More

    ಸಂಗೀತಕ್ಕಿದೆ ಮನಶ್ಯಾಂತಿ ನೀಡುವ ಶಕ್ತಿ

    ಅಳವಂಡಿ: ಭಾರತ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ, ನೃತ್ಯ, ನಾಟಕ, ಜಾನಪದ ಕ್ಷೇತ್ರದಲ್ಲಿ ಶ್ರೀಮಂತವಾಗಿದೆ. ಸಂಗೀತಕ್ಕೆ ಮನಸಿಗೆ ನೆಮ್ಮದಿ ನೀಡುವ ಶಕ್ತಿ ಇದೆ ಎಂದು ಸುಗಮ ಸಂಗೀತ ಕಲಾವಿದ ರಾಮಪ್ಪ ಪೂಜಾರ ತಿಳಿಸಿದರು.

    ಇದನ್ನೂ ಓದಿ: ದ.ಕನ್ನಡ, ಉಡುಪಿ ಜಿಲ್ಲಾ ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ಅಧ್ಯಕ್ಷರಾಗಿ ದೀಪಕ್ ರಾಜ್ ಉಳ್ಳಾಲ್

    ಸಮೀಪದ ಬೋಚನಹಳ್ಳಿ ಗ್ರಾಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಗತ್‌ಸಿಂಗ್ ಯುವಕ ಸಂಘ ಸಂಯುಕ್ತಾಶ್ರಯದಲ್ಲಿ ನಡೆದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಈಚೆಗೆ ಮಾತನಾಡಿದರು.

    ದೈಹಿಕ ಚಟುವಟಿಕೆ ದೇಹಕ್ಕೆ ಶಕ್ತಿ ನೀಡಿದರೆ, ಸಂಗೀತ, ಸಾಂಸ್ಕೃತಿಕ ಚಟುವಟಿಕೆ ಮನಸ್ಸನ್ನು ಉಲ್ಲಾಸಿತಗೊಳಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಯುವಕರು ಮೋಬೈಲ್‌ನಲ್ಲಿ ಹೆಚ್ಚು ಕಾಲ ಕಳೆಯುತ್ತಿದ್ದು. ಅವಶ್ಯಕತೆಗೆ ತಕ್ಕಂತೆ ಬಳಸಿ ಸಂಗೀತ ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದರು.

    ಜಾನಪದ ಸಂಗೀತ ಕಲಾವಿದ ಸಣ್ಣ ಹನುಮಪ್ಪ ತಂಬ್ರಳ್ಳಿ, ಸುಗಮ ಸಂಗೀತ ಕಲಾವಿದ ರಾಮಪ್ಪ ಪೂಜಾರ, ಹಾರ್ಮೋನಿಯಂ ನಾಗನಗೌಡ ಪೋಲಿಸಪಾಟೀಲ, ತಬಲಾ ಬಾಷುಸಾಬ ಹಿರೇಮನ್ನಾಪುರ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.

    ಪ್ರಮುಖರಾದ ಹನುಮೇಶ, ಜಗದೀಶ ಚಿನ್ನೂರ, ನಿಂಗರಾಜ ಆವೋಜಿ, ಹನುಮೇಶ ಆವೋಜಿ, ಆನಂದ ಶ್ಯಾವಣ್ಣವರ, ಸಣ್ಣಹನುಮಪ್ಪ, ನಾಗರಾಜ, ಸೋಮಯ್ಯ, ಗವಿಸಿದ್ದಪ್ಪ, ಸುರೇಶ, ಯಮನೂರಪ್ಪ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts