More

    ಹೊಲದಲ್ಲಿ ಕೆಲಸ ಮುಗಿಸಿ ಬಂದು ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವು

    ಮುದ್ದೇಬಿಹಾಳ: ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಸಾವನ್ನಪ್ಪಿದ ಘಟನೆ ತಾಲೂಕಿನ ಕುಂಟೋಜಿಯಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.

    ಕುಂಟೋಜಿ ಗ್ರಾಮದಲ್ಲಿ ಮನೆಗೆ ಹೊಂದಿಕೊಂಡು ಇರುವ ಹೊಲದಲ್ಲಿ ಕೆಲಸ ಮಾಡಿ ಮಲಗಿದ್ದಾಗ ಬೆಳಗಿನ ಜಾವ ಹಾವು ಕಚ್ಚಿದೆ ಎನ್ನಲಾಗಿದ್ದು ಇದರಿಂದ ತೀವ್ರ ಅಸ್ವಸ್ಥರಾಗಿದ ನಾಲ್ಕು ತಿಂಗಳ ಗರ್ಭಿಣಿ ನಿರ್ಮಲಾ ಯಲ್ಲಪ್ಪ ಚಲವಾದಿ(25) ಅವರನ್ನು ಮೊದಲು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಸ್ಥಳಾಂತರ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

    ಕಂದಾಯ ನಿರೀಕ್ಷಕ ಭೇಟಿ: ಕುಂಟೋಜಿಯಲ್ಲಿ ಹಾವು ಕಚ್ಚಿ ನಾಲ್ಕು ತಿಂಗಳ ಗರ್ಭಿಣಿ ಅಸುನೀಗಿದ ವಿಷಯ ತಿಳಿದು ಗ್ರಾಮದ ಅವರ ಮನೆಗೆ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ,ಗ್ರಾಮ ಲೆಕ್ಕಾಧಿಕಾರಿ ಅನುಪಮಾ ಪೂಜಾರಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.ಈ ವೇಳೆ ಮಾತನಾಡಿದ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ, ಮರಣೋತ್ತರ ಪರೀಕ್ಷೆಯ ವರದಿ ಹಾಗೂ ದಾಖಲೆಗಳನ್ನು ಸಂಗ್ರಹಿಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದರು.ಮುಖಂಡ ಬಸವರಾಜ ಹುಲಗಣ್ಣಿ ಇದ್ದರು.

    ದೀಪಾವಳಿ ಹಬ್ಬಕ್ಕೆ ಪಾಲಕರು ಬಟ್ಟೆ ಕೊಡಿಸಲಿಲ್ಲ ಅಂತ ಸಾವಿನ ಹಾದಿ ಹಿಡಿದ ಯುವಕ!

    ವಿವಾಹೇತರ ಸಂಬಂಧಕ್ಕೆ ಅಡ್ಡಿ: ಪ್ರಿಯಕರನ ಜತೆಗೂಡಿ ಪತಿಯನ್ನೇ ಕೊಂದು ನಾಟಕವಾಡಿದ ಪತ್ನಿ ಅರೆಸ್ಟ್​

    ನವಾಜ್​ ಎಸೆದ ವೈಡ್​ ಬಾಲ್​ ಸ್ಪಿನ್​ ಆಗಿ ಪ್ಯಾಡ್​ಗೆ ಬಡಿದಿದ್ರೆ ಏನ್​ ಮಾಡ್ತಿದ್ರಿ? ಅಚ್ಚರಿಯ ಉತ್ತರ ಕೊಟ್ಟ ಅಶ್ವಿನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts