More

    ದಾಂಧಲೆ ನಡೆಸಿದವರನ್ನು ಬಿಡಲಾಗದು: ಸಂಸದ ಮುನಿಸ್ವಾಮಿ

    ಕೋಲಾರ : ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ದಾಂಧಲೆಯಲ್ಲಿ ತಪ್ಪು ಮಾಡದ ಅಮಾಯಕ ಕಾರ್ಮಿಕರ ಪರ ನಿಲ್ಲಲು ಬದ್ದ, ಆದರೆ ಉದ್ದೇಶಪೂರ್ವಕವಾಗಿ ದಾಂಧಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳದೇ ಬಿಡಲು ಸಾಧ್ಯವಿದ್ದ ಎಂದು ಸಂಸದ ಎಸ್.ಮುನಿಸ್ವಾಮಿ ಗುಡುಗಿದರು.
    ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು,ನಾವು ಕಾರ್ಮಿಕರ ಪರ ಎಂದು ಹೇಳಿಕೊಂಡು ಉದ್ದೇಶಪೂರ್ವಕವಾಗಿ ದುಷ್ಕೃತ್ಯ ಎಸಗಿದವರನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ, ಸಂಘಟನೆಗಳವರು ಏನೇನು ಮಾಡಿದ್ದಾರೆ ಎಂದು ನನಗೆ ಗೊತ್ತಿದೆ. 7000 ಕಾರ್ಮಿಕರ ಮೇಲೆ ಎಫ್‍ಐಆರ್ ಹಾಕಿದ್ದರೆ ಅದನ್ನು ತೆಗೆಸುತ್ತೇವೆ, ತಪ್ಪು ಮಾಡದವರು ಹೆದರುವ ಅಗತ್ಯವಿಲ್ಲ, ಯುವಕರು, ನಿರುದ್ಯೋಗಿಗಳ ಪರ ಕೇಂದ್ರ,ರಾಜ್ಯ ಸರ್ಕಾರಗಳು ಇವೆ, ಡಿಸಿ ಆಫೀಸ್ ಮುಂದೆ ಪ್ರತಿಭಟನೆ ಮಾಡಿದವರು ಮಾತ್ರ ಕಾರ್ಮಿಕರ ಪರ ಅಲ್ಲ ಛೇಡಿಸಿದರು
    ನೌಕರರಿಗೆ ವೇತನ ಸಿಗುವಲ್ಲಿ ಆಗಿರುವ ಅನ್ಯಾಯಕ್ಕೆ ಸಂಬಂಧಿಸಿದಂತೆ ಕಂಪನಿ ತನ್ನ ಉಪಾಧ್ಯಕ್ಷರನ್ನು ವಜಾ ಮಾಡಿದೆ.ಕಂಪನಿ ಕಡೆಯಿಂದ ಆಗಿರುವ ಲೋಪಕ್ಕೆ ಕ್ಷಮೆ ಕೋರಿದೆ ಎಂದ ಅವರು, ನಾವೂ ಕಾರ್ಮಿಕ ಗುತ್ತಿಗೆದಾರರ ಮೇಲು ಕೇಸ್ ಹಾಕುತ್ತೇವೆ ಎಂದರು.
    ಇಂತಹ ಘಟನೆಗಳು ಕೋಲಾರ ಜಿಲ್ಲೆಯ ಭವಿಷ್ಯಕ್ಕೆ ಕುತ್ತು ತರುತ್ತವೆ, ಜಿಲ್ಲೆಯಲ್ಲಿ ಕೈಗಾರಿಕಾಭಿವೃದ್ದಿಗೆ 6 ಸಾವಿರ ಎಕರೆ ಜಾಗ ಗುರುತಿಸಿದ್ದೇವೆ, ಇನ್ನೂ ಕೈಗಾರಿಕೆಗಳು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಚೀನಾ ಮಾಧ್ಯಮಗಳು ಭಾರತಕ್ಕೆ ಹೋದರೆ ಇಂತಾ ಗತಿ ಬರುತ್ತವೆ ಎಂದು ವಿಸ್ಟ್ರಾನ್ ಕಂಪನಿ ಘಟನೆ ಉದಾಹರಿಸಿ ಇತರೆ ಕಂಪನಿಗಳಿಗೆ ಎಚ್ಚರಿಕೆ ನೀಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು.
    ಭಾರತದಲ್ಲಿ ಉದ್ಯೋಗದಾತರ ಪರ ಸರ್ಕಾರಗಳಿವೆ, ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ, ಉಪಮುಖ್ಯಮಂತ್ರಿ ಅಶ್ವಥ್ಥನಾರಾಯಣ, ಅಶೋಕ್, ಕೈಗಾರಿಕಾ ಸಚಿವ ಶೆಟ್ಟರ್ ಹೂಡಿಕೆದಾರರೊಂದಿಗೆ ಮಾತನಾಡಿ ಸೌಹಾರ್ದತೆ ಕಾಪಾಡಿಕೊಂಡಿದ್ದಾರೆ, ಯಾವುದೇ ಕಂಪನಿಗಳು ಎಲ್ಲೂ ಹೋಗಲ್ಲ.ಚೆನ್ನೈ ಎಕ್ಸ್‍ಪ್ರೆಸ್ ಕಾರಿಡಾರ್ ಕೋಲಾರದಲ್ಲಿ ಹಾದು ಹೋಗುವುದರಿಂದ ಕೈಗಾರಿಕೆಗಳು ಹೆಚ್ಚಾಗಿ ಕೋಲಾರದತ್ತ ಬರುತ್ತವೆ ಘಟನೆಯಿಂದ ಕೈಗಾರಿಗಳು ಬರುವುದಕ್ಕೆ ಯಾವುದೇ ತೊಂದರೆಯಾಗದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ವಿಸ್ಟ್ರಾನ್ ಕಂಪನಿ ಸಮಸ್ಯೆ ಪರಿಹಾರಕ್ಕೆ ಶೀಘ್ರ ಬೃಹತ್ ಕೈಗಾರಿಕಾ ಸಚಿವರ ಅಧ್ಯಕ್ಷತೆಯಲ್ಲಿ ಕಂಪನಿ ಹೆಚ್‍ಆರ್‍ಗಳು, ಎಂಡಿಗಳ ಸಭೆ ಹಾಗೂ ಕಾರ್ಮಿಕರ ಸಭೆಗಳನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.
    ಬಿಜೆಪಿ ಹಿರಿಯ ಮುಖಂಡ ಹನುಮಪ್ಪ, ಕೆಯುಡಿಎ ಅಧ್ಯಕ್ಷ ಓಂಶಕ್ತಿ ಚಲಪತಿ, ನಗರಸಭೆ ಸದಸ್ಯ ಮುರಳಿಗೌಡ, ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಅಪ್ಪಿನಾರಾಯಣಸ್ವಾಮಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts