More

    ಮಹಿಳೆಯರಲ್ಲಿ ಆತ್ಮಶಕ್ತಿ ಹೆಚ್ಚಲಿ

    ಮುದ್ದೇಬಿಹಾಳ: ಎಲ್ಲ ರಂಗಗಳಲ್ಲೂ ಮಹಿಳೆ ಮುಂದುವರಿದಿದ್ದಾಳೆ. ಆದರೆ, ಅವಳ ಮೇಲಿನ ಶೋಷಣೆ ಇನ್ನೂ ತಪ್ಪಿಲ್ಲ ಎಂದು ಅಕ್ಕಮಹಾದೇವಿ ಮಹಿಳಾ ವಿವಿ ಸಿಂಡಿಕೇಟ್ ಸದಸ್ಯೆ ಸಂಗಮ್ಮ ದೇವರಳ್ಳಿ ಹೇಳಿದರು.

    ಪಟ್ಟಣದ ಪುರಸಭೆಯಲ್ಲಿ ಪುರಸಭೆ ಆಡಳಿತ ಮಂಡಳಿ ನೇತೃತ್ವದಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಸೋಮವಾರ ವಸತಿ ಯೋಜನೆ ಲಾನುಭವಿಗಳಿಗೆ ಹಾಗೂ ಪೌರಕಾರ್ಮಿಕ ಮಹಿಳೆಯರ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

    ಪ್ರತಿಯೊಬ್ಬ ಯಶಸ್ವಿ ಮಹಿಳೆಯ ಹಿಂದೆ ಓರ್ವ ಪುರುಷ ಇರುತ್ತಾನೆ. ಆದರೆ, ಸಾಮಾಜಿಕವಾಗಿ ಮಹಿಳೆಗೆ ಧೈರ್ಯ ತುಂಬಿ ಆಕೆ ಸಶಕ್ತಿಕರಣಕ್ಕೆ ಬೆಂಬಲ ದೊರೆಯಬೇಕಿದೆ ಎಂದರು.

    ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಮಾತನಾಡಿ, ಪಟ್ಟಣದ ಪುರಸಭೆಯಲ್ಲಿ ಒಂಭತ್ತು ಜನ ಮಹಿಳಾ ಸದಸ್ಯರಿದ್ದೇವೆ. ಪಟ್ಟಣದ ಅಭಿವೃದ್ಧಿ, ಸ್ವಚ್ಛತೆಯತ್ತ ಹೆಚ್ಚಿನ ಆದ್ಯತೆ ನೀಡಬೇಕು ಎಂಬುದು ನಮ್ಮ ಆಶಯ. ಅದರಂತೆ ಅಧಿಕಾರಿ ವರ್ಗ ನಾಗರಿಕರ ಸಮಸ್ಯೆಗಳಿಗೆ ಧ್ವನಿಯಾಗಿ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

    ಪುರಸಭೆ ಉಪಾಧ್ಯಕ್ಷೆ ಶಹಜಾದಬಿ ಹುಣಸಗಿ, ಮುಖ್ಯಾಧಿಕಾರಿ ಗೋಪಾಲ ಕಾಸೆ, ಸದಸ್ಯೆ ಸಹನಾ ಬಡಿಗೇರ, ಪ್ರಿತಿ ದೇಗಿನಾಳ ಮಾತನಾಡಿದರು.

    ಸದಸ್ಯೆ ಭಾರತಿ ಪಾಟೀಲ, ಸೋನಾಬಾಯಿ ನಾಯಕ, ಷರೀಾ ಮೂಲಿಮನಿ, ಶಾಂತಾಬಾಯಿ ಪೂಜಾರಿ, ಕಂದಾಯಾಧಿಕಾರಿ ಎಂ.ಬಿ.ಮಾಡಗಿ, ಪುರುಷ ಸದಸ್ಯರು ಇದ್ದರು.

    ವಿಶೇಷ ಸನ್ಮಾನ
    ಮಹಿಳಾ ದಿನಾಚರಣೆ ಅಂಗವಾಗಿ ಅಕ್ಕಮಹಾದೇವಿ ವಿವಿ ಸಿಂಡಿಕೇಟ್ ಸದಸ್ಯೆಯಾಗಿ ನೇಮಕವಾದ ಪುರಸಭೆ ಸದಸ್ಯೆ ಸಂಗಮ್ಮ ದೇವರಳ್ಳಿ ಅವರನ್ನು ಸದಸ್ಯ ಮಹಿಬೂಬ ಗೊಳಸಂಗಿ ವಿಶೇಷವಾಗಿ ಸನ್ಮಾನಿಸಿದರು. ಇದೇ ವೇಳೆ ಪೌರಕಾರ್ಮಿಕರು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಸೌಲಭ್ಯ ಪಡೆದುಕೊಂಡ ಲಾನುಭವಿಗಳನ್ನು ಸನ್ಮಾನಿಸಲಾಯಿತು.

    ಜೆಸಿ ಸಂಸ್ಥೆಯಲ್ಲಿ ಮಹಿಳಾ ಉತ್ಸವ
    ಪಟ್ಟಣದ ಪ್ರಗತಿ ಜೆಸಿ ಸಂಸ್ಥೆಯಡಿ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಉತ್ಸವ-ಬಂಧನ-2021ಆಚರಿಸಲಾಯಿತು. ಪುರಸಭೆ ಅಧ್ಯಕ್ಷೆ ಪ್ರತಿಭಾ ಅಂಗಡಗೇರಿ ಉದ್ಘಾಟಿಸಿದರು. ಜೆಸಿ ಶಾಲೆಯ ಮುಖ್ಯಶಿಕ್ಷಕಿ ಸಿಸ್ಟರ್ ಸ್ಟೆಲ್ಲಾ, ಪುರಸಭೆ ಸದಸ್ಯೆ ಪ್ರೀತಿ ದೇಗಿನಾಳ, ಸಹನಾ ಬಡಿಗೇರ, ಭಾರತಿ ಪಾಟೀಲ, ಜೆಸಿ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಶ್ವೇತಾ ನಾವದಗಿ, ಕಾರ್ಯದರ್ಶಿ ಲಕ್ಷ್ಮಿ ಕರಡ್ಡಿ, ಮಂಜುಳಾ ಕರಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts