More

    ಮಸ್ಕಿ ಬರಪೀಡಿತ ಪ್ರದೇಶವೆಂದು ಘೋಷಿಸಿ

    ಮಸ್ಕಿ: ನಲವತ್ತು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಪಟ್ಟಾ ನೀಡಬೇಕು ಹಾಗೂ ಮಸ್ಕಿ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಬೇಕು ಎಂದು ಒತ್ತಾಯಿಸಿ ಕೆಆರ್‌ಎಸ್ ಮತ್ತು ಎಐಕೆಕೆಎಸ್ ಸಂಘಟನೆಯ ಸದಸ್ಯರು ಗುರುವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಅರಮನೆ ಸುಧಾಗೆ ಮನವಿ ಸಲ್ಲಿಸಿದರು.

    ಇದನ್ನೂ ಓದಿ: ಅಕ್ರಮ-ಸಕ್ರಮಕ್ಕೆ ನಾಲ್ಕು ಸೂತ್ರ: ನಗರಾಭಿವೃದ್ಧಿ ಇಲಾಖೆಯಿಂದ ಪ್ರಸ್ತಾವನೆ; ಬೆಂಗಳೂರು ಹೊರತು ಉಳಿದೆಡೆ ಮಾತ್ರ..

    ಕರ್ನಾಟಕ ರೈತ ಸಂಘಟನೆಯ ಅಧ್ಯಕ್ಷ ಡಿ.ಎಚ್. ಪೂಜಾರ್ ಮಾತನಾಡಿ, 2018ರಲ್ಲಿ ಅಕ್ರಮ-ಸಕ್ರಮ ಕಾಯ್ದೆ ಫಾರಂ 57ರ ಅಡಿ ಅರ್ಜಿಸಲ್ಲಿಸಲು ಅಂದಿನ ಸಿದ್ದರಾಮಯ್ಯ ಸರ್ಕಾರ ನಿರ್ಧರಿಸಿತ್ತು. ಸರ್ಕಾರಿ ಭೂಮಿಯಲ್ಲಿ ಸಾಗುವಳಿದಾರರು ಸತತ 5 ವರ್ಷಗಳಿಂದ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ ಭೂ ಮಂಜೂರಾತಿಗೆ ಹೆಚ್ಚಿನ ಮುತುವರ್ಜಿ ವಹಿಸಲಿಲ್ಲ. ಈ ಹಿನ್ನೆಲೆ ರಾಜ್ಯಾದ್ಯಂತ ಲಕ್ಷಾಂತರ ಸಾಗುವಳಿದಾರರ ಅರ್ಜಿಗಳು ದೂಳು ತಿನ್ನುತ್ತಿವೆ.

    ಲ್ಯಾಂಡ್ ಗ್ರಾಂಟ್ ಕಮಿಟಿ ರಚಿಸಿ

    ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರ ಅತ್ಯಂತ ತ್ವರಿತಗತಿಯಲ್ಲಿ ಲ್ಯಾಂಡ್ ಗ್ರಾಂಟ್ ಕಮಿಟಿ ರಚಿಸಿ, ಎಲ್ಲ ಸಾಗುವಳಿದಾರರಿಗೆ ಭೂ ಮಂಜೂರಾತಿ ಕೊಡಬೇಕು. ಅಲ್ಲದೇ ಈ ಹಿಂದೆ ಅನಗತ್ಯವಾಗಿ ತಿರಸ್ಕೃತಗೊಂಡ ಅರ್ಜಿಗಳನ್ನು ಪುನಃ ಪರಿಶೀಲನೆಗೆ ಒಳಪಡಿಸಿ ಮಂಜೂರಾತಿ ಕೊಡಬೇಕು ಎಂದು ಒತ್ತಾಯಿಸಿದರು. ತಾಲೂಕಿನಲ್ಲಿ ಮುಂಗಾರು ಮಳೆ ಎರಡು ತಿಂಗಳು ತಡವಾಗಿದ್ದರಿಂದ ಗ್ರಾಮೀಣ ಭಾಗದಲ್ಲಿ ನಿರುದ್ಯೋಗ ಮತ್ತು ಹಸಿವಿನ ಸಮಸ್ಯೆಯನ್ನು ಜನರು ಎದುರಿಸುತ್ತಿದ್ದಾರೆ ಎಂದರು.


    ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ಸಿದ್ದನಗೌಡ ತುರ್ವಿಹಾಳ ಮಾತನಾಡಿ, ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವ ಎಲ್ಲ ರೈತರಿಗೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಬೇಕು. ಮಸ್ಕಿ ತಾಲೂಕನ್ನು ಬರ ಪೀಡಿತ ಪ್ರದೇಶವೆಂದು ಘೋಷಣೆ ಮಾಡುವಂತೆ ಒತ್ತಾಯಿಸುವಂತೆ ಶಾಸಕರ ಗಮನಕ್ಕೆ ತರಲಾಗುವುದು. ಸೋಮನಾಥ ನಗರ ಸೇರಿ ಬಳಗಾನೂರಿನಲ್ಲಿ ಬಡಜನರಿಗೆ ಹಕ್ಕು ಪತ್ರಗಳ ಸಮಸ್ಯೆ ಇದೆ. ಆದ್ದರಿಂದ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಇಂತಹ ಸಮಸ್ಯೆಗಳಿರುವುದರಿಂದ ಎಲ್ಲರಿಗೂ ಹಕ್ಕು ಪತ್ರಗಳನ್ನು ವಿತರಿಸುವಂತೆ ಪ್ರಯತ್ನ ಮಾಡಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts