More

    ಶೈಕ್ಷಣಿಕ ಬುನಾದಿ ಹಾಕಿದ ಶ್ರೀಗಳು


    ರಾವಂದೂರು : ಪಿರಿಯಾಪಟ್ಟಣ ತಾಲೂಕು ರಾವಂದೂರು ಮುರುಘಾ ಮಠದ ಆವರಣದಲ್ಲಿ ಇತ್ತೀಚೆಗೆ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಅವರ 30ನೇ ವರ್ಷದ ಸ್ಮರಣೋತ್ಸವ ಕಾರ್ಯಕ್ರಮ ಆಯೋಜಿಸಲಾಗಿತ್ತು.


    ಬಸವ ಪ್ರಭು ಯೋಗೀಶ ಸ್ವಾಮೀಜಿ ಮಾತನಾಡಿ, ಸಮಾಜಕ್ಕೆ ಶೈಕ್ಷಣಿಕ ಬುನಾದಿ ಹಾಕಿಕೊಟ್ಟವರು ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿಗಳು. ಅವರ ಆದರ್ಶಗಳನ್ನು ಇಂದಿನ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


    ಮುರುಘಾ ಮಠದ ಶ್ರೀ ಮೋಕ್ಷ ಪತಿ ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಶ್ರೀಗಳು, ಭಕ್ತರು ನೀಡಿದ ದತ್ತಿ, ದೇಣಿಗೆಯಲ್ಲಿ ಆಸ್ಪತ್ರೆ, ವಿದ್ಯಾರ್ಥಿನಿಲಯ ತೆರೆಯುವ ಮೂಲಕ ಆದರ್ಶ ಪುರುಷರಾದರು. ಅಲ್ಲದೆ ದೇಶದ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಬಳಿ ಇದ್ದ ಚಿನ್ನ, ಹಣ ದಾನ ಮಾಡುವ ಮೂಲಕ ಮಹಾತ್ಮ ಗಾಂಧೀಜಿ ಅವರಿಗೆ ಪ್ರೀತಿ ಪಾತ್ರರಾದ ಗುರುಗಳಾಗಿದ್ದರು ಎಂದು ತಿಳಿಸಿದರು.


    ಕಾರ್ಯಕ್ರಮದಲ್ಲಿ ಶಿಕ್ಷಕ ಪಿ.ಮೈ.ಕಾಂತರಾಜು ಮಾತನಾಡಿದರು. ಕಾರ್ಯಕ್ರಮದ ನಿಮಿತ್ತ ಕಲಾವಿದರಿಂದ ವಚನ ಗಾಯನ ನಡೆಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಗ್ರಾಪಂ ಮಾಜಿ ಅಧ್ಯಕ್ಷ ಆರ್.ಎಸ್.ವಿಜಯಕುಮಾರ್, ಮುಖಂಡರಾದ ಆರ್.ಟಿ.ಅನುಷ್ ಪಟೇಲ್, ಸತೀಶ್, ಸುರೇಶ್, ಕುಮಾರ್ ವಿಜಯ್, ಮಹೇಶ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts