More

    ಹಜರತ್ ಹಸನ್-ಹುಸೇನ್ ಪೀರ ಕತ್ತಲ ರಾತ್ರಿ

    ಮುದಗಲ್: ಪಟ್ಟಣದ ಕಿಲ್ಲಾದಲ್ಲಿರುವ ಹಜರತ್ ಹುಸೇನ್ ಪೀರ ಹಾಗೂ ಮೇಗಳಪೇಟೆಯಲ್ಲಿರುವ ಹಜರತ್ ಹಸನ್ ಪೀರಗಳ (ಆಲಂ) ಕತ್ತಲ ರಾತ್ರಿಯು ಶ್ರದ್ಧಾ-ಭಕ್ತಿಯೊಂದಿಗೆ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಗಿನ ಜಾವದವರೆಗೆ ಜರುಗಿತು.

    ಹಜರತ್ ಮೌಲಾಲಿ ಪೀರರ ಮಕ್ಕಳು ಎಂದು ಹೇಳಲಾಗುವ ಹಸನ್ ಪೀರ ಹಾಗೂ ಹುಸೇನ್ ಪೀರರ ಕತ್ತಲ ರಾತ್ರಿ ಮೊಹರಂ ಆಚರಣೆಯ ಒಂಬತ್ತನೆಯ ದಿನವಾದ ಸೋಮವಾರ ಮೂಲ ದರ್ಗಾದಿಂದ ಆಲಂಗಳನ್ನು ಹೊತ್ತು ನಗಾರಿ, ಶಹನಾಯಿ, ತಮಟೆ, ಬಾಜಾ-ಭಜಂತ್ರಿ ಮೇಳದೊಂದಿಗೆ ಪಟ್ಟಣದ ನಾನಾ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಲಾಯಿತು.

    ನಂತರ ಕಾಸಿಂಪೀರ, ಅಬ್ಬಾಸ್ ಅಲಿ ಹಾಗೂ ಇತರ ದರ್ಗಾಗಳಿಗೆ ರಾತ್ರಿಯಿಂದ ಮುಂಜಾನೆಯವರೆಗೆ ಭೇಟಿ ನೀಡಲಾಯಿತು. ಮೇಗಳಪೇಟೆಯ ಹಜರತ್ ಹಸನ್ ಪೀರ ಸವಾರಿ ಮಾಡಲಾಯಿತು. ಕತ್ತಲ ರಾತ್ರಿಯಂದು ಸಾವಿರಾರು ಭಕ್ತರು ಹರಕೆ ತೀರಿಸಲು ಎಣ್ಣೆ ದೀಪದ ಪಂಜಿನ ಹಾಗೂ ಕಬ್ಬಿಣದ ತಂತಿಗೆ ಕೊಬ್ಬರಿ ಸಿಲುಕಿಸಿ ಪೀರಗಳ ಮುಂದೆ ಬೆಳಕು ಪ್ರದರ್ಶಿಸುವ ಮೂಲಕ ಭಕ್ತಿ ಮೆರೆದರು. ಇನ್ನು ಅನೇಕರು ದರ್ಗಾದ ಮುಂದೆ ನಿರ್ಮಾಣ ಮಾಡಲಾಗಿದ್ದ ಅಗ್ನಿಕೊಂಡ (ಅಲಾಯಿ ಕುಣಿ) ದಲ್ಲಿ ಬರಿಗಾಲಲ್ಲಿ ನಡೆದಾಡುವ ಮೂಲಕ ಭಕ್ತಿಯ ಪರಕಾಷ್ಟೆ ಮೆರೆದರು. ನಂತರ ಪುರಾತನ ದೇವರ ಬಾವಿ ಹತ್ತಿರ ತೆರಳಿ ಆಲಂಗಳನ್ನು ದಫನ್ (ಕರ್ಬಾಲಾ) ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts