More

    ಯಾರು ಗ್ರಾಮ ಬಿಟ್ಟು ಹೋಗಬೇಡಿ : ಮಿಟ್ಟಿಹಳ್ಳಿ ಗ್ರಾಮಸ್ಥರಿಗೆ ಸಂಸದ ಮುನಿಸ್ವಾಮಿ ಮನವಿ

    ಚಿಂತಾಮಣಿ: ಭೂಮಿ ಕಂಪನ ಹಾಗೂ ಭಾರಿ ಶಬ್ದ ಕೇಳಿ ಬಂದಿರುವ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಹೋಬಳಿಯ ಮಿಟ್ಟಿಹಳ್ಳಿಗೆ ಕೋಲಾರ ಸಂಸದ ಎಸ್.ಮುನಿಸ್ವಾಮಿ ಶುಕ್ರವಾರ ಭೇಟಿ ನೀಟಿ ಪರಿಶೀಲನೆ ನಡೆಸಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು.

    ಯಾರು ಆತಂಕ ಪಡುವ ಅಗತ್ಯವಿಲ್ಲ, ನಿಮ್ಮ ಜತೆ ನಾವು ಇದ್ದೇವೆ. ನಮ್ಮಸರ್ಕಾರ ಮತ್ತು ಅಧಿಕಾರಿಗಳು ಸಹ ಇದ್ದಾರೆ. ಯಾರು ಗ್ರಾಮ ಬಿಟ್ಟು ಹೋಗಬಾರದು, ಗುಳ್ಳೆ ಹೊರಡಲು ಮುಂದಾಗಿರುವ ಗ್ರಾಮಸ್ಥರು ಮತ್ತೆ ವಾಪಸ್ ಬರುವಂತೆ ಮುನಿಸ್ವಾಮಿ ಮನವಿ ಮಾಡಿದರು. ಕೆಲ ದಶಕಗಳ ನಂತರ ಜಿಲೆಯಲ್ಲಿ ಉತ್ತಮ ಮಳೆ ಬಂದಿದೆ. ಸುಮಾರು ಕಡೆ ಬೋರ್‌ವೆಲ್ ಹಾಕಿರುವುದರಿಂದ ಒಳಗಡೆ ಬಿರುಕು ಬಿಟ್ಟು ಅದರಲ್ಲಿ ಗಾಳಿ ಸೇರಿ ಕೊಂಡಿರುತ್ತದೆ. ಇದೀಗ ಅದರಲ್ಲಿ ನೀರು ಸೇರಿಕೊಳ್ಳುತ್ತಿರುವುದರಿಂದ ಭೂಮಿ ಕಂಪನದ ಶಬ್ದ ಕೇಳುತ್ತಿದೆ. ಬೇರೆ ಏನು ಇಲ್ಲ, ಯಾರು ಭಯಪಡಬೇಕಿಲ್ಲ, ಊರು ಬಿಟ್ಟು ಹೋಗಿರುವವರು ಮರಳಿ ಗ್ರಾಮಕ್ಕೆ ಬನ್ನಿ ಎಂದರು.

    ಘಟನೆ ಬಗ್ಗೆ ಸುಮ್ಮನೆ ಬೇರೆ ಬೇರೆ ರೀತಿ ಮಾತನಾಡುವುದು ಬೇಡ. ಭೂ ಕಂಪನದ ಭಯವಿದ್ದರೆ ಕೃಷಿ ಇಲಾಖೆಯಿಂದ 20 ಟಾರ್ಪಲ್ ಕೊಡಿಸಿ ತಾತ್ಕಾಲಿಕ ಗುಡಿಸಲು ವ್ಯವಸ್ಥೆ ಮಾಡೋಣಾ, ನನ್ನ ಕಡೆಯಿಂದ 80 ಟಾರ್ಪಲ್ ಕೊಡಿಸುತ್ತೇನೆ. ತಾತ್ಕಾಲಿಕ ಗುಡಿಸಿಲಿನಲ್ಲಿ ಇರುವಂತೆ ಜನರಿಗೆ ಕೋರಿದರು.
    ಭೂಮಿಯ ಕಂಪನದ ಬಗ್ಗೆ ಶೀಘ್ರ ಮತ್ತೊಂದು ವರದಿಗೆ ಬರುತ್ತೆ. ಆ ವರದಿ ಆದರಿಸಿ ಮುಂದೆ ಏನು ಮಾಡಬೇಕೆಂದು ಮತ್ತೆ ತೀರ್ಮಾನ ಮಾಡೋಣ. ಗ್ರಾಮದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವಂತೆ ಸಂಸದರು ಗ್ರಾಪಂ ಅಧಿಕಾರಿಗಳಿಗೆ ಸೂಚಿಸಿದರು.

    ತಹಸೀಲ್ದಾರ್ ಡಿ.ಹನುಮಂತರಾಯಪ್ಪ, ಇಒ ಮಂಜುನಾಥ್, ಕೆಂಚಾರ‌್ಲಹಳ್ಳಿ ಠಾಣೆ ಇನ್‌ಸ್ಪೆಕ್ಟರ್ ಜಿ.ಪುರುಷೋತ್ತಮ್ಮ, ಗ್ರಾಪಂ ಅಧ್ಯಕ್ಷ ಮಧು, ಚಿಕ್ಕಬಳ್ಳಾಪುರ ಭೂ ವಿಜ್ಞಾನಿಗಳಾದ ಕೃಷ್ಣಮೂರ್ತಿ ಮತ್ತು ಸುದರ್ಶನ್ ಮತ್ತು ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts