More

    ಸರ್ಕಾರಿ ಕಾಲೇಜಿನಲ್ಲಿ ಓದಿ ಶೇ.93.33 ರಷ್ಟು ಲಿತಾಂಶ

    ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ

    ಪಿಯುಸಿ ದ್ವಿತೀಯ ವರ್ಷದ ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದುಕೊಂಡಿರುವ ಅಂಗವಿಕಲ ವಿದ್ಯಾರ್ಥಿನಿಯೊಬ್ಬರು ಅಂಗವಿಕಲರ ಗುರುತಿನ ಚೀಟಿಗಾಗಿ ಪರದಾಡುತ್ತಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ತನ್ನ ಅಜ್ಜ ಹಾಗೂ ಅಜ್ಜಿಯ ಜತೆಗೆ ವಾಸಿಸುತ್ತಿರುವ ಬಸರಕೋಡ ಸರ್ಕಾರಿ ಪಪೂ ಕಾಲೇಜಿನ ವಿದ್ಯಾರ್ಥಿನಿ ಆರತಿ ರಾಜಪ್ಪ ವಾಲೀಕಾರ ಕಲಾ ವಿಭಾಗದಲ್ಲಿ ಶೇ.93.33 ಲಿತಾಂಶ ದಾಖಲಿಸಿದ್ದಾರೆ. ರಾಜ್ಯಶಾಸದಲ್ಲಿ 100ಕ್ಕೆ 100 ಅಂಕ ಪಡೆದಿರುವ ಆರತಿ ಇತಿಹಾಸ-98, ಸಮಾಜಶಾಸ-96, ಶಿಕ್ಷಣಶಾಸ-96, ಕನ್ನಡ ಭಾಷೆ-98, ಇಂಗ್ಲಿಷ್-72 ಅಂಕ ಪಡೆದುಕೊಂಡಿದ್ದಾರೆ.

    ಅಂಗವಿಕಲ ಆರತಿ

    ಹುಟ್ಟುತ್ತಲೇ ಒಂದು ಕಣ್ಣು ಕಾಣದೆ ಅಂಗವಿಕಲತೆ ಹೊಂದಿರುವ ಆರತಿ ಚಿಕ್ಕವರಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅಜ್ಜ ಹಾಗೂ ಅಜ್ಜಿ ಆಶ್ರಯದಲ್ಲಿ ಬೆಳೆದಿದ್ದಾರೆ. ಅವರ ತಂದೆ, ಮಾವ, ಅಜ್ಜ, ಅಜ್ಜಿ, ಕಾಲೇಜಿನ ಎಲ್ಲ ಉಪನ್ಯಾಸಕ ವರ್ಗದವರು ತನ್ನ ಓದಿಗೆ ನೀರೆರೆದು ಪೋಷಿಸಿದ್ದಾರೆ ಎಂದು ಸಂಬಂಧಿಕರಾದ ರಾಮಪ್ಪ ನಾರಾಯಣಿ ಹೇಳಿದರು.

    ದಕ್ಕದ ಕಾರ್ಡ್

    ದ್ವಿತೀಯ ಪಿಯು ಕಲಾ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೂ ಆರತಿ ಅವರಿಗೆ ಅಂಗವಿಕಲ ಕಾರ್ಡ್ ಸಿಕ್ಕಿಲ್ಲ. ಸಾಕಷ್ಟು ಬಾರಿ ಅರ್ಜಿ ಹಿಡಿದು ಮುದ್ದೇಬಿಹಾಳಕ್ಕೆ ಅಲೆದಾಡಿದ್ದೇನೆ. ಸರ್ಕಾರಿ ಆಸ್ಪತ್ರೆಗೂ ಹೋಗಿ ಬಂದಿದ್ದೇನೆ. ನನ್ನ ಕೆಲಸ ಆಗಿಲ್ಲ. ಗುರುತಿನ ಚೀಟಿ ಸಿಕ್ಕರೆ ಸರ್ಕಾರದ ಸೌಲಭ್ಯ ಪಡೆದುಕೊಂಡು ಓದು ಮುಂದುವರಿಸುವ ಹಂಬಲವನ್ನು ವಿದ್ಯಾರ್ಥಿನಿ ವ್ಯಕ್ತಪಡಿಸುತ್ತಾರೆ.

    ಅಂಗವಿಕಲರ ಗುರುತಿನ ಕಾರ್ಡ್‌ಗಾಗಿ ಪರದಾಡುತ್ತಿರುವ ಕಲಾ ವಿಭಾಗದಲ್ಲಿ ತಾಲೂಕಿಗೆ ಟಾಪರ್ ಆಗಿರುವ ಬಸರಕೋಡದ ವಿದ್ಯಾರ್ಥಿನಿ ಆರತಿ ವಾಲೀಕಾರ ಅವರ ನೆರವಿಗೆ ಧಾವಿಸುವವರು ಅವರ ಮೊಬೈಲ್ ನಂ.7204441189 ಸಂಪರ್ಕಿಸಬಹುದಾಗಿದೆ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts