More

    ಸಿಎಸ್​​ಕೆ ನಾಯಕನ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆ ಆಗಿರಲಿಲ್ಲ; ಮ್ಯಾನೇಜ್​ಮೆಂಟ್​ ಇಷ್ಟ ಬೇರೆ ಇತ್ತು !

    ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್​ ತಂಡ (ಸಿಎಸ್​ಕೆ)ದ ಮಾಜಿ ಬ್ಯಾಟ್ಸ್​ಮನ್​ ಸುಬ್ರಹ್ಮಣಿಯನ್​ ಬದ್ರಿನಾಥ್​ ಅವರು ಶಾಕಿಂಗ್​ ವಿಚಾರವೊಂದನ್ನು ಇದೀಗ ತಿಳಿಸಿದ್ದಾರೆ.

    ಚೆನ್ನೈ ಫ್ರಾಂಚೈಸಿಗೆ ಮಹೇಂದ್ರ ಸಿಂಗ್​ ಧೋನಿಯವರನ್ನು ಸಿಎಸ್​ಕೆ ತಂಡದ ನಾಯಕನನ್ನಾಗಿ ಮಾಡಲು ಇಷ್ಟವಿರಲಿಲ್ಲ. ಅವರ ಆಸಕ್ತಿ ಬೇರೆಯೇ ಇತ್ತು ಎಂದು ಹೇಳಿದ್ದಾರೆ.

    ಬದ್ರಿನಾಥ್ ಅವರು ತಮ್ಮ ಯೂಟ್ಯೂಬ್ ಚಾನಲ್​ನಲ್ಲಿ ಮಾತನಾಡಿ, ಐಪಿಎಲ್​ ಪ್ರಾರಂಭವಾದಾಗ, ನಾಯಕನ ಸ್ಥಾನಕ್ಕೆ ಚೆನ್ನೈ ಫ್ರಾಂಚೈಸಿಯ ಮೊದಲ ಆಯ್ಕೆ ಧೋನಿ ಆಗಿರಲಿಲ್ಲ.  2008ರಲ್ಲಿ ಐಪಿಎಲ್​ ಶುರುವಾಗಿದೆ. ಆಗ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮ್ಯಾನೇಜ್​ಮೆಂಟ್ ವೀರೇಂದ್ರ ಸೆಹ್ವಾಗ್​ ಅವರನ್ನೇ ನಾಯಕನನ್ನಾಗಿ ನೇಮಕ ಮಾಡಲು ನಿರ್ಧರಿಸಿತ್ತು. ಆದರೆ ವೀರೇಂದ್ರ ಸೆಹ್ವಾಗ್​ ಅವರು, ತಾವು ದೆಹಲಿಯಲ್ಲಿ ಬೆಳೆದವರು. ಹಾಗಾಗಿ ದೆಹಲಿ ತಂಡದಲ್ಲಿ ಆಡುತ್ತೇನೆ ಎಂದು ಹೇಳಿದರು. 2008ರಲ್ಲಿ ಹರಾಜು ಪ್ರಕ್ರಿಯೆ ಇಲ್ಲದ ಕಾರಣ ಸೆಹ್ವಾಗ್​ ದೆಹಲಿ ತಂಡ ಸೇರಿಕೊಳ್ಳಲು ಸಿಎಸ್​ಕೆ ಮ್ಯಾನೇಜ್​ಮೆಂಟ್​ ಒಪ್ಪಿಕೊಂಡಿತು. ನಂತರವಷ್ಟೇ ಧೋನಿಯನ್ನು ಆರಿಸಿದರು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ರೆಹಮಾನ್, ಕಮಲ್ ಹಾಸನ್​ ಕಡೆಯಿಂದ ಸತತ ಆರು ಗಂಟೆ ಸಂಗೀತ ಸಂಜೆ ಕಾರ್ಯಕ್ರಮ

    2008ರಲ್ಲಿ ಧೋನಿ ತುಂಬ ದುಬಾರಿ ಆಟಗಾರನಾಗಿದ್ದರು. ಆಗಲೇ 6 ಕೋಟಿ ರೂ.ಕೊಟ್ಟು ಕರೆತರಲಾಗಿತ್ತು. ಆದರೆ ಸಿಎಸ್​ಕೆ ತಂಡದ ನಾಯಕನ ಸ್ಥಾನಕ್ಕೆ ಧೋನಿ ಮೊದಲ ಆಯ್ಕೆ ಆಗಿರಲಿಲ್ಲ ಎಂಬ ಈ ವಿಚಾರ ಬಹುತೇಕರಿಗೆ ಗೊತ್ತಿಲ್ಲ ಎಂದು ಬದ್ರಿನಾಥ್​ ತಿಳಿಸಿದ್ದಾರೆ.

    ಹಾಗೇ, ಧೋನಿಯವರು ಜಗತ್ತಿನ ಅತ್ಯುತ್ತಮ ನಾಯಕ ಎಂಬುದರಲ್ಲಿ ಎರಡು ಮಾತಿಲ್ಲ ಎಂದೂ ಹೇಳಿದ್ದಾರೆ. (ಏಜೆನ್ಸೀಸ್​)

    VIDEO: 7 ತಿಂಗಳ ಬಳಿಕ ಪತ್ನಿ ಸಾನಿಯಾ ಮಿರ್ಜಾ ಭೇಟಿಯಾದ ಕ್ರಿಕೆಟಿಗ ಶೋಯಿಬ್ ಮಲಿಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts