More

    200ನೇ ಐಪಿಎಲ್ ಪಂದ್ಯವಾಡಿದ ಕ್ಯಾಪ್ಟನ್ ಕೂಲ್ ಎಂಎಸ್ ಧೋನಿ..!

    ಅಬುಧಾಬಿ: ಕ್ಯಾಪ್ಟನ್ ಕೂಲ್ ಎಂದೇ ಹೆಸರಾಗಿರುವ ಎಂಎಸ್ ಧೋನಿ ಐಪಿಎಲ್ ಇತಿಹಾಸದಲ್ಲೇ ತಮ್ಮದೇ ಛಾಪು ಮೂಡಿಸಿರುವ ಆಟಗಾರ. ಚೆನ್ನೈ ಸೂಪರ್ ಕಿಂಗ್ಸ್ ತಂಡ ಮೂರು ಬಾರಿ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಧೋನಿ ಪಾತ್ರ ದೊಡ್ಡದು. ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಕಣಕ್ಕಿಳಿಯುವ ಮೂಲಕ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದರು ಧೋನಿ. 200ನೇ ಐಪಿಎಲ್ ಪಂದ್ಯವಾಡಿದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಭಾರತ ತಂಡದ ಮಾಜಿ ನಾಯಕ ಪಾತ್ರರಾದರು. 

    ಟಾಸ್ ವೇಳೆ 200ನೇ ಪಂದ್ಯದ ಕುರಿತು ಡ್ಯಾನಿ ಮಾರಿಸನ್ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಧೋನಿ, ನೀವು ಪ್ರಶ್ನೆ ಕೇಳಿದ ಮೇಲೆಯೇ ತಿಳಿಯಿತು. ಇದು ನನಗೆ 200ನೇ ಪಂದ್ಯ, ಸುದೀರ್ಘ ಅವಧಿಗೆ ಆಡಲು ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಜತೆಗೆ ಯಾವುದೇ ಗಾಯಗಳಾದೆ ಆಡಿರುವೆ. ಇದು ಕೇವಲ ಸಂಖ್ಯೆಯಷ್ಟೇ ಎಂದು ಹೇಳಿದ್ದಾರೆ. ಐಪಿಎಲ್ ಆರಂಭಗೊಂಡ 2008ರಿಂದಲೂ ಧೋನಿ ಸಿಎಸ್‌ಕೆ ತಂಡ ಮುನ್ನಡೆಸುತ್ತಿದ್ದಾರೆ. 2 ವರ್ಷಗಳ ಕಾಲ ಸಿಎಸ್‌ಕೆ ಅಮಾನತುಗೊಂಡಿದ್ದ ವೇಳೆ ಧೋನಿ ರೈಸಿಂಗ್ ಪುಣೆ ಸೂಪರ್‌ಜೈಂಟ್ಸ್ ತಂಡದ ಪರ ಆಡಿದ್ದರು.

    ಇದಕ್ಕೂ ಮೊದಲು ಐಪಿಎಲ್‌ನಲ್ಲಿ ಅತಿಹೆಚ್ಚು ಪಂದ್ಯವಾಡಿದ್ದ ಸುರೇಶ್ ರೈನಾ (194 ಪಂದ್ಯ) ಹೆಸರಿನಲ್ಲಿ ದಾಖಲೆಯನ್ನು ಧೋನಿ ಹಿಂದಿಕ್ಕಿದ್ದರು. ಇದುವರೆಗೂ ಆಡಿರುವ 199 ಪಂದ್ಯಗಳಿಂದ ಧೋನಿ, 23 ಅರ್ಧಶತಕ ಸೇರಿದಂತೆ 4568 ರನ್ ಸಿಡಿಸಿದ್ದಾರೆ. 84 ರನ್ ವೈಯಕ್ತಿಕ ಅಧಿಕ ಮೊತ್ತವಾಗಿದೆ. ಟೂರ್ನಿಯಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿರುವ 3ನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಕ್ರಿಸ್ ಗೇಲ್ (333 ಸಿಕ್ಸರ್) ಹಾಗೂ ಎಬಿ ಡಿವಿಲಿಯರ್ಸ್‌ (231 ಸಿಕ್ಸರ್) ಮೊದಲ ಎರಡು ಸ್ಥಾನದಲ್ಲಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆ ಎಲ್ಲ ಆವೃತ್ತಿಗಳಲ್ಲಿ ಪ್ಲೇ-ಆ್ ಹಂತಕ್ಕೇರಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts