More

    ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಬ್ರಹ್ಮರಥೋತ್ಸವ

    ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮರಥೋತ್ಸವ ಜರುಗಿತು.

    ಮೂಲ್ಕಿ: ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಮಹೋತ್ಸವ ಗುರುವಾರ ಭಕ್ತರಿಂದ ಹಣ್ಣುಕಾಯಿ ಸಮರ್ಪಣೆಯೊಂದಿಗೆ ಸಮಾಪನಗೊಂಡಿತು.

    ಬುಧವಾರ ರಾತ್ರಿ ಶ್ರೀಕ್ಷೇತ್ರದ ತಂತ್ರಿ ಶಿಬರೂರು ಗೋಪಾಲಕೃಷ್ಣ ತಂತ್ರಿಗಳಿಂದ ವಿಶೇಷ ಪ್ರಾರ್ಥನೆಯೊಂದಿಗೆ ಬಲಿ ಆರಂಭಗೊಂಡಿತು. ಬಳಿಕ ವಿವಿಧ ವಾದ್ಯಗೋಷ್ಠಿ, ಯಕ್ಷಗಾನ ಮತ್ತು ಓಕುಳಿ, ಉರುಳು ಸೇವೆಯ ಸುತ್ತಿನ ಬಳಿಕ ದೇವರು ಮೂಷಿಕ ರೂಪದಲ್ಲಿ ಪುಷ್ಪಾಲಂಕೃತ ಚಿನ್ನದ ಪಲ್ಲಕಿಯಲ್ಲಿ ಕುಳಿತು ಪೇಟೆ ಸವಾರಿಯಾಗಿ ರಥೋತ್ಸವ ಗದ್ದೆಗೆ ಆಗಮನ. ಮೂಲ್ಕಿ ಸೀಮೆ ಅರಸರು ದೇವಸ್ಥಾನಕ್ಕೆ ಆಗಮಿಸಿದ ಬಳಿಕ ಸಸಿಹಿತ್ಲು ಶ್ರೀ ಭಗವತಿ ಮತ್ತು ಪರಿವಾರ ಶಕ್ತಿಗಳ ಆಗಮನ, ರಥೋತ್ಸವ ಆರಂಭ, ದರ್ಶನ ನಡಾವಳಿ, ಭಗವತಿಯ ಅನುಜ್ಞೆಯೊಂದಿಗೆ ರಥಾರೋಹಣ, ಪೂಜೆ, ರಥೋತ್ಸವ, ಸುಡುಮದ್ದು ಪ್ರದರ್ಶನದ ಬಳಿಕ ದೇವರು ಅವಭೃತಕ್ಕಾಗಿ ಪ್ರಯಾಣ. ಶಾಂಭವಿ ನದಿ ಬದಿಯ ಶ್ರೀ ಬಡಗುಹಿತ್ಲು ಸಾಗ ಸಾನ್ನಿಧ್ಯದಲ್ಲಿ ದೇವಿಗೆ ವಿಶೇಷ ಪೂಜೆ, ಬಳಿಕ ದೋಣಿಯಲ್ಲಿ ಶ್ರೀದೇವಿ ಹಾಗೂ ಶ್ರೀ ಭಗವತಿ ಪರಿವಾರ ಶಕ್ತಿಗಳ ಪ್ರಯಾಣ, ಚಂದ್ರ ಶ್ಯಾನುಭಾಗರ ಕುದ್ರುವಿನಲ್ಲಿ ಶ್ರೀದೇವಿಯ ಅವಭೃತ, ಬಳಿಕ ವಾಪಸ್ ಬಂದು ವಿಮಾನ ರಥವೇರಿದ ಬಳಿಕ ಬಡಗುಹಿತ್ಲು ಗ್ರಾಮಸ್ಥರಿಂದ ಪೂಜೆ, ಬಳಿಕ ವಿಜೃಂಭಣೆಯ ಸೂಟೆದಾರ, ನಾಗಕಟ್ಟೆಯಲ್ಲಿ ಪೂಜೆ, ವಿಮಾನ ರಥವೇರಿದ ಬಳಿಕ ಬೆಡಿಕಂಬ ಪ್ರದರ್ಶನ ಬಳಿಕ ಶ್ರೀಕ್ಷೇತ್ರಕ್ಕೆ ಬಂದು ಜಲಕದ ಬಲಿ, ವಿಶ್ರಾಂತಿ ಪೂಜೆ, ದ್ವಜಾಅವರೋಹಣ, ಶ್ರೀದೇವಿ ಮತ್ತು ಶ್ರೀ ಭಗವತಿ ಪರಿವಾರ ಶಕ್ತಿಗಳ ಭೇಟಿ, ಶ್ರೀ ಭಗವತಿಯಿಂದ ಸಸಿಹಿತ್ಲು ನಡಾವಳಿಗೆ ಆಮಂತ್ರಣದ ಬಳಿಕ ಭಗವತಿಯ ನಿರ್ಗಮನ. ಮುಂಜಾನೆ ಪೂಜೆ ಪುನಸ್ಕಾರಗಳ ಬಳಿಕ ಊರ ಪರ ಊರ ಭಕ್ತರಿಂದ ಹಣ್ಣುಕಾಯಿ ಸೇವೆಯೊಂದಿಗೆ ಜಾತ್ರೆ ಸಂಪನ್ನಗೊಂಡಿತು.

    ಶುಕ್ರವಾರ ಸಂಪ್ರೋಕ್ಷಣೆ ಹಾಗೂ ಮಹಾ ಮಂತ್ರಾಕ್ಷತೆ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts