More

    ಬಾಕಿ ಉಳಿದ ರೈತರಿಗೆ ಸಾಲ ಮನ್ನಾದ ಹಣ ಶೀಘ್ರ ವಿತರಣೆ

    ಮುದ್ದೇಬಿಹಾಳ: ಸಾಲ ಮನ್ನಾ ಯೋಜನೆಯಿಂದ ಬಾಕಿ ಉಳಿದಿರುವ ರೈತರಿಗೆ ಶೀಘ್ರ ಹಣ ವಿತರಣೆಗೆ ಸರ್ಕಾರ ಕ್ರಮ ಕೈಗೊಳ್ಳುವುದಾಗಿ ಸಹಕಾರ ಸಚಿವ ಎಸ್.ಟಿ. ಸೋಮಶೇಖರ ಅವರು ಭರವಸೆ ನೀಡಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಂ.ಎಸ್.ಕನ್ನೂರ ಹೇಳಿದರು.
    ತಾಲೂಕಿನ ಕುಂಟೋಜಿಯಲ್ಲಿ ಸೋಮವಾರ ಮುದ್ದೇಬಿಹಾಳ ಪಿಕೆಪಿಎಸ್ ಸಂಘದ 45ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ರೈತರ ಪ್ರಶ್ನೆಗಳಿಗೆ ಅವರು ಉತ್ತರ ನೀಡಿದರು. ನಮ್ಮ ಸಾಲ ಮನ್ನಾದ ಹಣ ಇನ್ನೂ ಬಂದಿಲ್ಲ. ಯಾವಾಗ ಕೇಳಿದರೂ ಇನ್ನೂ ಸರ್ಕಾರದಿಂದ ಹಣ ಕೊಟ್ಟಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸಭೆಯಲ್ಲಿದ್ದ ರೈತರು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ವ್ಯವಸ್ಥಾಪಕ ಕನ್ನೂರ, ಸಹಕಾರ ಸಂಘಗಳಿಂದ ಪಡೆದಿದ್ದ ರೈತರ ಸಾಲ ಮನ್ನಾ ಆಗಲಿದೆ. 60 ಸಾವಿರ ರೈತರ ಸಾಲ ಮನ್ನಾಕ್ಕಾಗಿ ಕಾಯುತ್ತಿದ್ದು, ಶೀಘ್ರ ಅದನ್ನು ಬಿಡುಗಡೆ ಮಾಡುವುದಾಗಿ ಸಹಕಾರ ಸಚಿವರು ತಿಳಿಸಿದ್ದಾರೆ ಎಂದು ಹೇಳಿದರು. ಪ್ರಗತಿಯಾಗಬೇಕಾದರೆ ರೈತರು ಸಂಘದೊಂದಿಗೆ ಹೆಚ್ಚಿನ ವ್ಯವಹಾರ ಇಟ್ಟುಕೊಳ್ಳಬೇಕು. ಸಾಲಕ್ಕಾಗಿ ಮಾತ್ರ ಸಂಘದ ಆಸರೆ ಪಡೆಯಬಾರದು ಎಂದು ಹೇಳಿದರು.

    ಸಂಘದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ವೀರೇಶ ಅಗ್ಗಿಮಠ ಮಾತನಾಡಿ, 598 ರೈತರಲ್ಲಿ 519 ರೈತರಿಗೆ 1.74 ಕೋಟಿ.ರೂ ಸಾಲ ಮನ್ನಾದ ಪ್ರಯೋಜನ ದೊರೆತಿದ್ದು, ಇನ್ನೂ 79 ರೈತರಿಗೆ 22 ಲಕ್ಷ ರೂ.ಬಾಕಿ ಬರಬೇಕಿದೆ ಎಂದು ತಿಳಿಸಿದರು.
    ಸಂಘದ ನಿರ್ದೇಶಕ ಸದ್ದಾಂ ಕುಂಟೋಜಿ, ಸಹಕಾರ ಸಂಘಗಳ ಏಳಿಗೆಯಲ್ಲಿ ರೈತರ ಪಾತ್ರ ಅಗಾಧವಾಗಿದೆ. ಅದರಲ್ಲೂ ಸಿಬ್ಬಂದಿ ರೈತರೊಂದಿಗೆ ಸೌಜನ್ಯದೊಂದಿಗೆ ಮಾತನಾಡಿ ಸಂಘದ ಏಳಿಗೆಗೆ ಶ್ರಮಿಸಬೇಕು ಎಂದರು. ಸಂಘದ ಅಧ್ಯಕ್ಷ ಎಂ.ಎಸ್.ಬಿರಾದಾರ ವರದಿ ಓದಿದರು. ಉಪಾಧ್ಯಕ್ಷ ಹುಚ್ಚೇಸಾ ನಾಲತವಾಡ, ಸದಸ್ಯರಾದ ಸಂಗಯ್ಯ ಕೊಡೇಕಲ್ಲಮಠ, ಭೀಮನಗೌಡ ಬಿರಾದಾರ, ವೀರೇಶ ಮದರಿ, ಪ್ರಕಾಶ ಸಜ್ಜನ, ಸೋಮಲಿಂಗಪ್ಪ ಗಸ್ತಿಗಾರ, ಲಕ್ಷ್ಮ್ಮಿಬಾಯಿ ಯರಝರಿ, ಲಕ್ಷ್ಮಿಬಾಯಿ ಹುಲಿಬೆಂಚಿ, ಸೂಪರವೈಸರ್ ಶಿವಾನಂದ ಎಂಟಮಾನ, ಸಾಹೇಬಣ್ಣ ರೊಟ್ಟಿ ಸೇರಿದಂತೆ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts