More

    ಕೆಎಲ್​ ರಾಹುಲ್, ಮಯಾಂಕ್‌ಗೆ ಉಪಯುಕ್ತ ಟಿಪ್ಸ್ ನೀಡಿದ ಧೋನಿ!

    ದುಬೈ: ಕನ್ನಡಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ವಿರುದ್ಧ ಹೀನಾಯ ಸೋಲಿಗೆ ಶರಣಾಯಿತು. ಇದರ ನಡುವೆಯೂ ಪಂಜಾಬ್ ತಂಡ ಧೃತಿಗೆಟ್ಟಿಲ್ಲ. ಇದಕ್ಕೆ ಕಾರಣ, ಪಂದ್ಯದ ಬಳಿಕ ಕಿಂಗ್ಸ್ ಇಲೆವೆನ್ ನಾಯಕ ಕೆಎಲ್ ರಾಹುಲ್ ಮತ್ತು ಆರಂಭಿಕ ಮಯಾಂಕ್ ಅಗರ್ವಾಲ್‌ಗೆ ಟೀಮ್ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್‌ಕಿಂಗ್ಸ್ ನಾಯಕ ಎಂಎಸ್ ಧೋನಿ ಅವರಿಂದ ಕೆಲ ಉಪಯುಕ್ತ ಸಲಹೆಗಳು ಲಭಿಸಿವೆ.

    ಪಂದ್ಯದ ಬಳಿಕ ಧೋನಿ ಎದುರಾಳಿ ಆಟಗಾರರಾದ ರಾಹುಲ್ ಮತ್ತು ಮಯಾಂಕ್ ಜತೆಗೆ ವಿವರವಾಗಿ ಮಾತನಾಡಿರುವ ವಿಡಿಯೋ ಮತ್ತು ಚಿತ್ರಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಇಬ್ಬರು ಕನ್ನಡಿಗರಿಗೆ ಧೋನಿ ಯಾವೆಲ್ಲ ಟಿಪ್ಸ್‌ಗಳನ್ನು ನೀಡಿದ್ದಾರೆ ಎಂಬ ಕುತೂಹಲವೂ ಕ್ರಿಕೆಟ್ ಪ್ರೇಮಿಗಳಲ್ಲಿ ಮನೆಮಾಡಿದೆ.

    ಐಪಿಎಲ್‌ನಲ್ಲಿ ಮೊದಲ ಬಾರಿ ನಾಯಕತ್ವ ನಿರ್ವಹಿಸುತ್ತಿರುವ ಕೆಎಲ್ ರಾಹುಲ್ ಅವರು ಉತ್ತಮ ಆರಂಭ ಕಂಡಿಲ್ಲ. ಕೆಲ ರೋಚಕ ಪಂದ್ಯಗಳನ್ನು ಕೈಚೆಲ್ಲಿದ್ದು ಕಿಂಗ್ಸ್ ಇಲೆವೆನ್ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿದೆ. ಇದರಿಂದಾಗಿ ತಂಡ ಸದ್ಯ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿತ ಕಂಡಿದೆ. ಹೀಗಾಗಿ 39 ವರ್ಷದ ಧೋನಿ ನೀಡಿರುವ ಸಲಹೆಗಳು ಕೆಎಲ್ ರಾಹುಲ್‌ಗೆ ಉಪಯುಕ್ತವೆನಿಸುವ ನಿರೀಕ್ಷೆ ಇಡಲಾಗಿದೆ.

    ಇದನ್ನೂ ಓದಿ: ದೇವದತ್ ಪಡಿಕಲ್​​ಗೆ ಸವಾಲೆಸೆದ ಯುವರಾಜ್​! ಕನ್ನಡಿಗನ ಉತ್ತರವೇನು ಗೊತ್ತೇ ?

    ‘ಪಂದ್ಯದ ಬಗ್ಗೆ ವಿಶ್ಲೇಷಣೆ ಮಾಡಲು ಎಂಎಸ್ ಧೋನಿಗಿಂತ ಉತ್ತಮವಾದ ವ್ಯಕ್ತಿ ಬೇರೆ ಯಾರು ಇದ್ದಾರೆ. ಪಂದ್ಯದ ಬಳಿಕ ನಡೆದ ಈ ಮಾತುಕತೆಗಳು ಇಷ್ಟವಾದವು’ ಎಂದು ಐಪಿಎಲ್‌ನ ಟ್ವಿಟರ್ ಖಾತೆಯಲ್ಲಿ ಬರೆಯಲಾಗಿದ್ದು, ಧೋನಿ ಅವರು ರಾಹುಲ್-ಮಯಾಂಕ್ ಜತೆ ಚರ್ಚಿಸುತ್ತಿರುವ ವಿಡಿಯೋವನ್ನೂ ಪ್ರಕಟಿಸಲಾಗಿದೆ.

    ಐಪಿಎಲ್ 13ನೇ ಆವೃತ್ತಿಯಲ್ಲಿ ಸದ್ಯ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರಿಬ್ಬರ ನಡುವೆಯೇ ಆರೆಂಜ್ ಕ್ಯಾಪ್‌ಗೆ ಸ್ಪರ್ಧೆ ನಡೆಯುತ್ತಿದೆ. ಆದರೆ ಇದರ ನಡುವೆಯೂ ಗೆಲುವು ಕೈಗೆಟಕುತ್ತಿಲ್ಲ. ಹೀಗಾಗಿ ಮಯಾಂಕ್ ಅಗರ್ವಾಲ್ ಕೂಡ ಬ್ಯಾಟಿಂಗ್‌ನಲ್ಲಿ ಮಾಡುತ್ತಿರುವ ತಪ್ಪುಗಳ ಬಗ್ಗೆ ಧೋನಿ ಎಚ್ಚರಿಸಿದ್ದು, ಈ ಸಲಹೆಗಳು ಅವರಿಗೆ ಮುಂದಿನ ದಿನಗಳಲ್ಲಿ ಅಮೂಲ್ಯವೆನಿಸುವ ನಿರೀಕ್ಷೆಯನ್ನೂ ಇಡಲಾಗಿದೆ. ಪಂಜಾಬ್ ತಂಡ ತನ್ನ ಮುಂದಿನ ಪಂದ್ಯದಲ್ಲಿ ಗುರುವಾರ ಸನ್‌ರೈಸರ್ಸ್‌ ತಂಡವನ್ನು ಎದುರಿಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts