More

    ಮುಸ್ಲಿಂ ಮಹಿಳೆ ತಮ್ಮ ನವಜಾತ ಶಿಶುವಿಗೆ ‘ರಣವಿಜಯ’ ಎಂದು ಹಿಂದು ಹೆಸರಿಡಲು ಕಾರಣವಾಯ್ತು ಕರೊನಾ ಕರ್ಫ್ಯೂ…!

    ಬರೇಲಿ: ಮುಸ್ಲಿಂ ಮಹಿಳೆಯೋರ್ವರು ತಮ್ಮ ನವಜಾತ ಗಂಡು ಮಗುವಿಗೆ ಹಿಂದು ಹೆಸರನ್ನು ಇಡಲು ಕರೊನಾ ಕರ್ಫ್ಯೂ ಕಾರಣವಾಗಿದೆ.

    ಈಗ ಎಲ್ಲೆಲ್ಲೂ ಕರೊನಾ ಭೀತಿ. ಮಾ.24ರಿಂದ ಇಡೀ ದೇಶವೇ ಲಾಕ್​ಡೌನ್ ಆಗಿದೆ. ಹಾಗಾಗಿ ಯಾವುದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಲ್ಲ. ಈ ಮಧ್ಯೆ ಉತ್ತರ ಪ್ರದೇಶದ ಬರೇಲಿಯಲ್ಲಿ ಮುಸ್ಲಿಂ ಮಹಿಳೆಯೋರ್ವರು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಅವರ ಪತಿ ನೊಯ್ಡಾದಲ್ಲಿ ಇದ್ದರು. ಆ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲು ಪತಿಯೇ ಹೋಗಬೇಕಿತ್ತು. ಆದರೆ ಲಾಕ್​ಡೌನ್​ ಮಧ್ಯೆ ಬರೇಲಿಗೆ ಹೋಗಲಾಗದೆ ಕಷ್ಟಪಡುತ್ತಿದ್ದ ಆ ವ್ಯಕ್ತಿಗೆ ನೊಯ್ಡಾದ ಅಡಿಷನಲ್ ಡಿಸಿಪಿ ಕುಮಾರ್​ ರಣವಿಜಯ​ ಎಂಬುವರು ಸಹಾಯ ಮಾಡಿದರು.

    ಅಡಿಷನಲ್​ ಡಿಸಿಪಿ ಸಹಾಯದಿಂದ ಬರೇಲಿಗೆ ಹೋದ ವ್ಯಕ್ತಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಹೆರಿಗೆಯಾಗಿ ಗಂಡುಮಗುವೂ ಜನಿಸಿತು. ಪೊಲೀಸ್ ಅಧಿಕಾರಿ ರಣವಿಜಯ್​ ಅವರ ಉಪಕಾರ ಸ್ಮರಿಸಿದ ಮುಸ್ಲಿಂ ಮಹಿಳೆ ತನ್ನ ಮಗುವಿಗೆ ರಣವಿಜಯ​ ಎಂದೇ ಹೆಸರನ್ನಿಟ್ಟಿದ್ದಾರೆ. (ಏಜೆನ್ಸೀಸ್)

    ಮುಸ್ಲಿಂ ಮಹಿಳೆ ತಮ್ಮ ನವಜಾತ ಶಿಶುವಿಗೆ 'ರಣವಿಜಯ' ಎಂದು ಹಿಂದು ಹೆಸರಿಡಲು ಕಾರಣವಾಯ್ತು ಕರೊನಾ ಕರ್ಫ್ಯೂ...!

    ‘ಕರೊನಾ ವಿರುದ್ಧದ ಹೋರಾಟದಲ್ಲಿ ಭಾರತ ಶೀಘ್ರದಲ್ಲೇ ಜಯ ಸಾಧಿಸಲಿದೆ…ನಾವು ಏನು ಸಹಾಯ ಬೇಕಾದ್ರೂ ಮಾಡುತ್ತೇವೆ’ ಎಂದ ಚೀನಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts