More

    ದಾಖಲಾತಿ ಪರಿಶೀಲಿಸಲು ಬಳಲಿದ ಸಂಗೀತ ವಿದ್ವಾಂಸರು

    ಬೆಂಗಳೂರು ಮೈಸೂರಿನ ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯದ ಸಂಗೀತ, ನೃತ್ಯ ಮತ್ತು ತಾಳವಾದ್ಯ ಪರೀಕ್ಷೆಗಳ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆಗೆ ಸರಿಯಾದ ಮೂಲಸೌಕರ್ಯ ಏರ್ಪಡಿಸದಿರುವುದಕ್ಕೆ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿರುವ ಪ್ರದರ್ಶನಕಲಾ ವಿಭಾಗದಲ್ಲಿ ಮಂಗಳವಾರ ದಾಖಲಾತಿ ಪರಿಶೀಲನೆ ಮಾಡಲಾಯಿತು. ದಾಖಲಾತಿ ಪರಿಶೀಲನೆಗೆ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಹಿರಿಯ ನಾಗರಿಕರನ್ನು ಗಂಟೆಗಟ್ಟಲೆ ಬಿಸಿಲಿನಲ್ಲಿ ಸಾಲಿನಲ್ಲಿ ನಿಲ್ಲಿಸಿ ಗಂಟೆ ಗಟ್ಟಲೇ ಕಾಯುವಂತೆ ಮಾಡಿದರು. ಟೋಕನ್ ನೀಡುವಲ್ಲೂ ಶಿಸ್ತು ಪ್ರದರ್ಶನ ಇರಲಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.

    ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ೀಕ್ಷೆಯನ್ನು ರ‌್ಯಾ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುತ್ತಿತ್ತು. ಆದರೆ, ಹೊಸದಾಗಿ ಸಂಗೀತ ವಿಶ್ವವಿದ್ಯಾಲಯ ಆರಂಭವಾದ ಮೇಲೆ ಇದರ ಜವಾಬ್ದಾರಿಯನ್ನು ಸಂಗೀತ ವಿವಿಗೆ ನೀಡಲಾಯಿತು. ಈ ಸಂಗೀತ ವಿವಿ ಈ ವರ್ಷ ವಾರ್ಷಿಕ ಪರೀಕ್ಷೆ ನಡೆಸುವ ಮುನ್ನ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳ ದಾಖಲಾತಿ ಪರಿಶೀಲನೆ ನಡೆಸುವುದಕ್ಕೆ ಮುಂದಾಗಿದೆ. ಇದಕ್ಕಾಗಿ ನೂರಾರು ಸಂಗೀತ ವಿದ್ವಾಂಸರು ಜ್ಞಾನಭಾರತಿ ಕ್ಯಾಂಪಸ್‌ಗೆ ಆಗಮಿಸಿದ್ದರು. ಆದರೆ, ಇಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಟೋಕನ್ ನೀಡದೇ ಇದ್ದರಿಂದ ಬಂದವರ ಅವರಿಗೆ ನೇರವಾಗಿ ಪ್ರವೇಶ ಕಲ್ಪಿಸಲಾಯಿತು.

    ಪ್ರತಿ ವರ್ಷ ಸಂಗೀತ ಪರೀಕ್ಷೆಯನ್ನು 12ರಿಂದ 14 ಸಾವಿರ ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಮಂಡಳಿಯು ಪರೀಕ್ಷೆ ನಡೆಸುವ ವೇಳೆಯಲ್ಲಿ 65 ದಾಖಲಾತಿ ಪರಿಶೀಲನಾ ಕೇಂದ್ರಗಳನ್ನು ರಚಿಸುತ್ತಿತ್ತು. ಆದರೆ, ಈ ಬಾರಿ ವಲಯವಾರು ಸ್ಥಳಗಳಲ್ಲಿ ಮಾತ್ರ ದಾಖಲಾತಿ ಪರಿಶೀಲನೆ ನಡೆಸುತ್ತಿರುವುದರಿಂದ ಸಮಸ್ಯೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts