More

    ಕುಂಟೋಜಿಯಲ್ಲಿ ಷಷ್ಠಪೂರ್ತಿ ಸಂಭ್ರಮ

    ಮುದ್ದೇಬಿಹಾಳ: ತಾಲೂಕಿನ ಕುಂಟೋಜಿ ಗ್ರಾಮದ ಬಸವೇಶ್ವರ ದೇವಸ್ಥಾನ ಆವರಣದಲ್ಲಿ ಚನ್ನವೀರ ದೇವರ ಗುರುಪಟ್ಟಾಧಿಕಾರ ಮಹೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ 21 ದಿನದ ಕಲಬುರ್ಗಿ ಶರಣಬಸವೇಶ್ವರರ ಪುರಾಣ ಪ್ರವಚನದಲ್ಲಿ ಸೋಮವಾರ ರಾತ್ರಿ 60 ವರ್ಷ ಪೂರೈಸಿದ ದಂಪತಿಗಳ ಮರುಮದುವೆಯ ಷಷ್ಠಪೂರ್ತಿಯನ್ನು ಚನ್ನವೀರ ದೇವರು, ರುದ್ರಮುನಿ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಆಚರಿಸಲಾಯಿತು.

    ಗ್ರಾಮದಲ್ಲಿ ಭಾನುವಾರ ಸಂಜೆ ಬೀಗರೂಟ, ಗಟ್ಟಿ ಮಾಡುವ ಕಾರ್ಯ, ಎಲೆ ತಾಂಬೂಲು ಬದಲಾವಣೆ ಸೇರಿ ಮುಂತಾದ ಕಾರ್ಯಗಳನ್ನು ಊರಿನ ಹಿರಿಯರ ಸಮ್ಮುಖದಲ್ಲಿ ನಡೆಸಲಾಗಿತ್ತು.

    ಸೋಮವಾರ ಮಧ್ಯಾಹ್ನದಿಂದಲೇ ಷಷ್ಠಪೂರ್ತಿ ಮರುಮದುವೆಯ ಚಟುವಟಿಕೆ ಪ್ರಾರಂಭಗೊಂಡಿದ್ದವು. 60 ವರ್ಷ ದಾಟಿರುವ ಕುಂಟೋಜಿಯ ಹಿರಿಯರಾದ ಶಿವಲಿಂಗಪ್ಪ ಮತ್ತು ಹೊನ್ನಮ್ಮ ಪಣೇದಕಟ್ಟಿ ದಂಪತಿ, ಬಸವಲಿಂಗಪ್ಪ ಮತ್ತು ನಿಂಗಮ್ಮ ಹೂಗಾರ ದಂಪತಿ ವಧು-ವರರಂತೆ ತಯಾರಾಗಿದ್ದರು.

    ಸಂಜೆ ಗೋಧೂಳಿ ಸಮಯದಲ್ಲಿ ನೈಜ ಮದುವೆಯ ಸಂಪ್ರದಾಯದಂತೆ ಈ ದಂಪತಿಗಳಿಗೆ ಹೂಮಾಲೆ ಬದಲಾಯಿಸಿ ಮಾಂಗಲ್ಯಧಾರಣ ನಡೆಸಲಾಯಿತು.
    ಗುರುಪಟ್ಟಾಧಿಕಾರ ಮಹೋತ್ಸವ ಸಮಿತಿಯ ಮುಖ್ಯಸ್ಥ- ಮಾಜಿ ಪ್ರಧಾನ ಸಂಗನಗೌಡ ಪಾಟೀಲ, ಬಸವೇಶ್ವರ ದೇವಸ್ಥಾನ ಕಮಿಟಿ ಅಧ್ಯಕ್ಷ ಗುರುಲಿಂಗಪ್ಪ ಸುಳ್ಳೊಳ್ಳಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ ಲಮಾಣಿ ಇತರರು ನೇತೃತ್ವ ವಹಿಸಿದ್ದರು.

    ಪುರಾಣದಲ್ಲಿ ಭಾನುವಾರ ಬಾಲ ಶರಣ ಬಸವೇಶ್ವರರ ತೊಟ್ಟಿಲು, ನಾಮಕರಣ ಕಾರ್ಯವನ್ನು ಸೀ ಶಕ್ತಿ ಸಂಘದ ಮಹಿಳೆಯರು, ಸ್ಥಳೀಯ ಮಹಿಳಾ ಸಂಘಟನೆಗಳ ಸದಸ್ಯರು ನಡೆಸಿಕೊಟ್ಟಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts