More

    ಹಣ, ಚಿನ್ನ ಇದ್ದ ಬ್ಯಾಗ್ ಮರಳಿಸಿದ ಸಾರಿಗೆ ನೌಕರರು

    ಮುದ್ದೇಬಿಹಾಳ: ಮುದ್ದೇಬಿಹಾಳ ಘಟಕದ ಸಾರಿಗೆ ಇಲಾಖೆಯ ಮಂಗಳೂರು-ಮುದ್ದೇಬಿಹಾಳ ಮಾರ್ಗದ ಬಸ್‌ನಲ್ಲಿ ಪ್ರಯಾಣಿಕರು ಬಿಟ್ಟು ಹೋಗಿದ್ದ ಹಣ, ಚಿನ್ನ ಇದ್ದ ಬ್ಯಾಗ್ ಮರಳಿಸುವ ಮೂಲಕ ಚಾಲಕ, ನಿರ್ವಾಹಕರು ಪ್ರಾಮಾಣಿಕತೆ ಮೆರೆದಿದ್ದಾರೆ.
    ಬಸ್‌ನಲ್ಲಿ ಬ್ಯಾಗ್ ಬಿಟ್ಟು ಹೋಗಿದ್ದ ಕೆರೂರ ಸಮೀಪದ ಜಮ್ಮನಕಟ್ಟಿಯ ಬಸವರಾಜ ಮರಿಯಪ್ಪ ಕಬ್ಬಲಗೇರಿ ಸುದ್ದಿಗಾರರೊಂದಿಗೆ ಮಾತನಾಡಿ, ನನ್ನ ತಾಯಿ ಹಾಗೂ ನಾನು ಕುಂದಾಪುರದಿಂದ ಜಮ್ಮನಕಟ್ಟಿಗೆ ಹೋಗಲೆಂದು ಮಂಗಳೂರು- ಮುದ್ದೇಬಿಹಾಳ ಬಸ್ ಹತ್ತಿಕೊಂಡಿದ್ದೇವು. ಕೌಟುಂಬಿಕ ಸಮಸ್ಯೆಯಿಂದಾಗಿ ಅವಸರವಾಗಿ ಕೆರೂರಿನಲ್ಲಿ ಬ್ಯಾಗ್ ಬಿಟ್ಟು ಇಳಿದಿದ್ದೇವು. ಬಳಿಕ ಬ್ಯಾಗ್ ಬಿಟ್ಟು ಹೋಗಿದ್ದ ಬಗ್ಗೆ ಟಿಕೆಟ್ ಹಿಂದೆ ಇದ್ದ ಸಹಾಯವಾಣಿಗೆ ಕರೆ ಮಾಡಿದಾಗ ಮುದ್ದೇಬಿಹಾಳ ಡಿಪೋ ಸಂಪರ್ಕಿಸಲು ತಿಳಿಸಿದರು. ಅಷ್ಟರಲ್ಲಾಗಲೇ ಬಸ್ ನಿರ್ವಾಹಕ, ಚಾಲಕರು ಕರೆ ಮಾಡಿ ಬ್ಯಾಗ್ ಸುರಕ್ಷಿತವಾಗಿರುವ ಬಗ್ಗೆ ಮಾಹಿತಿ ನೀಡಿದರು. ಬ್ಯಾಗ್‌ನಲ್ಲಿದ್ದ ವಸ್ತುಗಳು, ಚಿನ್ನ, ಹಣ ಸುರಕ್ಷಿತವಾಗಿದ್ದು, ಸಾರಿಗೆ ಇಲಾಖೆ ನೌಕರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
    ಬಸ್ ನಿರ್ವಾಹಕ ಬಿ.ಎಸ್. ಬಿರಾದಾರ, ಚಾಲಕರಾದ ಅಶೋಕ ಧರಿಗೌಡರ, ಪಿ.ಎಸ್.ಹೆಳವರ ಅವರು, ಬಸ್‌ನಲ್ಲಿ ಬ್ಯಾಗ್ ಬಿಟ್ಟು ಕೆರೂರಿನಲ್ಲಿ ಇಳಿದಿದ್ದ ಪ್ರಯಾಣಿಕರಿಗೆ ಮೇಲಧಿಕಾರಿಗಳ ಮಾರ್ಗದರ್ಶನದ ಸೂಚನೆ ಮೇರೆಗೆ ಕರೆ ಮಾಡಿ ಮಾಹಿತಿ ನೀಡಿ ಬ್ಯಾಗ್ ಒಪ್ಪಿಸಿದ್ದೇವೆ ಎಂದರು.
    ಸಿಬ್ಬಂದಿ ಮೇಲ್ವಿಚಾರಕ ಬಾಪುಗೌಡ ಪಾಟೀಲ, ಸಿಬ್ಬಂದಿ ಎಚ್.ಡಿ. ಪತ್ತಾರ, ಎನ್.ಆರ್. ಶಿವಳ್ಳಿ, ಬಸವರಾಜ ಬೇನಾಳ, ಆರ್.ಎಂ. ಮುದ್ದೇಬಿಹಾಳ ಮೊದಲಾದವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts