More

    VIDEO: ಅಬ್ಬಬ್ಬಾ ಏನು ಗತ್ತು! ಕರೊನಾ ಪಾಠಕ್ಕೆ ಪೊಲೀಸರ​ ಜತೆ ಹೊರಟಿತಲ್ಲ ಈ ಮರಿ ಆಡು… ವೀಡಿಯೋ ವೈರಲ್​

    ಮುಂಬೈ: ಅದು ಮುಂಬೈನ್ ಗ್ರೇಟ್​ ಇಂದಿರಾನಗರ ಪ್ರದೇಶ. ಕರೊನಾ ಸೋಂಕಿತರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಇದನ್ನು ‘​ರೆಡ್​ಝೋನ್’ (ಕೆಂಪು ವಲಯ)​ ಎಂದು ಗುರುತಿಸಲಾಗಿದೆ.

    ಇಲ್ಲಿನ ಜನರಿಗೆ ಕರೊನಾ ಸೋಂಕಿನ ಬಗ್ಗೆ ಬುದ್ಧಿಮಾತು ಹೇಳಲು ಹಾಗೂ ಅವರಿಗೆ ಅಗತ್ಯ ಇರುವ ಆಹಾರ ಧಾನ್ಯಗಳ ಪೂರೈಕೆ ಮಾಡುವ ಸಂಬಂಧ ಪೊಲೀಸ್​ ಇಲಾಖೆ ಸಿಬ್ಬಂದಿ ಸದಾ ಇಂಥ ಪ್ರದೇಶಗಳಲ್ಲಿ ಸುತ್ತಾಡುವುದು ಮಾಮೂಲು.

    ಇದನ್ನೂ ಓದಿ: ಕರೊನಾ ಅಲರ್ಟ್​! ಬೆಕ್ಕಿಗೆ ಮುತ್ತು ಕೊಡುವ ಮುನ್ನ ಇದನ್ನೊಮ್ಮೆ ಓದಿ…

    ಅದರಂತೆಯೇ ಕೆಲ ವಾರಗಳ ಹಿಂದೆ ಗ್ರೇಟ್​ ಇಂದಿರಾನಗರ ಪ್ರದೇಶದಲ್ಲಿ ಕೆಲ ಪೊಲೀಸರು ಗಸ್ತು ತಿರುಗುತ್ತಿದ್ದರು. ತಮ್ಮ ಕೆಲಸ ಮುಗಿಸಿ ಅವರು ವಾಪಸ್​ ಬರುತ್ತಿದ್ದಂತೆಯೇ ಪುಟ್ಟ ಆಡಿನ ಮರಿಯೊಂದು ಈ ಪೊಲೀಸರಿಗೆ ಏನೋ ಹೇಳಬೇಕು ಎನ್ನುವಂತೆ ಹಿಂದಿಂದೆ ಓಡಿಬಂತು. ಪ್ರಾಣಿಗಳು ಹೀಗೆ ಜನರ ಹಿಂದೆ ಬರುವುದು ಸಾಮಾನ್ಯ ಎಂದುಕೊಂಡು ಮೊದಮೊದಲು ಪೊಲೀಸರು ಅದನ್ನು ನಿರ್ಲಕ್ಷಿಸಿದರು.

    ಆದರೆ ಈ ಪುಟ್ಟ ಆಡು ಮಾತ್ರ ಪೊಲೀಸರನ್ನು ಬಿಡುವಂತೆ ಕಾಣಿಸಲಿಲ್ಲ. ಹಿಂದೆ ಇರುವ ಪೊಲೀಸರು ತನ್ನನ್ನು ನಿರ್ಲಕ್ಷ್ಯ ಮಾಡಿದರು ಎಂದು ಮುಂದೆ ಬಂದು ಗಮನಸೆಳೆಯಿತು. ಇದರ ನಡವಳಿಕೆ ಪೊಲೀಸರಿಗೆ ತೀರಾ ಅಚ್ಚರಿ ಎನಿಸಿತು. ಏಕೆಂದರೆ ಈ ಆಡಿನ ನಡವಳಿಗೆ ಸಾಮಾನ್ಯ ರೀತಿಯಲ್ಲಿ ಇರಲಿಲ್ಲ. ಅದನ್ನು ನೋಡಿದರೆ ನಾನೂ ನಿಮ್ಮೊಂದಿಗೆ ಬರುತ್ತೇನೆ ಎನ್ನುವಂತಿತ್ತು.

    ಇದನ್ನೂ ಓದಿ: ಐದು ಬಾಲಕಿಯರ ವಿರುದ್ಧ ಕಂಪ್ಲೇಂಟ್​ ಕೊಟ್ಟ ಎಂಟರ ಪೋರ! ಕಾರಣ ಕೇಳಿ ನಕ್ಕೂ ನಕ್ಕೂ ಸುಸ್ತಾದ ಪೊಲೀಸರು

    ಸರಿ. ನೀನೂ ಬಾ ಎಂದು ಹೇಳಿದ ಪೊಲೀಸರು ಅದರ ತಲೆ ನೇವರಿಸಿ ಕರೊನಾ ಜಾಗೃತಿ ಜಾಥಾದ ಅಂಗವಾಗಿ ಸುತ್ತಲಿನ ಪ್ರದೇಶಗಳಲ್ಲಿ ಸುತ್ತಾಡತೊಡಗಿದರು. ಏನಾಶ್ಚರ್ಯ ಈ ಆಡು ಕೂಡ ಸ್ವಲ್ಪವೂ ಬೇಸರ ಮಾಡಿಕೊಳ್ಳದೇ ತಾನೂ ಪೊಲೀಸ್​ ಅಧಿಕಾರಿಯಂತೆ ಈ ಪೊಲೀಸರ ಜತೆಗೆ ನಡೆದುಕೊಂಡು ಹೋಯಿತು. ಸುಮಾರು ಮೂರು ಕಿಲೋಮೀಟರ್​ ಪೊಲೀಸ್​ ಗತ್ತಿನಲ್ಲಿಯೇ ಇದು ಅವರ ಜತೆ ಓಡಾಡಿತು.

    ಇದನ್ನು ನೋಡಿದ ಜನರಿಗೆ ಆಶ್ಚರ್ಯವೋ ಆಶ್ಚರ್ಯ. ಇದರ ಗತ್ತು ನೋಡಿದ ಪೊಲೀಸರೇ ಅಚ್ಚರಿಪಟ್ಟರಂತೆ. ಕರೊನಾ ಪಾಠ ಮಾಡಲು ನಮ್ಮ ಜತೆ ಇದು ಬಂದಂತಿತ್ತು ಎಂದಿದ್ದಾರೆ ಅವರು. ಆ ಪ್ರದೇಶದ ಕರ್ತವ್ಯ ಮುಗಿಸಿ ಇನ್ನೇನು ಹೊರಡಬೇಕು ಎನ್ನುವಾಗ, ಆಡಿನ ಮರಿ ಅವರನ್ನು ಬೀಳ್ಕೊಟ್ಟು ತನ್ನ ಮನೆಗೆ ವಾಪಸ್​ ಹೋಯಿತು!

    ಇದನ್ನೂ ಓದಿ: ಸ್ವಲ್ಪದರಲ್ಲಿಯೇ ತಪ್ಪಿತು ಚೀನಾದ ಗುರಿ: ಇಲ್ಲದಿದ್ರೆ ನ್ಯೂಯಾರ್ಕ್ ಆಗುತ್ತಿತ್ತೇ ಭಸ್ಮ?

    ಈ ಬಗ್ಗೆ ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ. ‘ನಮ್ಮ ಜತೆ ಆಡಿನ ಮರಿಯ ಕಣ್ಣು ಕೂಡ ನಿಮ್ಮ ಮೇಲಿದೆ’ ಎಂದು ಅದರಲ್ಲಿ ಬರೆಯಲಾಗಿದೆ. ತಮ್ಮ ಜತೆ ಆಡಿನ ಮರಿ ಹೊರಟಿರುವ ವೀಡಿಯೋ ಕೂಡ ಅವರು ಅಪ್​ಲೋಡ್​ ಮಾಡಿದ್ದಾರೆ. ಘಟನೆ ನಡೆದು ಕೆಲ ದಿನಗಳಾದರೂ ಈ ವೀಡಿಯೋ ಇಂದಿಗೂ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ. ಆಡಿನ ಮರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts