More

    ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ದೇವಸ್ಥಾನದಲ್ಲಿ ಸಾಧು ವೇಷದಲ್ಲಿದ್ದ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಿದ ಪೊಲೀಸ್​​

    ಮೀರತ್: ಹಲವಾರು ತಿಂಗಳುಗಳಿಂದ ಸಾಧುವಿನ ವೇಷದಲ್ಲಿ ದೇವಸ್ಥಾನದಲ್ಲಿ ವಾಸಿಸುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಉತ್ತರಪ್ರದೇಶದ ಮೀರತ್​​ನಲ್ಲಿ ನಡೆದಿದೆ.

    ಇದನ್ನೂ ಓದಿ: ಕಸದ ತೊಟ್ಟಿಯಿಂದ ಗ್ರಾಹಕರಿಗೆ ಸ್ನಾಕ್ಸ್​​ ನೀಡಿದ ಮಹಿಳೆ: ಘಟನೆ ಬೆಳಕಿಗೆ ಬಂದಿದ್ದು ಹೀಗೆ..

    ಬಂಧಿತ ಆರೋಪಿಯನ್ನು ಗುಲ್ಲೂ(38) ಎಂದು ಗುರುತಿಸಲಾಗಿದ್ದು, ಹರಿಯಾಣದ ಪಾಣಿಪತ್‌ನ ಗಾದ್ರಿ ಗ್ರಾಮದ ನಿವಾಸಿಯಾಗಿದ್ದಾನೆ. ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದ್ದು, ಮತ್ತೂರು ಗ್ರಾಮದ ಎನ್‌ಎಚ್‌-58 ಹೆದ್ದಾರಿಯ ಬಳಿಯ ಶಿವ ದೇವಸ್ಥಾನದ ಬಳಿ ಮುಸ್ಲಿಂ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಸಾಧು ಎಂದು ಹೇಳಿಕೊಂಡು ವಾಸವಿದ್ದಾರೆ ಎಂಬ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

    ಆರೋಪಿಯು 2023ರ ಜನವರಿಯಿಂದ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಧುವಿನಂತೆ ನಟಿಸುತ್ತಿದ್ದು, ಆತನ ಹಿನ್ನೆಲೆಯ ಬಗ್ಗೆ ಸ್ಥಳೀಯರಿಗೆ ತಿಳಿದಿರಲಿಲ್ಲ. ಈತನ ಕೃತ್ಯದ ಹಿಂದಿನ ಉದ್ದೇಶ ಮತ್ತು ಆತ ಏಕೆ ಮಾರುವೇಷದಲ್ಲಿ ಬದುಕಲು ನಿರ್ಧರಿಸಿದ ಎಂಬುದರ ಕುರಿತು ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಮೂತ್ರ ವಿಸರ್ಜನೆ ಮಾಡಲು ಹೋಗಿದ್ದೇ ತಪ್ಪಾಯ್ತಾ..?

    ದೌರಾಲಾ ಪೊಲೀಸ್ ಠಾಣೆಯ ಎಸ್‌ಐ ಅಭಿಷೇಕ್ ಪಟೇಲ್, ಬಂಧಿತ ಆರೋಪಿ ಗುಲ್ಲೂ ಮುಸ್ಲಿಂ ವ್ಯಕ್ತಿ ಎಂದು ಖಚಿತಪಡಿಸಿದ್ದು, ಆತನ ಅಪರಾಧದ ಹಿನ್ನೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಈಗಾಗಲೇ ಆರೋಪಿಗೆ ಮದುವೆಯಾಗಿದ್ದು, ಪತ್ನಿ ಜತೆಯಲ್ಲಿ ವಾಸವಾಗಿಲ್ಲ ಎಂದು ತಿಳಿದು ಬಂದಿದೆ. ಆರೋಪಿಯು ಪೊಲೀಸ್ ವಶದಲ್ಲಿದ್ದು, ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts