More

    ಕೃಷಿ ಕಾಯ್ದೆ ಹಿಂಪಡೆಯಲು ಸೋಲು ಕಾರಣ: ಕಾರ್ಯಕರ್ತರ ಸಭೆಯಲ್ಲಿ ಸಂಸದ ಸುರೇಶ್ ಹೇಳಿಕೆ

    ಚನ್ನಪಟ್ಟಣ :  ಹಲವು ಉಪಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆಯಾದ ಕಾರಣ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ವಾಪಸ್ ಪಡೆದಿದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
    ನಗರದ ಹೊರವಲಯದ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪಕ್ಷದ ಕಾರ್ಯಕರ್ತರ ಸಭೆ ನಂತರ ಸುದ್ದಿಗಾರರೊಂದಿಗೆ ವಾತನಾಡಿದ ಅವರು, ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ನಡೆದ ನಿರಂತರ ಹೋರಾಟದಿಂದ ಸರ್ಕಾರ ಕಾಯ್ದೆಗಳನ್ನು ಹಿಂಪಡೆದಿದೆ.

    ಈ ಹೋರಾಟದಲ್ಲಿ ಸುವಾರು 800 ರೈತರು ಹುತಾತ್ಮರಾಗಿದ್ದಾರೆ. ಒಂದು ವರ್ಷದ ನಂತರವಾದರೂ ಪ್ರಧಾನಿಗಳಿಗೆ ಪ್ರಜಾಪ್ರಭುತ್ವದ ಹೋರಾಟದ ಬಗ್ಗೆ ಗೌರವ ಬಂದಿದೆ ಎಂದು ಟೀಕಿಸಿದರು. ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ಸಾಕಷ್ಟು ಬೆಳೆ ಹಾನಿಯಾಗಿದೆ. ಆದರೆ, ಸರ್ಕಾರಕ್ಕೆ ಈ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ಸ್ವತಃ ಮುಖ್ಯಮಂತ್ರಿಗಳು ಮೌನ ವಹಿಸಿರುವುದು ನೋಡಿದರೆ, ರಾಜ್ಯದ ಜನರ ಮೇಲೆ ಇವರಿಗೆ ಯಾವ ರೀತಿ ಕಾಳಜಿ ಇದೆ ಎಂಬುದು ಗೊತ್ತಾಗುತ್ತದೆ ಎಂದರು.

    ತನಿಖೆ ಮಾಡಿಸಿ ಸತ್ಯ ಬಹಿರಂಗಪಡಿಸಲಿ: ಬಿಟ್ ಕಾಯಿನ್ ವಿಚಾರವಾಗಿ ಕಾಂಗ್ರೆಸ್ ವಿರುದ್ಧದ ಟೀಕೆ ಬಗ್ಗೆ ಉತ್ತರಿಸಿದ ಸುರೇಶ್, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಅವರದ್ದೇ ಆಗಿದೆ. ಎಲ್ಲ ತನಿಖಾ ಸಂಸ್ಥೆಗಳು ಅವರ ಹಿಡಿತದಲ್ಲಿವೆ. ಎಲ್ಲ ತನಿಖೆ ಮಾಡಿಸಿ ಸತ್ಯ ಬಹಿರಂಗಪಡಿಸಲಿ. ಈ ಪ್ರಕರಣದಲ್ಲಿ ಯಾರಿದ್ದಾರೆ, ಯಾರ ಮಕ್ಕಳಿದ್ದಾರೆ ಅನ್ನೋದು ಗೊತ್ತಾಗುತ್ತದೆ. ಯಾರ‌್ಯಾರ ಖಾತೆಯಿಂದ ಹಣ ವರ್ಗಾವಣೆಯಾಗಿದೆ, ಯಾರ‌್ಯಾರ ಬಳಿ ಬಿಟ್ ಕಾಯಿನ್ ಇತ್ತು ಎಂಬುದು ತಿಳಿಯುತ್ತದೆ ಎಂದರು.

    ಕಾಂಗ್ರೆಸ್‌ನಲ್ಲಿ ಫೈಟ್ ಇಲ್ಲ :
    ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ನಾಯಕರ ನಡುವೆ ಫೈಟ್ ನಡೆಯುತ್ತಿದೆ ಎಂಬ ವಾಜಿ ಸಿಎಂ ಜಗದೀಶ ಶೆಟ್ಟರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸುರೇಶ್, ನಮ್ಮ ಪಕ್ಷದಲ್ಲಿ ಯಾವ ಸೀಟ್‌ಗೂ ಫೈಟ್ ನಡೆಯುತ್ತಿಲ್ಲ, ಅದು ನಡೆಯುತ್ತಿರುವುದು ಬಿಜೆಪಿಯಲ್ಲಿ. ಶೆಟ್ಟರ್ ದೆಹಲಿಗೆ ಯಾಕೆ ಹೋಗಿದ್ದರು? ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದೇಕೆ ಎಂದು ಹೇಳಲಿ. ಮುಂದಿನ 2 ತಿಂಗಳಲ್ಲಿ ಬದಲಾವಣೆ ಆಗಲಿದೆ ಎಂದು ಅವರ ಪಕ್ಷದ ನಾಯಕ ಯತ್ನಾಳ್ ಹೇಳಿದ್ದಾರೆ. ಅದು ಯಾವ ವಿಚಾರ ಎಂದು ಅವರು ಸ್ಪಷ್ಟಪಡಿಸಲಿ ಎಂದು ಸುರೇಶ್ ಸವಾಲು ಹಾಕಿದರು.

    ಚನ್ನಪಟ್ಟಣ : ಕೃಷಿ ಕಾಯ್ದೆಗಳನ್ನು ಹಿಂಪಡೆದ ಕೇಂದ್ರ ಸರ್ಕಾರದ ನಿಲುವನ್ನು ಸ್ವಾಗತಿಸಿ ನಗರದ ಅಂಚೆಕಚೇರಿ ರಸ್ತೆಯಲ್ಲಿ ಕರ್ನಾಟಕ ರೈತಸಂದ ಪದಾಧಿಕಾರಿಗಳು ಶನಿವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
    ರೈತಸಂದ ವಿಭಾಗೀಯ ಉಪಾಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆದಿರುವುದು ರೈತ ಚಳವಳಿಗೆ ಸಿಕ್ಕ ಜಯವಾಗಿದೆ ಎಂದು ಅಭಿಪ್ರಾಯಪಟ್ಟರು.

    ಪ್ರಧಾನಮಂತ್ರಿಗಳು ಒಂದು ವರ್ಷ ಸತಾಯಿಸಿ ಕಾಯ್ದೆಗಳನ್ನು ಹಿಂಪಡೆದಿದ್ದಾರೆ. ಒಂದು ವರ್ಷ ನಡೆದ ನಿರಂತರ ಹೋರಾಟದಿಂದ ರೈತರು ಹಾಗೂ ಜನಸಾವಾನ್ಯರಿಗೂ ಸಮಸ್ಯೆ ಉಂಟಾಗಿತ್ತು. ಈ ಕಾರಣದಿಂದ ಮೋದಿ ಅವರು ದೇಶದ ಜನತೆಯ ಕ್ಷಮೆ ಯಾಚಿಸಿಬೇಕು. ಕೂಡಲೇ ವಿಶೇಷ ಅಧಿವೇಶನ ಕರೆದು, ಕಾಯ್ದೆ ವಾಪಸ್ ಪಡೆದಿರುವ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಆಳುವ ಸರ್ಕಾರಗಳು ತಮ್ಮಿಷ್ಟದ ತೀರ್ವಾನಗಳನ್ನು ಕೈಗೊಳ್ಳುವ ಮುನ್ನ ಚಿಂತನೆ ನಡೆಸಬೇಕು ಹಾಗೂ ಜನಾಭಿಪ್ರಾಯವನ್ನು ಆಲಿಸಬೇಕು ಎಂಬುದು ಮುಂದಿನ ದಿನಗಳಲ್ಲಾದರೂ ಕಾರ್ಯರೂಪಕ್ಕೆ ಬರಬೇಕಿದೆ ಎಂದರು.
    ಸಂಘದ ಜಿಲ್ಲಾ ಗೌರವಾಧ್ಯಕ್ಷರಾದ ಕೃಷ್ಣಯ್ಯ, ತಿಮ್ಮೇಗೌಡ, ಸಂಟನಾ ಕಾರ್ಯದರ್ಶಿ ಕೆ.ಎನ್.ರಾಜು, ಉಪಾಧ್ಯಕ್ಷ ಎಂ.ರವಿ, ತಾಲೂಕು ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷ ವಿಜಯ್‌ಕುವಾರ್, ಕಕಜವೇ ಜಿಲ್ಲಾಧ್ಯಕ್ಷ ಬೇವೂರು ಯೋಗೇಶ್‌ಗೌಡ ಸೇರಿ ಹಲವರು ಉಪಸ್ಥಿತರಿದ್ದರು.

     

     

     

     

     

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts