More

    ಭಯೋತ್ಪಾದನೆ ಸಮರ್ಥನೆಗೆ ಬಹುಪಕ್ಷೀಯ ವೇದಿಕೆ ದುರ್ಬಳಕೆ: ಚೀನಾ, ಪಾಕ್​ ವಿರುದ್ಧ ಜೈಶಂಕರ್​ ವಾಗ್ದಾಳಿ

    ನವದೆಹಲಿ: ಭಯೋತ್ಪಾದಕರನ್ನು ಸಮರ್ಥಿಸಿಕೊಳ್ಳಲು ಮತ್ತು ರಕ್ಷಿಸಲು ಬಹುಪಕ್ಷೀಯ ವೇದಿಕೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ಮೂಲಕ ವಿದೇಶಾಂಗ ಸಚಿವ ಜೈಶಂಕರ್​ ಅವರು ಚೀನಾ ಮತ್ತು ಪಾಕಿಸ್ತಾನದ ವಿರುದ್ಧ ಟೀಕಾ ಪ್ರಹಾರ ನಡೆಸಿದರು.

    ‘ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯ ನಿರ್ವಹಣೆ: ಸುಧಾರಿತ ಬಹುಪಕ್ಷೀಯತೆಯ ಹೊಸ ದೃಷ್ಟಿಕೋನ’ ವಿಷಯದ ಮೇಲೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮುಕ್ತ ಚರ್ಚೆಯ ಅಧ್ಯಕ್ಷತೆ ವಹಿಸಿ ಜೈಶಂಕರ್ ಮಾತನಾಡಿದರು. ಸಂಘರ್ಷದ ಸಂದರ್ಭಗಳ ಪರಿಣಾಮಗಳು ಹೆಚ್ಚು ವಿಶಾಲ ಆಧಾರಿತ ಜಾಗತಿಕ ಆಡಳಿತದ ಅಗತ್ಯವನ್ನು ಒತ್ತಿಹೇಳುತ್ತವೆ ಎಂದರು.

    ಭಯೋತ್ಪಾದನೆಯ ಸವಾಲನ್ನು ಮೆಟ್ಟಿನಿಲ್ಲಲು ಇಡೀ ಜಗತ್ತು ಒಟ್ಟಾಗಿ ಬರುತ್ತಿರುವ ಈ ಸಂದರ್ಭದಲ್ಲೂ ಭಯೋತ್ಪಾದಕರನ್ನು ಸಮರ್ಥಿಸಲು ಮತ್ತು ರಕ್ಷಿಸಲು ಬಹುಪಕ್ಷೀಯ ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳುವ ಮೂಲಕ ಚೀನಾ ಮತ್ತು ಅದರ ಮಿತ್ರ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಜೈಶಂಕರ್​ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

    ಚೀನಾದಂತಹ ಖಾಯಂ ಸದಸ್ಯ ರಾಷ್ಟ್ರ ಯುಎನ್ ಸೆಕ್ಯುರಿಟಿ ಕೌನ್ಸಿಲ್‌ನ ನಿರ್ಬಂಧಗಳ ಸಮಿತಿಯಲ್ಲಿ ವಿಟೋ ವಿಲ್ಡಿಂಗ್ ಮಾಡುವ ಮೂಲಕ ಪಾಕಿಸ್ತಾನಿ ನೆಲದಲ್ಲಿರುವ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್‌ನಂತಹ ಭಯೋತ್ಪಾದಕರನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಸ್ತಾಪಗಳಿಗೆ ಪುನರಾವರ್ತಿತ ತಡೆ ಮತ್ತು ನಿರ್ಬಂಧಗಳನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಜೈಶಂಕರ್​ ಈ ಮಾತುಗಳನ್ನಾಡಿದರು. ಅಲ್ಲದೆ, ಇಂದು ಸುಧಾರಣೆಯ ಅಗತ್ಯವಿದೆ ಎಂದು ಒತ್ತಿ ಹೇಳಿದರು. (ಏಜೆನ್ಸೀಸ್​)

    VIDEO| ಆಸೆಯಿಂದ ವಧುವಿನ ಕೆನ್ನೆಗೆ ಚುಂಬಿಸಲು ಹೋದ ವರನಿಗೆ ವೇದಿಕೆಯಲ್ಲೇ ಕಾದಿತ್ತು ಭಾರಿ ಶಾಕ್​!

    ಗೌಡರ ಅಂಗಳದಲ್ಲಿ ಅಶೋಕ ಚಕ್ರಾಧಿಪತ್ಯ!; ಎದುರಾಳಿಯೇ ಇಲ್ಲದ ಚಕ್ರವ್ಯೂಹದಲ್ಲಿ ಸಾಮ್ರಾಟ: ಪದ್ಮನಾಭನಗರ ವಿಧಾನಸಭಾ ಕ್ಷೇತ್ರ

    ಪರಪುರುಷರ ಜೊತೆ ಸಹಕರಿಸುವಂತೆ ಹಿಂಸೆ ಮಾಡ್ತಿದ್ರು… ಕಣ್ಣೀರಿಡುತ್ತಲೇ ತಾನು ಅನುಭವಿಸಿದ ನರಕಯಾತನೆ ಬಿಚ್ಚಿಟ್ಟ ಲಕ್ಷ್ಮೀದೇವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts