More

    ಕಗ್ಗಂಟಾಯಿತು ‘ಬೆಲ್​ ಬಾಟಂ’ ಬಿಡುಗಡೆ ವಿವಾದ … ಪರಿಹಾರ ಏನು?

    ಮುಂಬೈ: ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಬಿಡುಗಡೆಯ ವಿಷಯವಾಗಿ ಚಿತ್ರಮಂದಿರಗಳು ಮತ್ತು ನಿರ್ಮಾಪಕರು ನಡುವೆ ಜಟಾಪಟಿ ಶುರುವಾಗಿದೆ. ಒಂದು ಪಕ್ಷ ನಿರ್ಮಾಪಕರೇನಾದರೂ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಚಿತ್ರವನ್ನು ಮಲ್ಟಿಪ್ಲೆಕ್ಸ್​​ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಮಲ್ಟಿಪ್ಲೆಕ್ಸ್​​ನವರು ಪಟ್ಟು ಹಿಡಿದು ಕುಳಿತಿದ್ದಾರೆ.

    ಇದನ್ನೂ ಓದಿ: ‘ನನ್ನ ಬಳಿ ಬಗೆಬಗೆ ತಿಂಡಿ ಇವೆ… ಬೇಗ ಬೇಗ ಆರ್ಡರ್‌ ಮಾಡಿ…’ ಸೈಕಲ್‌ ಏರಿ ಹೊರಟ ಸೋನು ಸೂದ್‌

    ವಿಷಯವೇನೆಂದರೆ, ಅಕ್ಷಯ್​ ಕುಮಾರ್​ ಅಭಿನಯದ ‘ಬೆಲ್​ ಬಾಟಂ’ ಚಿತ್ರವನ್ನು ಜುಲೈ 27ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತ್ತು. ಇದನ್ನು ಕೇಳಿ ಅಕ್ಷಯ್​ ಕುಮಾರ್ ಅಭಿಮಾನಿಗಳು ಥ್ರಿಲ್​ ಆಗಿದ್ದರು. ಅದಾಗಿ ಎರಡೇ ದಿನಗಳಿಗೆ, ಚಿತ್ರವನ್ನು ಅಮೇಜಾನ್​ ಪ್ರೈಮ್​ನಲ್ಲೂ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಎರಡು ವಾರಗಳ ನಂತರ ಚಿತ್ರವನ್ನು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ, ಆ. 10 ಅಥವಾ 14ರಂದು ಅಮೇಜಾನ್​ ಪ್ರೈಮ್​ನಲ್ಲಿ ಚಿತ್ರ ಅಧಿಕೃತವಾಗಿ ಬಿಡುಗಡೆಯಾಗಲಿದೆ.

    ಚಿತ್ರತಂಡದ ಈ ನಡೆ, ಮಲ್ಟಿಪ್ಲೆಕ್ಸ್​​ನವರನ್ನು ಕೆರಳಿಸಿದೆ. ಬಿಡುಗಡೆ ದಿನಾಂಕ ಘೋಷಿಸಿ, ಎರಡೇ ವಾರಗಳಲ್ಲಿ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಿದರೆ, ಮಲ್ಟಿಪ್ಲೆಕ್ಸ್​​ಗಳಿಗೆ ಯಾರು ಬರುತ್ತಾರೆ? ಎಂಬುದು ಚಿತ್ರಮಂದಿರದವರ ಪ್ರಶ್ನೆ. ಇದು ಸಹಜ. ಏಕೆಂದರೆ, ಓಟಿಟಿಯಲ್ಲಿ ಚಿತ್ರ ಸಿಗುತ್ತದೆ ಎಂದು ಗೊತ್ತಾದರೆ, ಬಹಳಷ್ಟು ಜನ ಮಲ್ಟಿಪ್ಲೆಕ್ಸ್​​ಗಳಿಗೆ ಬರದೆ, ಓಟಿಟಿಯಲ್ಲಿ ಬಿಡುಗಡೆಯಾದ ನಂತರವೇ ಚಿತ್ರವನ್ನು ಪುಕ್ಕಟ್ಟೆಯಾಗಿ ನೋಡುತ್ತಾರೆ. ಇದರಿಂದ ಸಹಜವಾಗಿ ಮಲ್ಟಿಪ್ಲೆಕ್ಸ್​​ನವರಿಗೆ ಲಾಸ್​ ಆಗುವುದರಿಂದ, ಅವರು ಇದರ ವಿರುದ್ಧ ಧ್ವನಿ ಎತ್ತಿದ್ದಾರೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಬಿಡುಗಡೆಯಾಗಿ ಒಂದು ತಿಂಗಳ ನಂತರ ಓಟಿಟಿಯಲ್ಲಿ ಬಿಡುಗಡೆ ಮಾಡಿ, ಒಂದು ಪಕ್ಷ ಓಟಿಟಿಯಲ್ಲೂ ಬಿಡುಗಡೆ ಮಾಡುವುದಾದರೆ, ಮಲ್ಟಿಪ್ಲೆಕ್ಸ್​​ಗಳಲ್ಲಿ ಬಿಡುಗಡೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

    ಇದನ್ನೂ ಓದಿ: ಅರವಿಂದ್​ಗೆ ಟ್ರೋಫಿ ಗೆಲ್ಲುವ ಅವಕಾಶ ಕಸಿದ ಎರಡನೇ ಇನ್ನಿಂಗ್ಸ್​: ಇಲ್ಲಿದೆ ಅಚ್ಚರಿಯ ಮಾಹಿತಿ!

    ‘ಬೆಲ್​ ಬಾಟಂ’ ಚಿತ್ರವನ್ನು ರಂಜಿತ್​ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಕಥೆಯಾಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹುಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.

    ಚಿತ್ರಮಂದಿರದ ಬಳಿಕ ಈ ಒಟಿಟಿ ವೇದಿಕೆಯಲ್ಲೂ ‘ಬೆಲ್ ​ಬಾಟಂ’ ಚಿತ್ರ ಕಣ್ತುಂಬಿಕೊಳ್ಳಬಹುದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts