More

    ಐಪಿಎಲ್ 2024 ಗಾಗಿ ಕೈಜೋಡಿಸಿದ ಜಿಯೋಸಿನೆಮಾ ಮತ್ತು ಧೋನಿ

    ಮುಂಬೈ:ಐಪಿಎಲ್ 2024 ಸೀಸನ್ಗಾಗಿ ಜನರ ಕಾತುರತೆ ಹೆಚ್ಚುತ್ತಿದ್ದಂತೆಯೇಜಿಯೋ ಸಿನಿಮಾ ಈಗಾಗಲೇ ಭರವಸೆ ನೀಡಿದಂತೆ ಮತ್ತೊಂದು ಆಸಕ್ತಿಕರ ಆವೃತ್ತಿಗಾಗಿ ತನ್ನ ಅಭಿಯಾನವನ್ನು ಬಿಡುಗಡೆಗೊಳಿಸಿದೆ ಅಭಿಯಾನವು ಎರಡು ಚಲನಚಿತ್ರಗಳನ್ನು ಒಳಗೊಂಡಿದ್ದುಒಂದರಲ್ಲಿ ಎಂ.ಎಸ್‌.ಧೋನಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆಎಲ್ಲಾ ಮೂರು ಜಾಹೀರಾತು ಚಲನಚಿತ್ರಗಳು  ಡಿಜಿಟಲ್‌ನಲ್ಲಿ ಟಾಟಾ ಐಪಿಎಲ್‌ ವೀಕ್ಷಣೆಗೆ ಸಮಗ್ರ ಉತ್ಸುಕತೆಯನ್ನು ಬಿಂಬಿಸುತ್ತವೆ. ಈ ಕ್ಯಾಂಪೇನ್‌ ಟಾಟಾ ಐಪಿಎಲ್‌ ಸೇರಿದಂತೆ ಇತರ ಡಿಜಿಟಲ್‌ ಮಾಧ್ಯಮದ ಮೂಲಕ ನೇರ ಕ್ರೀಡೆಯನ್ನು ವೀಕ್ಷಿಸಲು ಆಯ್ಕೆಯ್ನು ಆರಿಸಿಕೊಳ್ಳುವ ಭಾರತೀಯರ ಸಂಖ್ಯೆ ಹೆಚ್ಚುತ್ತಿದೆ ಎಂಬ ಅಂಶವನ್ನು ಒಳಗೊಂಡಿದೆಕಳೆದ ಸೀಸನ್ನಲ್ಲಿ ಜಿಯೋ ಸಿನಿಮಾ 449 ಮಿಲಿಯನ್‌ ಜನರನ್ನು ತಲುಪಿ ದಾಖಲೆ ನಿರ್ಮಿಸಿದೆ.

     ಚಲನಚಿತ್ರವು ದಿ ಸ್ಕ್ರಿಪ್ಟ್ ರೂಂನ  ಪರಿಕಲ್ಪನೆಯಾಗಿದ್ದು ಮತ್ತು ಅರ್ಲಿ ಮ್ಯಾನ್ ಫಿಲ್ಮ್ಸ್ ಇದನ್ನು ನಿರ್ಮಿಸಿದೆಇದರಲ್ಲಿ ಚಲನಚಿತ್ರದಲ್ಲಿ ಎಂಎಸ್ ಧೋನಿ ಅಜ್ಜ ಮತ್ತು ಮೊಮ್ಮಗನ ವಿಶಿಷ್ಟ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಚಿತ್ರವು ಒಂದು ಹಾಸ್ಯಮಯ ಚಿತ್ರವಾಗಿದ್ದುಇದು ಮೊಮ್ಮಗನು ತನ್ನ ಫೋನ್ ಪರದೆಯಲ್ಲಿ ಟಾಟಾ ಐಪಿಎಲ್ ಪಂದ್ಯ ವೀಕ್ಷಿಸುತ್ತಿರುವ ದೃಶ್ಯದೊಂದಿಗೆ ಆರಂಭಗೊಳ್ಳುತ್ತದೆನಂತರ ತಾತ ಕೂಡ ತನ್ನ ಫೋನ್ನಲ್ಲಿ ಅದೇ ಪಂದ್ಯವನ್ನು ನೋಡುವುದರಲ್ಲಿ ಆಳವಾಗಿ ತಲ್ಲೀನನಾಗಿರುವುದನ್ನು ತೋರಿಸುತ್ತದೆನಂತರ ಹಠಾತ್‌ ತಾತನಿಗೆ ಎದೆ ನೋವು ಕಾಣಿಸಿಕೊಳ್ಳುತ್ತದೆ.

    ಆಂಬ್ಯುಲೆನ್ಸ್ ಅನ್ನು ಕರೆಸಲಾಗುತ್ತದೆಆಂಬ್ಯುಲೆನ್ಸ್‌ ಆಸ್ಪತ್ರೆ ಕಡೆಗೆ ಸಾಗಿದಾಗ ದಾರಿಯಲ್ಲಿ ಅದರಲ್ಲಿನ ಮೆಡಿಕಲ್‌ ಅಟೆಂಡೆಂಟ್‌ ಕೂಡ ತನ್ನ ಫೋನ್ನಲ್ಲಿ ಪಂದ್ಯ ವೀಕ್ಷಿಸುತ್ತಿರುವುದು ಕಾಣಿಸುತ್ತದೆತಾತ ಮತ್ತು ಮೊಮ್ಮಗ ಹಾಸ್ಯಮಯವಾಗಿ ವ್ಯಾನ್ ಹಿಂಭಾಗದಲ್ಲಿ ಆರಾಮದಾಯಕವಾಗಿರುತ್ತಾರೆನಂತರ ತಾತ ಒಮ್ಮೆ ತೇಗುತ್ತಾನೆ ಮತ್ತು ಅದು ಎದೆನೋವು ಅಲ್ಲ ಕೇವಲ ಗ್ಯಾಸ್‌ ಸಮಸ್ಯೆ ಎಂದು ಹೇಳುವಲ್ಲಿ ಕಥೆಯು ತಿರುವು ಪಡೆದುಕೊಳ್ಳುತ್ತದೆಅಷ್ಟರಲ್ಲಿ ಪಂದ್ಯದಲ್ಲಿ ಸಿಕ್ಸರ್ ಹೊಡೆಯುತ್ತಾರೆ ಮತ್ತು ಇದು ಮೂವರನ್ನು ಹುರಿದುಂಬಿಸುತ್ತದೆಚಿತ್ರ ಇಲ್ಲಿಗೆ ಅಂತ್ಯಗೊಳ್ಳುತ್ತದೆ ಕ್ಯಾಂಪೇನ್‌ ಟಿವಿಡಿಜಿಟಲ್‌, ಸಾಮಾಜಿಕ ಜಾಲತಾಣ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts