More

    ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಗೀತ ಚಿಕಿತ್ಸೆ ಪರಿಹಾರ

    ಪಂಕಜ ಕೆ.ಎಂ. ಬೆಂಗಳೂರು

    ಸಂಗೀತ ಚಿಕಿತ್ಸೆ ಮತ್ತು ಮಾನಸಿಕ ಆರೋಗ್ಯದ ನಡುವೆ ಬಲವಾದ ಸಂಬಂಧವಿದೆ. ಇದು ಎಲ್ಲಾ ವಯೋಮಾನದವರ ವಿವಿಧ ದೈಹಿಕ, ಆಧ್ಯಾತ್ಮಿಕ, ಸಾಮಾಜಿಕ ಮತ್ತು ಭಾವನಾತ್ಮಕ ಅಗತ್ಯಗಳನ್ನು ಪರಿಹರಿಸಲು ಸಹಕಾರಿಯಾಗಿದೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ಸಂಸ್ಥೆ (ನಿಮ್ಹಾನ್ಸ್)ಯ ಸುನಾದ ಆಟ್ಸ್ ೌಂಡೇಷನ್ ಸಹಯೋಗದಲ್ಲಿ ಮಾನಸಿಕ ಅಸ್ವಸ್ಥತೆ ಹೊಂದಿರುವ ಮಕ್ಕಳಿಗೆ ನೀಡಿದ ಸಂಗೀತ ಚಿಕಿತ್ಸೆ ಉತ್ತಮ ಲಿತಾಂಶ ನೀಡಿದೆ.

    ಮಕ್ಕಳ ಮಾನಸಿಕ ಸಮಸ್ಯೆಗೆ ಸಂಗೀತ ಚಿಕಿತ್ಸೆಯ ಪರಿಣಾಮ ಅರಿಯಲು ನಿಮ್ಹಾನ್ಸ್‌ನ ನರ್ಸಿಂಗ್ ವಿಭಾಗವು ಎಡಿಎಚ್‌ಡಿ (ಅಠಿಠಿಛ್ಞಿಠಿಜಿಟ್ಞ ಈಛ್ಛಿಜ್ಚಿಜಿಠಿ ಛ್ಟಿಚ್ಚಠಿಜಿಜಿಠಿ ಜಿಟ್ಟಛ್ಟಿ), ಸಿಡಿ (ಇಟ್ಞಛ್ಠ್ಚಠಿ ಈಜಿಟ್ಟಛ್ಟಿ)ಮತ್ತು ಒಡಿಡಿ (ಟಜಿಠಿಜಿಟ್ಞಚ್ಝ ಈಛ್ಛಿಜಿಚ್ಞಠಿ ಈಜಿಟ್ಟಛ್ಟಿ) ಸಮಸ್ಯೆಗಳನ್ನು ಹೊಂದಿರುವ 6-12 ವಯೋಮಾನದ 40 ಮಕ್ಕಳನ್ನು ಆಯ್ಕೆ ಮಾಡಿಕೊಂಡು ಸಂಗೀತ ಚಿಕಿತ್ಸೆಯ ಅಧ್ಯಯನ ನಡೆಸಿದೆ.

    ಮೊದಲಿಗೆ ಸಂಗೀತ ಚಿಕಿತ್ಸೆ ಪರಿಣಾಮ ಅರಿಯಲು ಈ 40 ಮಕ್ಕಳಲ್ಲಿ ಪ್ರತಿ ಗುಂಪಿನಲ್ಲಿ ತಲಾ 20 ಮಕ್ಕಳಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಯಿತು. ಒಂದು ಗುಂಪಿನ ಮಕ್ಕಳಿಗೆ ಮಾತ್ರ ಸಂಗೀತ ಚಿಕಿತ್ಸೆ ನೀಡಲಾಯಿತು. ಮತ್ತೊಂದು ಗುಂಪಿನ ಮಕ್ಕಳಿಗೆ ಎಂದಿನಂತೆ ಸಾಮಾನ್ಯ ಚಿಕಿತ್ಸೆಯನ್ನೇ ಮುಂದುವರೆಸಲಾಯಿತು.

    ಚಿಕಿತ್ಸೆ ಹೇಗೆ?
    ಸಂಗೀತ ಚಿಕಿತ್ಸೆಗೆ ಆಯ್ಕೆಯಾದ ಗುಂಪಿನ 20 ಮಕ್ಕಳಿಗೆ ಮೂರು ವಾರಗಳ ಕಾಲ ಪ್ರತಿ ದಿನ ಬೆಳಗ್ಗೆ 25 ನಿಮಿಷ ಹಾಗೂ ಸಂಜೆ 25 ನಿಮಿಷಗಳ ಕಾಲ ಸಂಗೀತ ಕೇಳಿಸಲಾಯಿತು. ಈ 20 ಮಕ್ಕಳಲ್ಲಿ ಎಡಿಎಚ್‌ಡಿ, ಸಿಡಿ ಮತ್ತು ಒಡಿಡಿ ಸಮಸ್ಯೆ ಇರುವ ಮಕ್ಕಳನ್ನು ಪ್ರತ್ಯೇಕಿಸಿ ನಿಮ್ಹಾನ್ಸ್ ಆವರಣದಲ್ಲಿರುವ ಮ್ಯೂಸಿಕ್ ರೂಂನಲ್ಲಿ ಕೂರಿಸಿ ಇಲ್ಲವೇ ನಿದ್ರೆ ಮಾಡಲು ಬಯಸುವ ಮಕ್ಕಳನ್ನು ಹಾಗೇ ಮಲಗಿಸಿ ಸಂಗೀತ ಕೇಳಿಸಲಾಯಿತು.

    ಯಾವ ರೀತಿಯ ಸಂಗೀತ?
    ಭಾರತೀಯ ಶಾಸೀಯ ಸಂಗೀತದಲ್ಲಿ ಕರ್ನಾಟಿಕ್ ಸಂಗೀತ (ದಕ್ಷಿಣ ಭಾರತದ ರಾಗಗಳು) ಹಾಗೂ ಹಿಂದೂಸ್ತಾನಿ ಸಂಗೀತ (ಉತ್ತರ ಭಾರತದ ರಾಗಗಳು) ಪ್ರಸಿದ್ಧವಾಗಿವೆ. ಈ ಅಧ್ಯಯನಕ್ಕಾಗಿ ಹಿಂದೂಸ್ತಾನಿ ಸಂಗೀತ ಆಯ್ಕೆ ಮಾಡಿಕೊಳ್ಳಲಾಯಿತು. ಇದಕ್ಕಾಗಿ ಪ್ರಸಿದ್ಧ ಹಿಂದೂಸ್ತಾನಿ ಸಂಗೀತ ಕ್ಷೇತ್ರದ ಪ್ರಸಿದ್ಧ ಕಲಾವಿದ ಡಾ. ನಾಗರಾಜ ರಾವ್ ಹವಾಲ್ದಾರ ಅವರು ಸಂಗೀತ ಚಿಕಿತ್ಸೆಗೆ ಪೂರಕವಾಗಿ ಪ್ರಕೃತಿ, ಸಾಮರಸ್ಯ ಕೇಂದ್ರೀಕರಿಸುವ 8 ರಾಗ ( ಮಿಶ್ರಾ ಖಮಾಜ್ – ಕಲ್ಯಾಣ್, ಗೋರಖ್ ಕಲ್ಯಾಣ್, ಭೈರವ್, ಬಿಹಾಗ್, ಮಿಯಾ-ಮಲ್ಹಾರ್, ಮಲ್ಕೌನ್ಸ್, ಮಾರ್ವಾ ಮತ್ತು ದೇಶ್)ಗಳನ್ನು ಒಳಗೊಂಡ 45 ನಿಮಿಷಗಳ ಸಿಡಿಯನ್ನು ಸಿದ್ಧಪಡಿಸಿಕೊಟ್ಟರು ಎಂದು ನಿಮ್ಹಾನ್ಸ್‌ನ ನರ್ಸಿಂಗ್ ವಿಭಾಗದ ಅಡಿಷನಲ್ ಪ್ರೊೆಸರ್ ಡಾ. ರಾಧಾಕೃಷ್ಣನ್ ಗೋವಿಂದನ್ ತಿಳಿಸಿದ್ದಾರೆ.

    ಅಧ್ಯಯನ ಹೇಗೆ?
    ಹೀಗೆ ನಿತ್ಯ ಸಂಗೀತ ಕೇಳಿದ ಮಕ್ಕಳಲ್ಲಿ ಆಗಿರುವ ಬದಲಾವಣೆಗಳನ್ನು ಅರಿಯಲು, ಸಿಜಿಎಎಸ್ (ಇಜ್ಝಿಛ್ಟಛ್ಞಿ ಎ್ಝಟಚಿಚ್ಝ ಅಛಿಞಛ್ಞಿಠಿ ಖ್ಚಚ್ಝಛಿ) ಮಕ್ಕಳ ನಡವಳಿಕೆಯನ್ನು ಅರಿಯಲಾಯಿತು. ಈ ವೇಳೆ ಮಕ್ಕಳಲ್ಲಿ ಕೆಟ್ಟ ವರ್ತನೆಗಳು ಕಡಿಮೆಯಾಗಿ, ಒಳ್ಳೆಯ ವರ್ತನೆಗಳು ಹೆಚ್ಚಾಗಿರುವುದು ಗಮನಕ್ಕೆ ಬಂದಿತು. ನಂತರ ಎನ್‌ಸಿಬಿಆರ್‌ಎ್ – ಟಿಐಕ್ಯೂ (ಘೆಜಿಟ್ಞಜಛ್ಟಿ ್ಚಜ್ಝಿ ಚಿಛಿಜಿಟ್ಟ ್ಟಠಿಜ್ಞಿಜ ್ಛ್ಟಟಞ ಠಿಜ್ಚಿಚ್ಝ ಐಕಿ) ಅವರ ಬುದ್ಧಿಮತ್ತೆ ಉತ್ತಮವಾಗಿತ್ತು. ಬಳಿಕ ವಿಎಎಎಸ್ (್ಖಜಿಠ್ಠಚ್ಝ ಅ್ಞಚ್ಝಟಜ್ಠಛಿ ಖ್ಚಚ್ಝಛಿ)ಅಂದರೆ ಪೋಷಕರಿಂದ ಮಕ್ಕಳಲ್ಲಿನ 10 ಅಂಶಗಳ ಬದಲಾವಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಯಿತು. ಹೀಗೆ ಮೂರು ರೀತಿಯ ಸಮಸ್ಯೆ ಹೊಂದಿರುವ ಮಕ್ಕಳಿಗೆ ಚಿಕಿತ್ಸೆ ನೀಡಿ, ಮೂರು ರೀತಿಯ ಮಾನದಂಡಗಳನ್ನು ಅನುಸರಿಸುವ ಮೂಲಕ ಅಧ್ಯಯನ ನಡೆಸಲಾಯಿತು. ಒಟ್ಟಾರೆಯಾಗಿ ಮಕ್ಕಳಲ್ಲಿ ಮಾನಸಿಕ ಹಾಗೂ ಸಾಮಾಜಿಕ ವರ್ತನೆಗಳಲ್ಲಿ ಉತ್ತಮ ಸುಧಾರಣೆ ಕಂಡುಬಂದಿತು ಎಂದು ಹೇಳಿದರು.

    ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಗೀತ ಚಿಕಿತ್ಸೆ ಪರಿಹಾರಇದು ಕೇವಲ ಒಂದು ಬಾರಿ ಸೀಮಿತ ಮಕ್ಕಳಲ್ಲಿ ನಡೆಸಿರುವ ಅಧ್ಯಯನ. ಆದರೆ ಚಿಕಿತ್ಸೆಯ ಉತ್ತಮ ಪ್ರಯೋಜನ ಹಾಗೂ ನಿಖರತೆ ತಿಳಿಯಲು ಇನ್ನೂ ದೊಡ್ಡ ಮಟ್ಟದಲ್ಲಿ ಇದರ ಮುಂದುವರಿದ ಅಧ್ಯಯನ ನಡೆಸುವ ಅಗತ್ಯವಿದೆ. ಆಗ ನಿಖರವಾದ ಲಿತಾಂಶ ಕಾಣಲು ಸಾಧ್ಯ.
    – ಡಾ. ರಾಧಾಕೃಷ್ಣನ್ ಗೋವಿಂದನ್, ನರ್ಸಿಂಗ್ ವಿಭಾಗದ ಅಡಿಷನಲ್ ಪ್ರೊೆಸರ್, ನಿಮ್ಹಾನ್ಸ್

    ಮಾನಸಿಕ ಆರೋಗ್ಯ ಸಮಸ್ಯೆಗೆ ಸಂಗೀತ ಚಿಕಿತ್ಸೆ ಪರಿಹಾರನಾನು ಕಲಿತ ಸಂಗೀತ ಕೇವಲ ವೇದಿಕೆಗಳಲ್ಲಿ ಕಾರ್ಯಕ್ರಮಕ್ಕೆ ಸೀಮಿತವಾಗದೆ, ಮಾನಸಿಕ ಆರೋಗ್ಯ ಸುಧಾರಣೆಗೆ ಚಿಕಿತ್ಸೆಯಾಗಿ ಬಳಕೆ ಆಗುತ್ತಿರುವುದು ಸಂತಸ ತಂದಿದೆ. ಇಂತಹ ಒಂದು ಅಧ್ಯಯನ ಚುಟುವಟಿಕೆಗೆ ನನ್ನ ಸಂಗೀತ ನೆರವಾಯಿತು. ಇದಕ್ಕೂ ಮೊದಲು ತಿಹಾರ್ ಜೈಲಿನ ಕೈದಿಗಳ ಮನ ಪರಿವರ್ತನೆಗಾಗಿ, ಅಮೆರಿಕಾದ ವೃದ್ಧಾಶ್ರಮಗಳಲ್ಲಿರುವ ವೃದ್ಧರ ಮಾನಸಿಕ ನೆಮ್ಮದಿಗಾಗಿ ಹೀಗೆ ಹಲವು ಕಾರಣಗಳಿಗೆ ಸಂಗೀತ ಕಾರ್ಯಕ್ರಮ ನೀಡಿದ್ದೇನೆ.
    – ಡಾ. ನಾಗರಾಜ ರಾವ್ ಹವಾಲ್ದಾರ, ಹಿಂದೂಸ್ತಾನಿ ಸಂಗೀತ ಗಾಯಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts