More

    ಧಾರ್ಮಿಕ ಸೌಹಾರ್ದತೆಗೆ ಉತ್ತಮ ಉದಾಹರಣೆ ಈ ಮುಸಲ್ಮಾನರ ಮಹಾಭಾರತ!

    ಬೆಂಗಳೂರು: ಅಲ್ಲಲ್ಲಿ ಕೋಮು ಗಲಭೆಗಳ ಸುದ್ದಿ ಕೇಳಿಬರುತ್ತಿರುವ ಈ ಕಷ್ಟಕರ ಸಮಯದಲ್ಲಿ ಮುಸಲ್ಮಾನರೂ ಮಹಾಭಾರತ ನಾಟಕ ಆಡಿ ತೋರಿಸಿ ಸೌಹಾರ್ದತೆ ಮೆರೆದಿದ್ದಾರೆ. ವೀರಾಂಜನೇಯ ಕಲಾವೃಂದ ಹೆಸರಿನ ಕಲಾ ವೃಂದ ಈ ನಾಟಕ ಆಡಿಸುತ್ತಿದ್ದು ಬರುವ ಎಲ್ಲಾ ಪಾತ್ರಧಾರಿಗಳೂ ಮುಸಲ್ಮಾನರೇ ಆಗಿದ್ದಾರೆ ಎನ್ನುವುದು ವಿಶೇಷ.

    ಧಾರ್ಮಿಕ ಸೌಹಾರ್ದತೆಗೆ ಉತ್ತಮ ಉದಾಹರಣೆ ಈ ಮುಸಲ್ಮಾನರ ಮಹಾಭಾರತ!

    ಈ ನಾಟಕದ ಹೆಸರು ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂದಾಗಿದೆ. ಇದರಲ್ಲಿ ಶ್ರೀಕೃಷ್ಣನ ಪಾತ್ರಧಾರಿಯಾಗಿ ಮೊ. ಜಾವಿದ್ ಪಾಷ, ಧರ್ಮರಾಯನಾಗಿ ಅಬ್ದುಲ್ ರಜಾಕ್ ಸಾಬ್, ಭೀಮನ ಪಾತ್ರದಲ್ಲಿ ಇಬ್ಬರು ಎಜಾಜ್ ಹಾಗೂ ಮುಜೀಬ್, ಅರ್ಜುನನ  ಪಾತ್ರದಲ್ಲಿ ರಖೀಬ್ ಸಾಬ್ ಹಾಗೂ ಶಹಬಾಜ್ ಖಾನ್, ಅಭಿಮನ್ಯು ಪಾತ್ರದಲ್ಲಿ ಸುಬಾನ್, ಸಾತ್ಯಕಿ ಪಾತ್ರದಲ್ಲಿ ರಿಜ್ವಾನ್, ಬಲರಾಮನಾಗಿ ಸೈಯದ್ ಚಾಂದ್ ಪಾಷಾ, ದುರ್ಯೋಧನನಾಗಿ ನಯಾಜ್ ಖಾನ್ ಕಾಣಿಸಿಕೊಂಳ್ಳಲಿದ್ದಾರೆ.

    ಇನ್ನು ಕರ್ಣನಾಗಿ ಹಯಾತ್ ಪಾಷ, ದುಶ್ಯಾಸಬ ಹಾಗೂ ಸೈನ್ಯಾಧಿಪತಿಯಾಗಿ ಸಾದಿಕ್ ಪಾಷ, ಸೈಂಧವನಾಗಿ ಅಬ್ದುಲ್ ಖಲೀಲ್, ಶಕುನಿಯಾಗಿ ಎಸ್ ಚಾಂದ್ ಪಾಷ, ಭೀಷ್ಮನಾಗಿ ನಜೀರ್ ಸಾಬ್, ದ್ರೋಣನಾಗಿ ಜಮೀರ್ ಕಾಣಿಸಿಕೊಂಡಿದ್ದಾರೆ.

    ಈ ನಾಟಕದ ಎಲ್ಲಾ ಪ್ರಮುಖ ಪುರುಷ ಪಾತ್ರಗಳನ್ನು ಮುಸಲ್ಮಾನರೇ ನಿರ್ವಹಿಸುತ್ತಿದ್ದು ಹಿಮ್ಮೇಳದಲ್ಲಿ ಹಿಂದೂಗಳೂ ಸಾಥ್ ನೀಡುತ್ತಿದ್ದಾರೆ. ಇನ್ನು ನೃತ್ಯಕ್ಕೆ ಹಿಂದೂ ನೃತ್ಯಗಾರ್ತಿಯರು ಹೆಜ್ಜೆ ಹಾಕಲಿದ್ದಾರೆ. ಒಟ್ಟಿನಲ್ಲಿ ಬಹಳ ಅಪರೂಪದ ಧಾರ್ಮಿಕ ಸೌಹಾರ್ದತೆಯನ್ನು ಸಾರುವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts