More

    ಮುಸ್ಲಿಂ ಮಕ್ಕಳಿಗೆ ಸಂಸ್ಕೃತ, ಹಿಂದು ಮಕ್ಕಳಿಗೆ ಉರ್ದು ಶಿಕ್ಷಣ; ಹಿಂದು-ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾಗಿರುವ ಮದರಸಾ ಇದು…

    ಲಖನೌ: ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿರುವ ಮದರಸಾವೊಂದು ಹಿಂದು-ಮುಸ್ಲಿಂ ಐಕ್ಯತೆಗೆ ಸಾಕ್ಷಿಯಾಗಿ ನಿಂತಿದೆ.

    ಗುಲ್​ಶಾನ್​ ಇ ಬಾಗ್ದಾದ್​ ಎಂಬ ಮದರಸಾದಲ್ಲಿ ಬರೀ ಮುಸ್ಲಿಂ ಮಕ್ಕಳಷ್ಟೇ ಓದುತ್ತಿಲ್ಲ. ಇಲ್ಲಿ ಅಪಾರ ಸಂಖ್ಯೆಯಲ್ಲಿ ಹಿಂದು ಮಕ್ಕಳೂ ಕಲಿಯುತ್ತಿದ್ದಾರೆ. ಇಲ್ಲಿ ಮುಸ್ಲಿಂ ಮಕ್ಕಳಿಗೆ ಸಂಸ್ಕೃತವನ್ನು ಕಲಿಸಲಾಗುತ್ತದೆ. ಹಾಗೇ ಹಿಂದು ಮಕ್ಕಳಿಗೆ ಉರ್ದು ಪಾಠವೂ ನಡೆಯುತ್ತದೆ. ಈ ಕಾರಣಕ್ಕೆ ಗುಲ್​ಶಾನ್​ ಇ ಬಾಗ್ದಾದ್​ ಮದರಸಾ ತುಂಬ ವಿಭಿನ್ನ ಎನ್ನಿಸುತ್ತದೆ.

    ಮದರಸಾದಲ್ಲಿ ಒಟ್ಟು 230 ವಿದ್ಯಾರ್ಥಿಗಳಿದ್ದು ಅದರಲ್ಲಿ 30 ಹಿಂದು ವಿದ್ಯಾರ್ಥಿಗಳು ಮತ್ತು 50ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿಗಳು ಸಂಸ್ಕೃತ ಕಲಿಯುತ್ತಿದ್ದಾರೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.

    ಉರ್ದು ಮತ್ತು ಅರೇಬಿಕ್​ ಕಲಿಸಲು ಇಬ್ಬರು ಶಿಕ್ಷಕರು ಇದ್ದಾರೆ. ಹಾಗೇ ಉಳಿದ ವಿಷಯಗಳನ್ನು ಕಲಿಸಲು ಒಟ್ಟು ನಾಲ್ವರು ಇದ್ದು ಅದರಲ್ಲಿ ನರೇಶ್​ ಬಹದ್ದೂರ್​ ಶ್ರೀವಾಸ್ತವಾ ಎಂಬುವರು ಸಂಸ್ಕೃತ ಪಾಠ ಮಾಡುತ್ತಾರೆ.
    ಮದರಸಾದ ಪ್ರಾಂಶುಪಾಲ ಕರಿ ಮಹಮ್ಮದ್​ ರಶೀದ್​ ಮಾಧ್ಯಮಗಳ ಬಳಿ ಮಾತನಾಡಿ, ಇಲ್ಲಿನ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ನಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದೇವೆ. ಮುಸ್ಲಿಂ ಮಕ್ಕಳಿಗೂ ಸಂಸ್ಕೃತ, ಹಿಂದಿ ಕಲಿಸಲಾಗುತ್ತಿದೆ ಎಂದಿದ್ದಾರೆ.

    ಕೆಲವು ಮುಸ್ಲಿಮೇತರ ಮಕ್ಕಳು ಉರ್ದು ಕಲಿಯುತ್ತಿದ್ದರೆ, ಮತ್ತೆ ಒಂದಷ್ಟು ಜನ ಅರೇಬಿಕ್​ ಆಯ್ಕೆ ಮಾಡಿಕೊಂಡಿದ್ದಾರೆ. ಕೆಲವರು ಉರ್ದು ಮತ್ತು ಸಂಸ್ಕೃತ ಎರಡನ್ನೂ ಅಭ್ಯಸಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
    ಈ ಮದರಸಾದಲ್ಲಿ ಪರ್ಸಿಯನ್​, ವಿಜ್ಞಾನ, ಇಂಗ್ಲಿಷ್​, ಗಣಿತಗಳನ್ನೂ ಕಲಿಸಲಾಗುತ್ತಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts