More

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್​ಗೆ ಬಲಿ; ಕಿರಣ್​ ಜನ್ಯ ಇನ್ನಿಲ್ಲ…

    ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮೇಲಿಂದ ಮೇಲೆ ಕೋವಿಡ್​ ಸಾವಿನ ಸುದ್ದಿಗಳು ಬಂದೆರಗುತ್ತಿದ್ದು, ಸಂಬಂಧಪಟ್ಟವರು, ಸಿನಿಮಾ ಕ್ಷೇತ್ರದವರನ್ನಷ್ಟೇ ಅಲ್ಲದೆ ಸಿನಿಪ್ರಿಯರನ್ನು ಕೂಡ ನೊಂದುಕೊಳ್ಳುವಂತೆ ಮಾಡುತ್ತಿದೆ. ಇಂದು ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರ ಸಹೋದರ ಕೋವಿಡ್-19 ಸೋಂಕಿನಿಂದಾಗಿ ಮೃತಪಟ್ಟಿದ್ದು, ಚಿತ್ರರಂಗಕ್ಕೆ ಮತ್ತೊಂದು ಕರೊನಾ ಆಘಾತ ಉಂಟಾಗಿದೆ.

    ಸಹೋದರ ಕಿರಣ್​ ಜನ್ಯ (49) ಕೋವಿಡ್ ಸೋಂಕಿಗೆ ಬಲಿಯಾದ್ದನ್ನು ಖುದ್ದು ಅರ್ಜುನ್ ಜನ್ಯ ಹೇಳಿಕೊಂಡಿದ್ದಾರೆ. ಕೋವಿಡ್​ನಿಂದಾಗಿ ನಾನು ಸಹೋದರನನ್ನು ಕಳೆದುಕೊಂಡಿದ್ದೇನೆ ಎಂಬ ಮಾಹಿತಿ ಹಂಚಿಕೊಂಡಿರುವ ಅರ್ಜುನ್, ‘ಕಿರಣ್ ನೀನಿಲ್ಲದ ನನ್ನ ನೋವನ್ನು ಹೇಗೆ ವ್ಯಕ್ತಪಡಿಸಬೇಕು ಅಂತಲೇ ತಿಳಿಯುತ್ತಿಲ್ಲ. ನನ್ನ ಉಸಿರು ಇರುವವರೆಗೂ ನೀನು ನನ್ನ ಉಸಿರಿನಲ್ಲಿರುತ್ತಿ’ ಎಂಬುದಾಗಿ ದುಃಖ ವ್ಯಕ್ತಪಡಿಸಿದ್ದಾರೆ.

    ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸಹೋದರ ಕೋವಿಡ್​ಗೆ ಬಲಿ; ಕಿರಣ್​ ಜನ್ಯ ಇನ್ನಿಲ್ಲ...
    ಸಹೋದರ ಪ್ರೀತಿಯ ಸಂಗ್ರಹ ಚಿತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts