ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು

ಗಾಜಿಯಾಬಾದ್​: ಚೀನಾದಲ್ಲಿ ಕೊರೊನಾ ವೈರಸ್​ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಭಾರತೀಯ ರಾಯಭಾರಿ ಕಚೇರಿ ಚೀನಾದಲ್ಲಿ ವಾಸಿಸುತ್ತಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸು ಕರೆತಂದಿತ್ತು. ಇದೀಗ ಇರಾನ್​ನಲ್ಲಿಯೂ ಸಹ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಇರಾನ್​ನಲ್ಲಿದ್ದ 58 ಭಾರತೀಯರನ್ನು ಇಂದು ಸ್ವದೇಶಕ್ಕೆ ಕರೆತರಲಾಗಿದೆ. ಇರಾನ್​ನಲ್ಲಿ ಇದುವರೆಗೂ ಸುಮಾರು 7,000 ಜನರಲ್ಲಿ ಕೊರೊನಾ ವೈರಸ್​ ಪತ್ತೆಯಾಗಿದೆ. 237 ಜನರು ಮೃತರಾಗಿದ್ದಾರೆ. 2,000ಕ್ಕೂ ಹೆಚ್ಚು ಭಾರತೀಯರು ಇರಾನ್​ನಲ್ಲಿ ವಾಸವಿದ್ದು ಅವರನ್ನೆಲ್ಲ ಸ್ವದೇಶದಕ್ಕೆ ಕರೆತರುವ ವ್ಯವಸ್ಥೆಯನ್ನು ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಮಾಡುತ್ತಿದೆ. … Continue reading ಕೊರೊನಾ ಪೀಡಿತ ಇರಾನ್​ನಿಂದ ಭಾರತಕ್ಕೆ ಬಂದಿಳಿದ 58 ಸ್ವದೇಶಿಗರು