More

    ಶ್ರೀಮಂತಿಕೆಯಲ್ಲಿ ಗೂಗಲ್​ ಸಂಸ್ಥಾಪಕರನ್ನೇ ಹಿಂದಿಕ್ಕಿದ ಮುಖೇಶ್​ ಅಂಬಾನಿ

    ನವದೆಹಲಿ: ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್​ನ (ಆರ್​ಐಎಲ್​) ಚೇರ್ಮನ್​ ಮತ್ತು ಮ್ಯಾನೇಜಿಂಗ್​ ಡೈರೆಕ್ಟರ್​ ಮುಖೇಶ್​ ಅಂಬಾನಿ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ತನ್ಮೂಲಕ ಅವರು ನಿವ್ವಳ ಮೌಲ್ಯದ ಲೆಕ್ಕಾಚಾರದಲ್ಲಿ ಈ ಸ್ಥಾನದಲ್ಲಿದ್ದ ಗೂಗಲ್​ನ ಮೂಲ ಸಂಸ್ಥೆ ಆಲ್ಫಬೆಟ್​ನ ಸಂಸ್ಥಾಪಕರಾದ ಸೆರ್ಗಿ ಬ್ರಿನ್​ ಮತ್ತು ಲ್ಯಾರಿ ಪೇಜ್​ ಅವರನ್ನು ಹಿಂದಿಕ್ಕಿದ್ದಾರೆ. ​

    ಬ್ಲೂಮ್​ಬರ್ಗ್​ ಬಿಲಿಯನೇರ್ಸ್​ ಇಂಡೆಕ್ಸ್​ನ ಪ್ರಕಾರ ಅಂಬಾನಿ ಅವರ ನಿವ್ವಳ ಮೌಲ್ಯ 72.4 ಶತಕೋಟಿ ಡಾಲರ್​ ಆಗಿದೆ. ಮುಂಬೈ ಷೇರುಪೇಟೆಯ ಸೋಮವಾರದ ವಹಿವಾಟಿನಲ್ಲಿ ಆರ್​ಐಎಲ್​ ಷೇರುಗಳ ಮೌಲ್ಯದಲ್ಲಿ ಶೇ.3 ವೃದ್ಧಿಯಾಗುವ ಮೂಲಕ ಅಂಬಾನಿ ಅವರ ಸಂಪತ್ತು ಕೂಡ 2.17 ಶತಕೋಟಿ ಡಾಲರ್​ ಹೆಚ್ಚಾಗಿದೆ. ಇದೇ ವೇಳೆ ಅಮೆರಿಕದ ಷೇರುಪೇಟೆಯ ತಂತ್ರಜ್ಞಾನ ಕಂಪನಿಗಳ ಷೇರುಗಳ ಮೌಲ್ಯದ ಲೆಕ್ಕಾಚಾರದಲ್ಲಿ ಲ್ಯಾರಿ ಪೇಜ್​ನ ಮೌಲ್ಯ 71.6 ಶತಕೋಟಿ ಡಾಲರ್​ಗೆ ಮತ್ತು ಸೆರ್ಗಿ ಬ್ರಿನ್​ನ ಮೌಲ್ಯ 69.4 ಶತಕೋಟಿ ಡಾಲರ್​ಗೆ ಇಳಿಕೆಯಾಗಿದೆ.

    ಅಂಬಾನಿ ಅವರು ಕಳೆದ ವಾರವಷ್ಟೇ ಜಾಗತಿಕ ಶ್ರೀಮಂತರ ಪಟ್ಟಿಯಲ್ಲಿ ವಾರೆನ್​ ಬಫೆ ಅವರನ್ನು ಹಿಂದಿಕ್ಕಿ 8ನೇ ಸ್ಥಾನಕ್ಕೆ ಜಿಗಿದಿದ್ದರು. ಜಾಗತಿಕ ಹೂಡಿಕೆ ಕಂಪನಿಗಳು ಜಿಯೋ ಫ್ಲಾಟ್​ಫಾರಂನಲ್ಲಿ ಭಾರಿ ಮೊತ್ತದ ಹೂಡಿಕೆ ಮಾಡಿರುವ ಹಿನ್ನೆಲೆಯಲ್ಲಿ ಮುಖೇಶ್​ ಅಂಬಾನಿ ಅವರಿಗೆ ಈ ಸಾಧನೆ ಮಾಡಲು ಸಾಧ್ಯವಾಗಿತ್ತು.

    ಸಹೋದರಿ ಬಗ್ಗೆ ಮಾತನಾಡಿದ್ದಕ್ಕೆ ಆಕ್ಷೇಪಿಸಿದ, ತುಂಡು ತುಂಡಾಗಿ ಬೋರ್​ವೆಲ್​ ಸೇರಿದ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts