More

    ಧೋನಿಗೆ ಭಾರತರತ್ನ ನೀಡಬೇಕೆಂದ ಕಾಂಗ್ರೆಸ್​ ಶಾಸಕ

    ನವದೆಹಲಿ: ಎರಡು ವಿಶ್ವಕಪ್​ ಪ್ರಶಸ್ತಿಗಳನ್ನು ಗೆದ್ದುಕೊಟ್ಟ ಟೀಮ್​ ಇಂಡಿಯಾದ ಮಾಜಿ ನಾಯಕ ಎಂಎಸ್​ ಧೋನಿ ಶನಿವಾರ ನಿವೃತ್ತಿ ಪ್ರಕಟಿಸಿದ ಬಳಿಕ ಅವರಿಗೆ ಕ್ರಿಕೆಟ್​ ವಲಯ ಮತ್ತು ಕ್ರಿಕೆಟೇತರ ಕ್ಷೇತ್ರದಿಂದ ಅಪಾರ ಗೌರವ ಸಲ್ಲಿಕೆಯಾಗುತ್ತಿದೆ. ಎಲ್ಲರೂ ಈಗ ಧೋನಿ ಗುಣಗಾನ ಮಾಡುತ್ತಿದ್ದಾರೆ. ಈ ನಡುವೆ ಮಧ್ಯಪ್ರದೇಶದ ಕಾಂಗ್ರೆಸ್​ ಶಾಸಕರೊಬ್ಬರು ಒಂದು ಹೆಜ್ಜೆ ಮುಂದೆ ಹೋಗಿ, ಧೋನಿಗೆ ದೇಶದ ಅತ್ಯುನ್ನತ ನಾಗರಿಕ ಗೌರವವಾದ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

    ಮಧ್ಯಪ್ರದೇಶದ ಭೋಪಾಲ್​ ಶಾಸಕ ಪಿಸಿ ಶರ್ಮ ಎಂಬವರು, ಧೋನಿ ದೇಶದ ರತ್ನ ಎಂದು ಟ್ವೀಟ್​ ಮಾಡಿದ್ದಾರೆ. ಜತೆಗೆ ಧೋನಿ ಭಾರತೀಯ ಕ್ರಿಕೆಟ್​ ಅನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಿದ್ದಾರೆ. ಹೀಗಾಗಿ ಅವರಿಗೆ ಭಾರತರತ್ನ ನೀಡಿ ಗೌರವಿಸಬೇಕೆಂದು ಹೇಳಿದ್ದಾರೆ.

    ಇದನ್ನೂ ಓದಿ: ಧೋನಿ ವಿದಾಯದ ಬೆನ್ನಲ್ಲೇ ಯುವರಾಜ್​ ನಿವೃತ್ತಿಯಿಂದ ವಾಪಸ್​ ಆಗ್ತಾರಾ?

    ಭಾರತ ಪರ 90 ಟೆಸ್ಟ್​, 350 ಏಕದಿನ ಮತ್ತು 98 ಟಿ20 ಪಂದ್ಯಗಳನ್ನು ಆಡಿರುವ 39 ವರ್ಷದ ಧೋನಿ, 2019ರ ಏಕದಿನ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಕೊನೆಯದಾಗಿ ಆಡಿದ್ದರು. ಐಸಿಸಿಯ ಎಲ್ಲ ಪ್ರಶಸ್ತಿಗಳನ್ನು ಗೆದ್ದುಕೊಂಡ ಏಕೈಕ ನಾಯಕ ಎಂಬ ಹೆಗ್ಗಳಿಕೆ ಅವರದಾಗಿದೆ.

    ಚೀನಾ ಲಿಂಕ್​ ಇದ್ದರೂ, ಡ್ರೀಮ್​11 ಜತೆ ಪ್ರಾಯೋಜಕತ್ವ ಒಪ್ಪಂದ ಸಮರ್ಥಿಸಿಕೊಂಡ ಬಿಸಿಸಿಐ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts