More

    ಮುಖೇಶ್ ಅಂಬಾನಿ ಏಷ್ಯಾದ ಶ್ರೀಮಂತ ಪಟ್ಟ ಕಳೆದುಕೊಂಡಿದ್ದು ಹೇಗೆ? ಜಾಕ್ ಮಾಗೆ ಜಾಕ್​ಪಾಟ್​

    ಮುಂಬೈ: ಭಾರತದ ನಂಬರ್ ಒನ್ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ, ಏಷ್ಯಾದ ಅತ್ಯಂತ ಶ್ರೀಮಂತ. ಆದರೆ ಈಗ ಏಷ್ಯಾದ ಶ್ರೀಮಂತ ಎಂಬ ಪಟ್ಟ ಹೋಗಿದೆ. ಸೋಮವಾರ ಒಂದೇ ದಿನ ಮುಖೇಶ್ ಅಂಬಾನಿ 5.8 ಶತಕೋಟಿ ಡಾಲರ್​ (580 ಕೋಟಿ ರೂ.) ಸಂಪತ್ತನ್ನು ಕಳೆದುಕೊಂಡಿದ್ದಾರೆ.

    ವಿಶ್ವದಾದ್ಯಂತ ಆವರಿಸಿರುವ ಕೊರೊನಾ ವೈರಸ್ ಆತಂಕ ಹಾಗೂ ರಷ್ಯಾ ಮತ್ತು ಸೌದಿ ಅರೇಬಿಯಾ ನಡುವಿನ ತೈಲ ದರ ಸಮರದಿಂದ ಆರ್ಥಿಕ ಕುಸಿತ ಉಂಟಾಗಿರುವುದೇ ಅಂಬಾನಿಯ ನಷ್ಟಕ್ಕೆ ಕಾರಣ. ಹೀಗಾಗಿ ಅಲಿಬಾಬಾ ಗ್ರೂಪ್ ಸ್ಥಾಪಕ ಜಾಕ್ ಮಾಗೆ ಏಷ್ಯಾದ ಶ್ರೀಮಂತ ಎಂಬ ಕೀರಿಟ ಒಲಿದಿದ್ದರೆ, ಮುಖೇಶ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ ಎಂದು ಬ್ಲೂಮ್ ಬರ್ಗ್​ ಬಿಲೇನಿಯರ್ಸ್ ಇಂಡೆಕ್ಸ್ ಮಾಹಿತಿ ನೀಡಿದೆ..

    29 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೌದಿ ಅರೇಬಿಯಾ ಮತ್ತು ರಷ್ಯ ನಡುವೆ ತೈಲ ದರ ಸಮರ ಏರ್ಪಟ್ಟಿದೆ. ಹೀಗಾಗಿ ತೈಲ ಬೆಲೆ ಇಳಿಕೆ ಮತ್ತು ಷೇರುಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್​ ಷೇರುಗಳ ಸೋಮವಾರ ಶೇಕಡ 12ರಷ್ಟು ಕುಸಿತ ಕಂಡಿದೆ. ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್​, ದೂರ ಸಂಪರ್ಕ, ತಂತ್ರಜ್ಞಾನ, ಚಿಲ್ಲರೆ ವ್ಯಾಪಾರ ಕ್ಷೇತ್ರಗಳಿಗಾಗಿ ಈ ವರ್ಷ ಶತ ಕೋಟಿ ಡಾಲರ್​ ಸಾಲ ಪಡೆದಿದೆ. ಆದರೆ, 2009ರ ನಂತರ ರಿಲಯನ್ಸ್ ಷೇರುಗಳು ಪಾತಳ ಕಂಡಿದ. ಈ ವರ್ಷ ರಿಲಿಯನ್ಸ್ ಷೇರುಗಳು ಶೇಕಡ 26 ಪರ್ಸೆಂಟ್​ ​ನಷ್ಟ ಅನುಭವಿಸಿದೆ. ಜಾಗತಿಕ ತೈಲ ದರ ಸಮರ ಹಾಗೂ ಕೊರೊನಾ ಎಫೆಕ್ಟ್​ನಿಂದ ವಿಶ್ವದ ಬಿಲೇನಿಯರ್​ಗಳು ಕೋಟ್ಯಂತರ ರೂಪಾಯಿ ಸಂಪತ್ತು ಸೋಮವಾರ ಒಂದೇ ದಿನ ಕರಗಿದೆ. (ಏಜೆನ್ಸೀಸ್)

    ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts