More

    ರಾಯರ ಹುಂಡಿಗೆ 2.90 ಕೋಟಿ ರೂ. ದೇಣಿಗೆ

    ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿನ ಹುಂಡಿಗಳಲ್ಲಿ ೆಬ್ರವರಿ ತಿಂಗಳಲ್ಲಿ ಭಕ್ತರು 2.90 ಕೋಟಿ ರೂ. ನಗದು ಹಾಗೂ 35 ಗ್ರಾಮ್ ಬಂಗಾರ ಮತ್ತು 1.22 ಗ್ರಾಮ್ ಬೆಳ್ಳಿ ಸಾಮಗ್ರಿಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

    ಶ್ರೀಮಠದಲ್ಲಿ ಹುಂಡಿ ಏರಿಕೆ ಕಾರ್ಯ ಬುಧವಾರ ನಡೆಸಲಾಗಿದ್ದು, ವಿವಿಧ ಮುಖಬೆಲೆಯ 2.84 ಕೋಟಿ ರೂ. ವೌಲ್ಯದ ನೋಟುಗಳು ಹಾಗೂ 5.57 ಲಕ್ಷ ರೂ. ವೌಲ್ಯದ ನಾಣ್ಯಗಳು ಹಾಗೂ ಬಂಗಾರ, ಬೆಳ್ಳಿ ಸಾಮಗ್ರಿಗಳು ದೊರೆತಿವೆ.

    ಕಳೆದ ಕೆಲವು ತಿಂಗಳಿಂದ ಶ್ರೀಮಠದ ಹುಂಡಿಗೆ ಭಕ್ತರು ಅಕ ಪ್ರಮಾಣದಲ್ಲಿ ದೇಣಿಗೆ ನೀಡುತ್ತಿದ್ದು, ಕಳೆದ ತಿಂಗಳು 3 ಕೋಟಿ ರೂ.ಗೂ ಅಕ ಹಣ ಭಕ್ತರಿಂದ ಬಂದಿತ್ತು. ಜತೆಗೆ ಭಕ್ತರು ಶ್ರೀಮಠದ ಕಾರ್ಯಾಲಯದಲ್ಲಿ ಹಣ, ಚೆಕ್ ನೀಡಿ ರಸೀದಿ ಪಡೆಯುತ್ತಿದ್ದು, ಕೋವಿಡ್‌ನಲ್ಲಿ ಕಡಿಮೆಯಾಗಿದ್ದ ಶ್ರೀಮಠದ ಆದಾಯ ಈಗ ಪುನಃ ಏರುಮುಖದಲ್ಲಿ ಸಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts