More

    ಮುಸ್ಲಿಂ ಆದರೇನಂತೆ, ಸಂಸ್ಕೃತದಲ್ಲೇ ಪ್ರಮಾಣ ವಚನ ಸ್ವೀಕರಿಸುತ್ತೇನೆ! ಬಿಹಾರದ ಶಾಸಕನ ಸಂಸ್ಕೃತ ಅಭಿಮಾನ

    ಪಟನಾ: ಬಿಹಾರ ವಿಧಾನಸಭಾ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಎನ್​ಡಿಎ ಸರ್ಕಾರ ನಿತೀಶ್​ ಕುಮಾರ್​ ಅವರನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ್ದು, ಸಚಿವ ಸಂಪುಟವನ್ನೂ ರಚಿಸಿದೆ. ರಾಜ್ಯದಲ್ಲಿ ಸೋಮವಾರ ಮತ್ತು ಮಂಗಳವಾರ ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ನಡೆಯುತ್ತಿದೆ. ಈ ಸಮಯದಲ್ಲಿ ಮುಸ್ಲಿಂ ಶಾಸಕರೊಬ್ಬರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ಎಲ್ಲರ ಹುಬ್ಬೇರುವಂತಾಗಿದೆ.

    ಇದನ್ನೂ ಓದಿ: ಕಾಂಗ್ರೆಸ್​ಗೆ ಬಂತು ಸಂಕಷ್ಟ; 25 ಸಾವಿರ ಕೋಟಿ ರೂ. ಭೂ ಹಗರಣ ಪ್ರಕರಣದಲ್ಲಿ ಕೈ ನಾಯಕರ ಹೆಸರು

    ಕಾಂಗ್ರೆಸ್​ ಶಾಸಕ ಶಕೀಲ್​ ಅಹಮ್ಮದ್​ ಖಾನ್​ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿರುವ ಶಾಸಕ. ಇವರು ಜವಹರಲಾಲ್​ ನೆಹರು ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ ಕೂಡ ಹೌದು. ಸಂಸ್ಕೃತವನ್ನು ತಮ್ಮ ಭಾಷೆ ಎಂದುಕೊಂಡಿರುವ ಬಿಜೆಪಿ, ಹಾಗೂ ಅದೊಂದು ಪರ ಭಾಷೆ ಎಂದು ದೂರುವ ಅಖಿಲ ಭಾರತ ಮಜ್ಲಿಸ್-ಎ-ಇಟ್ಟೇಹದುಲ್ ಮುಸ್ಲೀಮೀನ್ (ಎಐಎಂಐಎಂ) ಪಕ್ಷಕ್ಕೆ ಒಂದು ಖಡಕ್​ ಉತ್ತರ ಕೊಡುವ ಸಲುವಾಗಿ ತಾವು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

    ಶಾಸಕರ ಪ್ರಮಾಣ ವಚನ ಕಾರ್ಯಕ್ರಮ ವಿವಿಧತೆಯಲ್ಲಿ ಏಕತೆ ಸಾರುವಂತಿತ್ತು. ಮೈಥಿಲಿ, ಉರ್ದು, ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್​ ಭಾಷೆಗಳಲ್ಲಿ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. (ಏಜೆನ್ಸೀಸ್​)

    2 ಸಾವಿರ ವರ್ಷಗಳ ಹಿಂದೆ ಜ್ವಾಲಾಮುಖಿಗೆ ಬಲಿಯಾಗಿದ್ದರ ದೇಹ ಪತ್ತೆ; ಶ್ರೀಮಂತ, ಬಡವನ ಜೋಡಿ ಎಂದ ತಜ್ಞರು

    ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್​ ಗೊಗೊಯ್​ ಇನ್ನಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts