More

    ಹಿಂದು ದೇವಾಲಯಕ್ಕೆ ಜಮೀನು ದಾನ ಕೊಟ್ಟ ಮುಸ್ಲಿಂ ಕುಟುಂಬ!

    ಕಾರ್ಗಲ್​ (ಶಿವಮೊಗ್ಗ): ಪಟ್ಟಣದ ಜೋಗ ರಸ್ತೆಯ ತಳಕಳಲೆ ವೃತ್ತದಲ್ಲಿ ಹಿಂದುಗಳು ಪೂಜಿಸಿಕೊಂಡು ಬರುತ್ತಿರುವ ಭೂತಪ್ಪನ ಗುಡಿಗೆ ಮೊಹಿದ್ದೀನ್​ ತವಕ್ಕಲ್​ ಕುಟುಂಬ 25*35 ಅಡಿ ನಿವೇಶನ ದಾನ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದೆ.

    ತವಕ್ಕಲ್​ ಕುಟುಂಬದ ಎರಡನೇ ತಲೆಮಾರಿನ ಹಸನ್​ ಹಾಗೂ ಖಾದರ್​ ಮತ್ತು ಮೂರನೇ ತಲೆಮಾರಿನ ಯುವಕರಾದ ಕರೀಂ, ರಫೀಕ್​ ಅವರು ಬಸಪ್ಪನ ಮಗ ಉಮೇಶ್​, ಲಕ್ಷ್ಮಣನ ಮಗ ಗೋವಿಂದ ಹಾಗೂ ರಾಮಣ್ಣನ ಮಗ ರವಿಚಂದ್ರ ಅವರ ಹೆಸರಿಗೆ ಮಾಡಿದ ದಾನಪತ್ರವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರಮುಖರಾದ ವಿ.ಸಂತೋಷ್​ಕುಮಾರ್​, ಎಚ್​.ಎಸ್​.ಸಾದಿಕ್​ ಉಪಸ್ಥಿತರಿದ್ದರು. ಇದನ್ನೂ ಓದಿರಿ ‘ಬಿಜೆಪಿಯಲ್ಲಿ ಯಡಿಯೂರಪ್ಪಗೆ ಮತ್ತೊಬ್ಬ ಪ್ರತಿಸ್ಪರ್ಧಿಯೇ ಇಲ್ಲ’

    ಹಿಂದು ದೇವಾಲಯಕ್ಕೆ ಜಮೀನು ದಾನ ಕೊಟ್ಟ ಮುಸ್ಲಿಂ ಕುಟುಂಬ!ಕುಂಜಿ ಮೊಹಿದ್ದೀನ್​ ಅವರ ತವಕ್ಕಲ್​ ಕುಟುಂಬ ಸುಮಾರು 75 ವರ್ಷಗಳಿಂದ ಪಾರಂಪರಾಗತವಾಗಿ ಅನುಭವಿಸಿಕೊಂಡು ಬಂದ ಒಟ್ಟು ಆಸ್ತಿ ಇದು. ಅವರ ಮಕ್ಕಳು, ಮೊಮ್ಮಕ್ಕಳು ಇಲ್ಲೇ ನೆಲೆಸಿದ್ದಾರೆ. ಅಂದು ಇದೇ ಆಸುಪಾಸಿನಲ್ಲಿ ವಾಸವಿದ್ದ ರಾಮಣ್ಣ, ಬಸಪ್ಪ ಹಾಗೂ ಲಕ್ಷ್ಮಣ ಈ ಮೂವರು ಕುಟುಂಬಸ್ಥರು ಇದೇ ಜಾಗದಲ್ಲಿ ಭೂತಪ್ಪ ದೇವರ ಇರುವಿಕೆಯನ್ನು ದೈವಿ ಪ್ರಶ್ನೆಯಲ್ಲಿ ಕಂಡುಕೊಂಡು ಆಲದಮರ, ಅರಳಿಮರ ಹಾಗೂ ಬಸುರಿ ಮರವನ್ನು ನೆಟ್ಟು ಭೂತಪ್ಪನ ಕಲ್ಲಿನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು. ಅವರ ಕಾಲ ನಂತರ ಅವರ ಮಕ್ಕಳು ಪೂಜಿಸಿಕೊಂಡು ಬರುತ್ತಿದ್ದರು.

    5 ವರ್ಷಗಳ ಹಿಂದೆ ಮಳೆಗಾಳಿಗೆ ದೈವತ್ವದ ಸ್ವರೂಪ ಹೊಂದಿದ್ದ ಮರಗಳು ಬಿದ್ದು ಹೋದವು. ಕೆಲವು ಸಮಯ ಪೂಜಾ ವಿಧಿವಿಧಾನ ಸ್ಥಗಿತಗೊಂಡಿತ್ತು. ಇದನ್ನು ಗಮನಿಸಿದ ತವಕ್ಕಲ್​ ಕುಟುಂಬಸ್ಥರು ತಮ್ಮ ಸ್ವಾಧೀನದಲ್ಲಿದ್ದ ಭೂತಪ್ಪ ದೇವಾಲಯವಿರುವ ಭೂಮಿಯನ್ನು ಪೂಜಾ ವಿಧಿವಿಧಾನ ಮತ್ತು ಆರಾಧನೆ ಮುಂದುವರಿಸಿಕೊಂಡು ಹೋಗುವ ಉದ್ದೇಶದಿಂದ ಮತ್ತು ಧಾಮಿರ್ಕ ಐಕ್ಯತೆ, ಸಮಾಜದಲ್ಲಿ ಭಾವೈಕತೆ ಮೂಡಿಸುವ ನಿಟ್ಟಿನಲ್ಲಿ ಭೂಮಿಯ ಹಕ್ಕನ್ನು ಈ ಮೂರು ಕುಟುಂಬಸ್ಥರಿಗೆ ಉಚಿತವಾಗಿ ದಾನಪತ್ರದ ಮೂಲಕ ಹಸ್ತಾಂತರಿಸಿದ್ದಾರೆ ಎಂದು ಮುಸ್ಲಿಂ ಸಮಾಜದ ಮುಖಂಡ ಎಚ್​.ಎಸ್​.ಸಾದಿಕ್​ ತಿಳಿಸಿದರು.

    ಕಟ್ಟಿದ್ದು ಕೇವಲ 12 ರೂಪಾಯಿ, ಬಂದದ್ದು ಬರೋಬ್ಬರಿ 2 ಲಕ್ಷ ರೂಪಾಯಿ!

    PHOTOS/ ಪೇಜ್‌-3 ಪಾರ್ಟಿಗಳಿಗೆ ಫೇಮಸ್‌ ಆಗಿತ್ತಂತೆ ಅಕುಲ್​ ಒಡೆತನದ ಈ ರೆಸಾರ್ಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts