ನವದೆಹಲಿ: ವಿಮಾನದಲ್ಲಿ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜನೆ ಮಾಡಿ, ವಿಕೃತಿ ಮೆರೆದಿದ್ದ ಸಹ ಪ್ರಯಾಣಿಕನನ್ನು ದೆಹಲಿ ಪೊಲೀಸರು ನಿನ್ನೆ (ಜ.06) ರಾತ್ರಿ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಶಂಕರ್ ಮಿಶ್ರಾ ಬಂಧಿತ ಆರೋಪಿ. ಬೆಂಗಳೂರಿನ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಂಧಿಸಲಾಗಿದ್ದು, ಇಂದು (ಜ.07) ಬೆಳಗ್ಗೆ ಆರೋಪಿಯನ್ನು ದೆಹಲಿಗೆ ಪೊಲೀಸರು ಕರೆದೊಯ್ದಿದ್ದಾರೆ.
ಈ ಘಟನೆ ನವೆಂಬರ್ 26ರಂದು ನ್ಯೂಯಾರ್ಕ್ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ನಲ್ಲಿ ನಡೆದಿತ್ತು. ವಿಮಾನದಲ್ಲಿ ಊಟದ ನಂತರ ಲೈಟ್ ಡಿಮ್ ಮಾಡಿದಾಗ 70ರ ಹರೆಯದ ಸಂತ್ರಸ್ತೆಯ ಮೇಲೆ ಶಂಕರ್ ಮಿಶ್ರಾ ಜಿಪ್ ಬಿಚ್ಚಿ ಮೂತ್ರ ವಿಸರ್ಜನೆ ಮಾಡಿದ್ದ ನಂತರ ಅಲ್ಲಿಯೇ ನಿಂತು ತನ್ನ ಖಾಸಗಿ ಅಂಗಗಳನ್ನು ಪ್ರದರ್ಶಿಸುವುದನ್ನು ಮುಂದುವರೆಸಿದ್ದ. ಇತರ ಪ್ರಯಾಣಿಕರು ಗಮನಿಸಿ ಆರೋಪಿಯನ್ನು ತೆರಳುವಂತೆ ಹೇಳಿದ ಬಳಿಕವೇ ಆತ ಅಲ್ಲಿಂದ ತೆರಳಿದ್ದ. ಆರೋಪಿ ಮಾಡಿದ ಕೃತ್ಯದಿಂದ ಮಹಿಳೆಯ ಬಟ್ಟೆ, ಶೂ ಹಾಗೂ ಬ್ಯಾಗ್ ಮೂತ್ರದಿಂದ ತೊಯ್ದು ಹೋಗಿತ್ತು ಎಂದು ಸಂತ್ರಸ್ತ ಮಹಿಳೆ ಟಾಟಾ ಗ್ರೂಪ್ ಅಧ್ಯಕ್ಷ ಎನ್. ಚಂದ್ರಶೇಖರನ್ ಅವರಿಗೆ ಬರೆದಿದ್ದ ದೂರಿನಲ್ಲಿ ಉಲ್ಲೇಖಿಸಿದ್ದರು.
ಆರೋಪಿ ಶಂಕರ್ ಮಿಶ್ರಾ, ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದ ಭಾರತ ವಿಭಾಗದ ಉಪಾಧ್ಯಕ್ಷರಾಗಿದ್ದರು. ಇದೀಗ ತನ್ನ ಕೃತ್ಯದಿಂದ ಕೆಲಸವನ್ನು ಕಳೆದುಕೊಂಡಿದ್ದಾರೆ.
ಬಂಧನಕ್ಕೂ ಮುನ್ನ ಆರೋಪಿ ಶಂಕರ್ ಮಿಶ್ರಾ ವಿರುದ್ಧ ದೆಹಲಿ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಮಿಶ್ರಾ ಅವರು ಸಂಪರ್ಕಕ್ಕೆ ಸಿಗದ ಕಾರಣ ಮತ್ತು ಪೊಲೀಸ್ ತನಿಖೆಗೆ ಸಹಕರಿಸಿದ ಕಾರಣ ದೆಹಲಿ ಪೊಲೀಸರು ಅವರ ವಿರುದ್ಧ ಲುಕ್ಔಟ್ ನೋಟಿಸ್ ನೀಡಿದ್ದರು. ಮಿಶ್ರಾ ಅವರು ಮುಂಬೈ ನಿವಾಸಿಯಾಗಿದ್ದಾರೆ. ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ಆತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಶಂಕರ್ ಮಿಶ್ರಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 354 (ಮಹಿಳೆಗೆ ಆಕೆಯ ನಮ್ರತೆಯನ್ನು ಆಕ್ರೋಶಗೊಳಿಸುವ ಉದ್ದೇಶದಿಂದ ಹಲ್ಲೆ), 509 (ಪದ, ಸನ್ನೆ ಅಥವಾ ನಡತೆಯನ್ನು ಅವಮಾನಿಸುವ ಉದ್ದೇಶ) ಮತ್ತು 510 (ಕುಡಿತದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಹಾಗೂ ವಿಮಾನ ನಿಯಮಗಳ ಅಡಿಯಲ್ಲಿ ವಿವಿಧ ಪ್ರಕರಣಗಳನ್ನು ದಾಖಲಿಸಲಾಗಿದೆ. (ಏಜೆನ್ಸೀಸ್)
ರಾಜ್ಯ ರಾಜಕೀಯದಲ್ಲಿ 2ನೇ ಇನ್ನಿಂಗ್ಸ್ ಶುರು ಮಾಡಿರೋ ಜನಾರ್ದನ ರೆಡ್ಡಿಗೆ ಆರಂಭದಲ್ಲೇ ಹ್ಯಾಕರ್ಸ್ ಶಾಕ್!
ನಿಮ್ಮ ಕಣ್ಣಿಗೊಂದು ಸವಾಲ್: ಸಾಧ್ಯವಾದ್ರೆ ಈ ಫೋಟೋದಲ್ಲಿರುವ ಹೆಲಿಕಾಪ್ಟರ್ ಪತ್ತೆ ಹಚ್ಚಿ…