More

    ಐಪಿಎಲ್ ಮೊದಲ ಪಂದ್ಯದಲ್ಲೇ ವಿಶೇಷ ದಾಖಲೆ ಬರೆದ ಧೋನಿ

    ಅಬುಧಾಬಿ: ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ಕಿಂಗ್ಸ್ ತಂಡದ ನಾಯಕರಾಗಿ 100ನೇ ಗೆಲುವು ದಾಖಲಿಸುವ ಮೂಲಕ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಯಶಸ್ವಿ ಪುನರಾಗಮನ ಕಂಡಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಶನಿವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ 5 ವಿಕೆಟ್ ಗೆಲುವು ಕಾಣುವುದರೊಂದಿಗೆ ಧೋನಿ ಈ ಸಾಧನೆ ಮಾಡಿದರು.

    ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಮುಂಬೈ ತಂಡ 9 ವಿಕೆಟ್‌ಗೆ 162 ರನ್ ಪೇರಿಸಿದರೆ, ಸಿಎಸ್‌ಕೆ ತಂಡ ಆರಂಭಿಕರಾದ ಶೇನ್ ವ್ಯಾಟ್ಸನ್ (4) ಮತ್ತು ಮುರಳಿ ವಿಜಯ್ (1) ವಿಕೆಟ್‌ಗಳನ್ನು ಬೇಗನೆ ಕಳೆದುಕೊಂಡು ಆಘಾತ ಎದುರಿಸಿತ್ತು. ಆದರೆ ಅಂಬಟಿ ರಾಯುಡು (71 ರನ್ 48 ಎಸೆತ, 6 ಬೌಂಡರಿ, 3 ಸಿಕ್ಸರ್) ಮತ್ತು ಫಾಫ್​ ಡು ಪ್ಲೆಸಿಸ್ (58*ರನ್, 44 ಎಸೆತ, 6 ಬೌಂಡರಿ) ಜವಾಬ್ದಾರಿಯು ಬ್ಯಾಟಿಂಗ್‌ನಿಂದ 19.2 ಓವರ್‌ಗಳಲ್ಲಿ 5 ವಿಕೆಟ್‌ಗೆ 166 ರನ್ ಗಳಿಸಿ ಶುಭಾರಂಭ ಮಾಡಿತು. ಸ್ಯಾಮ್​ ಕರ್ರನ್​ ಆಲ್ರೌಂಡ್​ ನಿರ್ವಹಣೆಯೊಂದಿಗೆ ಮಿಂಚಿ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಸಿಕೊಂಡರು.

    ಧೋನಿ ಐಪಿಎಲ್‌ನಲ್ಲಿ ತಂಡವೊಂದರ ನಾಯಕರಾಗಿ 100 ಗೆಲುವು ಕಂಡ ಮೊದಲ ನಾಯಕರಾಗಿದ್ದಾರೆ. ಗೌತಮ್ ಗಂಭೀರ್ ಕೆಕೆಆರ್ ನಾಯಕರಾಗಿ 61 ಜಯ ಕಂಡಿದ್ದು 2ನೇ ಅತ್ಯುತ್ತಮ ಸಾಧನೆ. ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ (60) 3ನೇ ಸ್ಥಾನದಲ್ಲಿದ್ದಾರೆ.

    ಇದನ್ನೂ ಓದಿ: ಭಾರತದಲ್ಲಿ ಸಚಿನ್-ಕೊಹ್ಲಿಗಿಂತ ಈ ಕ್ರಿಕೆಟಿಗನೇ ಫೇಮಸ್ ಎಂದ ಗಾವಸ್ಕರ್

    ತಂಡದ ಅನುಭವಿ ಆಟಗಾರರಿಂದಲೇ ಗೆಲುವು ಬಂದಿತು ಎಂದಿರುವ ಧೋನಿ, ಐಪಿಎಲ್‌ನಲ್ಲಿ ಯುವ ಮತ್ತು ಅನುಭವಿ ಆಟಗಾರರ ಮಿಶ್ರಣ ಅತ್ಯಗತ್ಯ. ಐಪಿಎಲ್‌ನಲ್ಲಿ ಯುವ ಆಟಗಾರನೊಬ್ಬ ಅನುಭವಿ ಆಟಗಾರರೊಂದಿಗೆ 60-70 ದಿನಗಳ ಸಮಯ ಕಳೆಯುವುದು ಕೂಡ ಅವರಿಗೆ ಲಾಭದಾಯಕವಾಗುತ್ತದೆ ಎಂದು ಪಂದ್ಯದ ಬಳಿಕ ಹೇಳಿದರು. ಎಂಎಸ್ ಧೋನಿ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್ ಹಿಂದೆ 250 ಬಲಿ ಪಡೆದ ಮೊದಲ ವಿಕೆಟ್ ಕೀಪರ್ ಎನಿಸಿದರು. ಈ ಪೈಕಿ 167 ಕ್ಯಾಚ್ ಮತ್ತು 83 ಸ್ಟಂಪಿಂಗ್ ಸೇರಿವೆ.

    ಮುಂಬೈ ನಾಯಕ ರೋಹಿತ್ ಶರ್ಮ ಸಿಎಸ್‌ಕೆ ಬೌಲರ್‌ಗಳಿಗೆ ಗೆಲುವಿನ ಶ್ರೇಯ ನೀಡಿದರು. ಪ್ಲೆಸಿಸ್-ರಾಯುಡು ಅವರಂತೆ ನಮ್ಮ ತಂಡದಲ್ಲಿ ಯಾರೂ ಕ್ರೀಸ್‌ಗೆ ಅಂಟಿಕೊಂಡು ನಿಲ್ಲಲಿಲ್ಲ. ಮೊದಲ 10 ಓವರ್‌ಗಳಲ್ಲಿ 85 ರನ್ ಪೇರಿಸಿದ್ದರೂ ಬಳಿಕ ಸಿಎಸ್‌ಕೆ ಬೌಲರ್‌ಗಳ ಅತ್ಯುತ್ತಮ ದಾಳಿ ಎದುರು ಎಡವಿದೆವು. ಯುಎಇ ಪಿಚ್‌ನಲ್ಲಿ ಆಡುವ ಬಗ್ಗೆ ನಾವಿನ್ನೂ ಕಲಿತುಕೊಳ್ಳಬೇಕಾಗಿದೆ. ಮುಂದಿನ ದಿನಗಳಲ್ಲಿ ತಪ್ಪುಗಳನ್ನು ಸರಿಪಡಿಸಿಕೊಳ್ಳುವೆವು ಎಂದು ರೋಹಿತ್ ಹೇಳಿದರು. ಮುಂಬೈ ಇಂಡಿಯನ್ಸ್ ತಂಡ ಸತತ 8ನೇ ವರ್ಷ ಐಪಿಎಲ್‌ನಲ್ಲಿ ಮೊದಲ ಪಂದ್ಯದಲ್ಲಿ ಸೋಲು ಕಂಡಿತು. 2012ರಲ್ಲಿ ಕಡೆಯದಾಗಿ ಮುಂಬೈ ಮೊದಲ ಪಂದ್ಯ ಜಯಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts