More

    ದೇವಾಲಯದ ಬಾಗಿಲು ತೆಗೆದರೂ ಭಕ್ತರ ಸಂಖ್ಯೆ ವಿರಳ

    ಕಳಸ: ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಟ್ಟ ಕಲಶೇಶ್ವರ ದೇವಸ್ಥಾನದಲ್ಲಿ ಸೋಮವಾರದಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಿದರೂ ಭಕ್ತರ ಸಂಖ್ಯೆ ವಿರಳವಾಗಿತ್ತು.

    ಸರ್ಕಾರದ ನಿಯಮಾವಳಿಯಂತೆ ಕಲಶೇಶ್ವರ ದೇವಾಲಯವನ್ನು ಸ್ವಚ್ಚಗೊಳಿಸಿ ಸ್ಯಾನಿಟೈಸ್ ಮಾಡಿ 6 ಅಡಿ ಅಂತರದಲ್ಲಿ ವೃತ್ತಗಳನ್ನು ರಚಿಸಲಾಗಿದೆ. ಆರಂಭದಲ್ಲಿಯೇ ಭಕ್ತರಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮಾಸ್ಕ್ ಧರಿಸಿದವರಿಗೆ ಮಾತ್ರ ಒಳಗಡೆ ಬಿಡಲಾಗುತ್ತಿದೆ. ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

    ತೀರ್ಥ ಪ್ರಸಾದ, ಹಣ್ಣು ಕಾಯಿ, ಊಟ ನೀಡುವುದನ್ನು ನಿಲ್ಲಿಸಲಾಗಿದೆ. ಮಕ್ಕಳು ಮತ್ತು ವೃದ್ಧರಿಗೆ ದೇವಾಲಯ ಪ್ರವೇಶ ನಿಷೇಧಿಸಲಾಗಿದೆ. ಪ್ರಾಂಗಾಣದಲ್ಲಿ ನಿಂತು ದೇವರ ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಯನ್ನು ಒಟ್ಟಿಗೆ 9 ಗಂಟೆಗೆ ಮಾಡಲಾಗಿದೆ. ಸಂಜೆ 6.45 ಗಂಟೆಗೆ ಪೂಜೆ ಮಾಡಿ 7.30 ದೇವಸ್ಥಾನವನ್ನು ಮುಚ್ಚಲಾಗಿತ್ತು.

    ಹೊರನಾಡಿಗೆ ಪ್ರವೇಶವಿಲ್ಲ: ಹೊರನಾಡು ದೇವಾಲಯದಲ್ಲಿ ದೇವರ ದರ್ಶನಕ್ಕೆ ದಿನಾಂಕ ನಿಗದಿಪಡಿಸದಿರುವುದರಿಂದ ದೇವಾಲಯದಲ್ಲಿ ಭಕ್ತರಿಗೆ ಪ್ರವೇಶ ನಿಷೇಧಿಸಲಾಗಿದೆ. ಕರೊನಾ ಹರಡುವಿಕೆ ತಡೆಯಲು ಬೇಕಾದ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲು ಹೆಚ್ಚಿನ ಸಮಯದ ಅಗತ್ಯವಿರುವುದರಿಂದ ದೇವರ ದರ್ಶನ, ಪೂಜೆ ಹಾಗೂ ವಾಸ್ತವ್ಯದ ಅವಕಾಶವನ್ನು ಸದ್ಯಕ್ಕೆ ಮುಂದೂಡಲಾಗಿದೆ. ನಿತ್ಯ ಫೇಸ್​ಬುಕ್​ಲೈವ್ ದರ್ಶನದ ವ್ಯವಸ್ಥೆ ಮುಂದುವರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts