More

    ದೇಶಕ್ಕೆ ರಿಲೀಫ್​ ಸಿಕ್ಕರೂ ಮುಂಬೈ, ಪುಣೆ ನಗರಗಳಿಗಿಲ್ಲ ರಿಲೀಫ್​

    ಮುಂಬೈ: ಮಹಾರಾಷ್ಟ್ರ ಸರ್ಕಾರ ಮುಂಬೈ ಮತ್ತು ಪುಣೆಯಲ್ಲಿ ಕರೊನಾ ಸೋಂಕು ಹರಡದಂತೆ ಅದೆಷ್ಟೇ ಕ್ರಮ ಕೈಗೊಂಡರೂ ಹರಡುವಿಕೆ ತಡೆಗಟ್ಟಲು ಸಾಧ್ಯವಾಗುತ್ತಿಲ್ಲ. ಮುಂಬೈನಲ್ಲಿ ಶನಿವಾರದವರೆಗೆ 8,172 ಜನರಿಗೆ ಸೋಂಕು ತಗುಲಿದ್ದು, 322 ಮಂದಿ ಮೃತಪಟ್ಟಿದ್ದಾರೆ. ಪುಣೆಯಲ್ಲಿ 1,980 ಜನರು ಸೋಂಕು ಪೀಡಿತರಾಗಿದ್ದು, 413 ಮಂದಿ ಮೃತಪಟ್ಟಿದ್ದಾರೆ.

    ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್​ಡೌನ್​ ಸಡಿಲಗೊಂಡರೂ ಈ ಎರಡು ನಗರಗಳಲ್ಲಿ ಲಾಕ್​ಡೌನ್​ ಅನ್ನು ಮತ್ತಷ್ಟು ಕಠಿಣಗೊಳಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

    ಇದನ್ನೂ ಓದಿ: ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!

    ಮುಂಬೈ ಮೆಟ್ರೋಪಾಲಿಟನ್​ ಮತ್ತು ಪುಣೆ ಮೆಟ್ರೋಪಾಲಿಟನ್ ವಲಯದಲ್ಲಿ ಸೋಮವಾರದಿಂದ ಖಾಸಗಿ ಕಂಪನಿಗಳು ತೆರೆಯದಂತೆ ನಿರ್ಬಂಧ ಹೇರಲಾಗಿದೆ. ಕೆಂಪು ವಲಯ ವ್ಯಾಪ್ತಿಗೆ ಬರುವ ಪ್ರದೇಶಗಳಲ್ಲಿ ಶೇ.33 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಆದರೂ ಮುಂಬೈ ಮತ್ತು ಪುಣೆ ನಗರಗಳಿಗೆ ಸೀಮಿತವಾಗಿ ಈ ನಿಯಮವನ್ನು ಜಾರಿಗೊಳಿಸದಿರಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ.

    ಸರ್ಕಾರಿ ಕಚೇರಿಗಳಲ್ಲಿ ಕೂಡ ಕೇಂದ್ರ ಪ್ರತಿಪಾದಿಸಿರುವಂತೆ ಶೇ.33ರ ಬದಲು ಕೇವಲ ಶೇ.5 ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಡಲಾಗಿದೆ. ಇದಕ್ಕೂ ಮುಖ್ಯವಾಗಿ ಉಭಯ ನಗರಗಳಲ್ಲಿ ಕಾರು ಮತ್ತು ದ್ವಿಚಕ್ರವಾಹನಗಳ ಬಳಕೆಯನ್ನು ಸಂಪೂರ್ಣವಾಗಿ, ಕಟ್ಟುನಿಟ್ಟಾಗಿ ನಿರ್ಬಂಧಿಸಲಾಗುತ್ತಿದೆ.

    ಇದನ್ನೂ ಓದಿ: ಸ್ಯಾನಿಟೈಸರ್​ನಿಂದ ಮದ್ಯ ತಯಾರಿಸಿದ… ಮುಂದೆ ಏನಾಯಿತು?

    ಇನ್ನುಳಿದಂತೆ ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿರುವ ಪ್ರದೇಶಗಳಲ್ಲಿ ಮಾತ್ರ ಕೇಂದ್ರ ಸರ್ಕಾರ ಹೇಳಿರುವಂತೆ ಆರ್ಥಿಕ ಚಟುವಟಿಕೆಗಳು ಆರಂಭವಾಗಲಿವೆ. ಕಾರುಗಳಲ್ಲಿ ಚಾಲಕ ಅಲ್ಲದೆ, ಇಬ್ಬರು ಪ್ರಯಾಣಿಕರು, ದ್ವಿಚಕ್ರವಾಹನದಲ್ಲಿ ಒಬ್ಬ ಸವಾರ ಮಾತ್ರ ಸಂಚರಿಸಲು ಅವಕಾಶ ಮಾಡಿಕೊಡಲಾಗುತ್ತಿದೆ.

    ಕಂಟೈನ್​ಮೆಂಟ್​ ವಲಯವನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಸೋಮವಾರದಿಂದ ಮದ್ಯ ಮಾರಾಟಕ್ಕೂ ಅವಕಾಶ ಮಾಡಿಕೊಡಲಾಗುತ್ತಿದೆ.

    ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಿದರೂ ಬದುಕಿಸಿಕೊಂಡ 55ರ ಮಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts