More

    ದುಬಾರಿ ಬೆಲೆಯ ಕಾರು ಖರೀದಿಸಿದ ಎಂಟಿಬಿ ನಾಗರಾಜ್: ರೇಟು, ಸ್ಪೀಡು ಕೇಳಿದ್ರೆ ಹೌಹಾರ್ತೀರಾ!

    ಬೆಂಗಳೂರು: ರಾಜ್ಯದ ಶ್ರೀಮಂತ ರಾಜಕಾರಣಿಗಳಲ್ಲಿ ಒಬ್ಬರಾದ ಹೊಸಕೋಟೆಯ ಎಂಟಿಬಿ ನಾಗರಾಜ್ ಇತ್ತೀಚೆಗೆ ದುಬಾರಿ ಬೆಲೆಯ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ್ದು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳ ಕಾರ್ ಕಲೆಕ್ಷನ್ ನಲ್ಲಿ ಭಾರೀ ಸದ್ದು ಮಾಡುತ್ತಿದೆ.

    ಇದನ್ನೂ ಓದಿ: ನ್ಯಾನೋ ಕಾರು ಶೀಘ್ರದಲ್ಲಿಯೇ ಮಾರುಕಟ್ಟೆಗೆ: ಈ ಎಲೆಕ್ಟ್ರಿಕ್​ ಕಾರಿನ ಬೆಲೆ ಅತ್ಯಂತ ಅಗ್ಗ 
    ಇಷ್ಟಕ್ಕೂ ಎಂಟಿಬಿ ನಾಗರಾಜ್​ ಅವರಿಗೆ ದುಬಾರಿ ಬೆಲೆಯ ಕಾರು ಹೊಂದುವುದು ಹೊಸತೇನಲ್ಲ. ಆಯಾ ಕಾಲಕ್ಕೆ ತಕ್ಕಂತೆ ಹಲವಾರು ಐಷಾರಾಮಿ ಕಾರುಗಳ ಮಾಲೀಕತ್ವ ಹೊಂದಿರುವ ಈ ಬಿಜೆಪಿ ನಾಯಕ ಪ್ರಸ್ತುತ ಬಿಎಂಡಬ್ಲ್ಯು ಎಕ್ಸ್ಎಂ ಕಾರು ಖರೀದಿಸಿದ್ದು, ಹೊಸ ಕಾರು ವಿತರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಎಂಟಿಬಿ ನಾಗರಾಜ್ ಬಳಿ ಈಗಾಗಲೇ ದುಬಾರಿ ಬೆಲೆಯ ರೋಲ್ಸ್ ರಾಯ್ಸ್ ಫ್ಯಾಂಟಮ್, ಪೋರ್ಷೆಕಯೆನ, ಫೆರಾರಿ ಎಫ್ 8, ಲ್ಯಾಂಡ್ ರೋವರ್ ಮತ್ತು ಮರ್ಸಿಡಿಸ್ ಬೆಂಜ್ ಮತ್ತಿತರ ಕಾರುಗಳಿದ್ದು, ಹೊಸ ಕಾರು ಮಾದರಿಯು ಎಕ್ಸ್ ಡ್ರೈವ್ ಎನ್ನುವ ವೆರಿಯೆಂಟ್ ಮತ್ತು ಪವರ್ ಫುಲ್ ಎಸ್ ಯುವಿ ಆವೃತ್ತಿಯಾಗಿದೆ. ಇದರ ಎಕ್ಸ್ ಶೋರೂಂ ಪ್ರಕಾರ ರೂ.2.60 ಕೋಟಿ ರೂ. ಇದ್ದು, ಇನ್ಸುರೆನ್ಸ್, ಆರ್​ಟಿಒ ಶುಲ್ಕ ಸೇರಿ ಆನ್ ರೋಡ್ ಬೆಲೆ 3.24 ಕೋಟಿ ರೂ. ಆಗಿದೆ.

    ಪವರ್ ಫುಲ್ ಎಂಜಿನ್ ಹೊಂದಿರುವ ಈ ಕಾರು ಕೇವಲ 4.3 ಸೆಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿ.ಮೀ ವೇಗ ಪಡೆದುಕೊಳ್ಳುತ್ತದೆ. ಪ್ರತಿ ಗಂಟೆಗೆ ಗರಿಷ್ಠ 249 ಕಿ.ಮೀ ಟಾಪ್ ಸ್ಪೀಡ್ ಹೊಂದಿದೆ. ಕಾರನ್ನು ಸಂಪೂರ್ಣವಾಗಿ ಪೆಟ್ರೋಲ್ ನೊಂದಿಗೆ ಚಾಲನೆ ಮಾಡಿದರೆ 11.8 ಕಿ.ಮೀ ಮೈಲೇಜ್, ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಸಂಯೋಜನೆಯೊಂದಿಗೆ ಪ್ರತಿ ಲೀಟರ್ ಗೆ 61.9 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ ಎನ್ನಲಾಗಿದೆ. ಈ ಕಾರಿನಲ್ಲಿ 7 ಸೀಟರ್ ಸೌಲಭ್ಯದೊಂದಿಗೆ ಹಲವು ಅತ್ಯಾಧುನಿಕ ಸಲಕರಣೆಗಳಿವೆ.

    ‘ಕ್ರಿಮಿನಲ್‌ಗಳ ಕಪಿಮುಷ್ಠಿಯಲ್ಲಿದೆ ಬಿಹಾರ’: ಹೀಗೆಂದಿದ್ದೇಕೆ ಕೇಂದ್ರ ಸಚಿವ ನಿತ್ಯಾನಂದ ರಾಯ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts