More

    ದಣಿವಾರಿಸಿಕೊಳ್ಳಲು ದುಶ್ಚಟದ ಮಾರ್ಗ ಬೇಡ; ಶಿಕ್ಷಣ ಇಲಾಖೆ ಅಪರ ಕಾರ್ಯದರ್ಶಿ ಚಂದ್ರಶೇಖರ ದಫೇದಾರ್ ಸಲಹೆ; ಕಾರ್ಮಿಕರಿಗೆ ಕಿಟ್ ವಿತರಣೆ

    ಮುದಗಲ್: ಕೂಲಿಯನ್ನು ನಂಬಿ ಸಂಸಾರ ನಡೆಸುವ ಕಾರ್ಮಿಕರು ದುಶ್ಚಟಗಳಿಮದ ದೂರ ಇದ್ದು, ಕುಟುಂಬದ ಆರ್ಥಿಕ ಅಭಿವೃದ್ಧಿಗೆ ಮುಂದಾಗಬೇಕು ಎಂದು ಶಿಕ್ಷಣ ಇಲಾಖೆಯ ಅಪರ ಕಾರ್ಯದರ್ಶಿ ಚಂದ್ರಶೇಖರ ದಫೇದಾರ್ ಹೇಳಿದರು.

    ಮೇಗಳಪೇಟೆಯಲ್ಲಿ ಎಂ.ಗಂಗಣ್ಣ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಸಂಘದ ಕಚೇರಿಯಲ್ಲಿ ಕಾರ್ಮಿಕರಿಗೆ ಸಾಮಗ್ರಿಗಳ ಕಿಟ್ ವಿತರಿಸಿ ಭಾನುವಾರ ಮಾತನಾಡಿದರು. ಕಷ್ಟ ಪಟ್ಟು ದುಡಿದ ಹಣವನ್ನು ಮಜಾ ಮಾಡದೆ ಮಕ್ಕಳ ಭವಿಷ್ಯಕ್ಕಾಗಿ ಕೂಡಿಡಬೇಕು. ದಣಿವಾರಿಸಿಕೊಳ್ಳಲು ದುಶ್ಚಟಗಳ ದಾರಿ ಹಿಡಿಯದೆ ಕುಟುಂಬದೊಂದಿಗೆ ಕಾಲ ಕಳೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಕಾರ್ಮಿಕರ ಹಿತಕ್ಕಾಗಿ ಸರ್ಕಾರ ಅನೇಕ ಯೋಜನೆಗಳ ಮೂಲಕ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಸಂಘಟನೆ ಮೂಲಕ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

    ಸಂಘದ ಅಧ್ಯಕ್ಷ ಹೊನ್ನಪ್ಪ ಹಿರೆಕುರುಬರ, ಕಾರ್ಯದರ್ಶಿ ಮಂಜುನಾಥ ಬನ್ನಿಗೋಳ್ಕರ್, ಪ್ರಮುಖರಾದ ರಾಮಣ್ಣ, ಸಂಜೀವಪ್ಪ ಹಂಚಿನಾಳ, ಗ್ಯಾನಪ್ಪ ಹೊಳ್ಯಾಚಿ, ಶ್ರೀನಿವಾಸ ತುಂಬಲಗಡ್ಡಿ, ನಂದಪ್ಪ, ಕಾರ್ಮಿಕ ಇಲಾಖೆ ನೌಕರ ಮೌನೇಶ ಹೊಸಮನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts