಿಯಾನ: ಬನ್ನಿ ಭಾಗವಹಿಸಿ ಬಹುಮಾನ ಗೆಲ್ಲಿ

    ಗುಜರಾತ್ ಚುನಾವಣೆಗೆ 50 ಸಾವಿರ ಕೋಟಿ ರೂ. ಬೆಟ್ಟಿಂಗ್? ಬಿಜೆಪಿ ಬಹುಮತ ಪಡೆಯಲಿದೆ ಎನ್ನುತ್ತಿರುವ ಬುಕ್ಕಿಗಳು

    ಟ್ವಿಟರ್​ನಿಂದ ವಜಾಗೊಂಡ ಬೆನ್ನಲ್ಲೇ ಭಾರತೀಯ ಉದ್ಯೋಗಿ ಮಾಡಿರುವ ಟ್ವೀಟ್​ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts