More

    ಕಾಂಗ್ರೆಸ್​ಗೆ ಬಂತು ಸಂಕಷ್ಟ; 25 ಸಾವಿರ ಕೋಟಿ ರೂ. ಭೂ ಹಗರಣ ಪ್ರಕರಣದಲ್ಲಿ ಕೈ ನಾಯಕರ ಹೆಸರು

    ಶ್ರೀನಗರ: ಕಾಂಗ್ರೆಸ್​ ಸಾಕಷ್ಟು ಸಮಸ್ಯೆಗಳ ಬಲೆಗೆ ಸಿಲುಕಿಕೊಳ್ಳುತ್ತಿದೆ. ಈಗಾಗಲೇ ಹಲವು ರಾಜ್ಯಗಳು ಮತ್ತು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡಿರುವ ಪಕ್ಷ, ರಾಜಕೀಯ ಅಂತ್ಯ ಕಾಣುತ್ತದೆ ಎಂದು ಅನೇಕರು ಮಾತನಾಡಿಕೊಳ್ಳಲಾರಂಭಿಸಿದ್ದಾರೆ. ಅದರ ಬೆನ್ನಲ್ಲೇ ಪಕ್ಷದ ಅನೇಕ ನಾಯಕರು ಒಂದಿಲ್ಲೊಂದು ವಿವಾದ, ಪ್ರಕರಣಗಳಲ್ಲಿ ಸಿಲುಕಿಕೊಳ್ಳಲಾರಂಭಿಸಿದ್ದಾರೆ. ಇದೀಗ ಜಮ್ಮು ಕಾಶ್ಮೀರದ ಬಹುಕೋಟಿ ಹಗರಣದ ಪ್ರಕರಣದಲ್ಲಿ ಕಾಂಗ್ರೆಸ್​ ನಾಯಕರ ಹೆಸರು ಕೇಳಿಬಂದಿದೆ.

    ಇದನ್ನೂ ಓದಿ: ಟೀ ಪ್ರೇಮಿಗಳೇ ಎಚ್ಚರ! ಟೀ ಕುಡಿದು ನಾಶವಾಯಿತು ಪೂರ್ತಿ ಕುಟುಂಬ

    ಜಮ್ಮು ಕಾಶ್ಮೀರದ ಇತಿಹಾಸದಲ್ಲಿ ನಡೆದ ಅತಿದೊಡ್ಡ ಭೂ ಹಗರಣದಲ್ಲಿ ಕಾಂಗ್ರೆಸ್​ನ ಕೆಲ ನಾಯಕರು ಹೆಸರು ಕೇಳಿಬಂದಿದೆ. ಅಲ್ಲಿನ 25 ಸಾವಿರ ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಂಡ ಪ್ರಕರಣದಲ್ಲಿ ಕಾಂಗ್ರೆಸ್​ ಹಾಗೂ ಪಿಡಿಪಿ ಪಕ್ಷದ ನಾಯಕರು ಹಾಗೂ ಅನೇಕ ಅಧಿಕಾರಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ.

    ಇದನ್ನೂ ಓದಿ: ಮಗಳ ಲಗ್ನ ಪತ್ರಿಕೆಯಲ್ಲೇ ಡೆತ್​ ನೋಟ್​ ಬರೆದಿಟ್ಟು ಸಾವಿಗೆ ಶರಣಾದ ಅಪ್ಪ; ಇಷ್ಟಕ್ಕೆಲ್ಲ ಕಾರಣವಾಗಿದ್ದು ವರನ ಮನೆಯವರೇ

    ಆಜ್​ ತಕ್​ ವಾಹಿನಿಯ ವರದಿ ಪ್ರಕಾರ, ಪಿಡಿಪಿ ನಾಯಕ ಮತ್ತು ಜಮ್ಮು ಕಾಶ್ಮೀರದ ಮಾಜಿ ಹಣಕಾಸು ಸಚಿವ ಹಸೀಬ್​ ದರ್ಬೊ ಅವರೂ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢವಾಗಿದೆ ಎನ್ನಲಾಗಿದೆ. ಅವರ ಜತೆ ಶೆಹಜಾಡಾ ಬಾನೊ, ಎಜಾಜ್​ ಹುಸೇನ್​ ಮತ್ತು ಇಫ್ಇಕಾರ್​ ಡಾರ್ಬೊ ಅವರ ಹೆಸರೂ ಬಹಿರಂಗವಾಗಿದೆ. ಹಾಗೂ ಕಾಂಗ್ರೆಸ್​ ಮುಖಂಡ ಕೆ.ಕೆ.ಅಮ್ಲಾ ಕೂಡ ಪ್ರಕರಣದಲ್ಲಿ ಭಾಗಿಯಾಗಿರುವುದು ಖಚಿತವಾಗಿದೆ ಎನ್ನಲಾಗಿದೆ. (ಏಜೆನ್ಸೀಸ್​)

    ಸಾಲ ವಾಪಾಸು ಕೇಳಲು ಬಂದವಳನ್ನೇ ರೇಪ್​ ಮಾಡಿಬಿಟ್ಟ; ಸಾಲ ಕೇಳಿದರೆ ಹುಷಾರ್​!

    ಚಿಕ್ಕ ವಯಸ್ಸಿಗೇ ಚೆಫ್​ ಆದ್ರು ಗೋಲ್ಡನ್​ ಸ್ಟಾರ್​ ಗಣೇಶ್​ ಮಗಳು; ಈ ಕ್ಯೂಟ್​ ವಿಡಿಯೋಗೆ ನೀವು ಫಿದಾ ಆಗೋದು ಗ್ಯಾರಂಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts