More

    ಬಿಯರ್ ಬೆಲೆ ದುಬಾರಿ ಆಯ್ತ, ನಾನು ಸಾಯುತ್ತೇನೆಂದು ಹೈಡ್ರಾಮಾ; ಕೊನೆಗೆ ನಡೆದಿದ್ದೇನು?

    ಮಧ್ಯಪ್ರದೇಶ: ಬಿಯರ್​ ಬಾಟಲಿಗೆ 50 ರೂಪಾಯಿಗಳನ್ನು ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ಮರಕ್ಕೆ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ವಿಲಕ್ಷಣ ಘಟನೆ ನಡೆದಿದೆ. ಈ ಕುರಿತಾದ ಕೆಲವು ಫೋಟೋಗಳು ಸೊಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ಮದ್ಯದ ಬಾಟಲಿಗಳಿಗೆ 50 ರೂಪಾಯಿ ಹೆಚ್ಚುವರಿ ನೀಡಬೇಕಾಗಿದ್ದು, ದೂರು ನೀಡಿದರೂ ಗಮನ ಹರಿಸಿಲ್ಲ ಎಂದು ಈ ವ್ಯಕ್ತಿ ದೂರಿದ್ದಾನೆ. ಇದರಿಂದ ಮನನೊಂದ ರಾಜ್‌ಗಢ್ ಜಿಲ್ಲೆಯ ನಿವಾಸಿ ಬ್ರಿಜ್‌ಮೋಹನ್ ಶಿವಹರೆ ಮಂಗಳವಾರ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಈ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು, ವ್ಯಕ್ತಿಯೊಬ್ಬ ಮರವನ್ನು ಹತ್ತುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ಸ್ಥಳೀಯ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ಸುರಕ್ಷಿತವಾಗಿ ಮರದಿಂದ ಕೆಳಗಿಳಿಸಿದ್ದಾರೆ.

    ಮತ್ತೊಂದು ವೀಡಿಯೊದಲ್ಲಿ, ವ್ಯಕ್ತಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಕಣ್ಣೀರು ಹಾಕುತ್ತಾ, ತನಗೆ ಕೆಲಸವಿಲ್ಲ ಮತ್ತು ಬಾಡಿಗೆ ಪಾವತಿಸಲು ಹಣದ ಕೊರತೆಯಿದೆ. ಈ ನಡುವೆ ಮದ್ಯಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲಾಗಿದೆ ಎಂದು ಹೇಳುತ್ತಾ ಬೇಸರ ವ್ಯಕ್ತಪಡಿಸುತ್ತಿರುವುದನ್ನು ನೋಡಬಹುದು.

    ಫೆಬ್ರವರಿಯಲ್ಲಿ,ಬ್ರಿಜ್‌ಮೋಹನ್ ಮುಖ್ಯಮಂತ್ರಿಗಳ ಸಹಾಯವಾಣಿ, ಸ್ಥಳೀಯ ಪೊಲೀಸ್ ಠಾಣೆ, ಉಪವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ), ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ (ಡಿಎಂ) ಅವರಿಗೆ ಬಿಯರ್​​ ಬಾಟಲಿಯ ದರ ಹೆಚ್ಚಳದ ಕುರಿತು ಹಲವು ಅಧಿಕಾರಿಗಳಿಗೆ ದೂರು ನೀಡಿದರೂ ಮದ್ಯದಂಗಡಿ ನಡೆಸುವವರ ಅವ್ಯವಹಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

    ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ ಅವರು ಹೀಗೆ ಹೇಳುತ್ತಿರುವುದು ಕೇಳಿಬರುತ್ತಿದೆ, “ಇವರು ಹಣ ವಸೂಲಿ ಮಾಡುತ್ತಾರೆ. ನೀವು ದೂರು ನೀಡಿದರೆ ಅಥವಾ ಪ್ರತಿಭಟಿಸಿದರೆ ಅವರು ನಿಮ್ಮನ್ನು ಹೊಡೆಯುತ್ತಾರೆ. ನಾನು ಎರಡು ತಿಂಗಳಿನಿಂದ ಕೆಲಸಕ್ಕೆ ಹೋಗಲಿಲ್ಲ, ಬಾಡಿಗೆಯನ್ನು ಸಹ ಪಾವತಿಸಲು ಸಾಧ್ಯವಾಗಲಿಲ್ಲ. ದೂರು ನೀಡಲು ಬೇಸತ್ತಿದ್ದೇನೆ. ದೂರು ನೀಡಿದಾಗ ಮದ್ಯ ಮಾರಾಟಗಾರರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ರಾಮಮಂದಿರ ಉದ್ಘಾಟನೆ, ಗಣರಾಜ್ಯೋತ್ಸವದಂತಹ ಮಹತ್ವದ ಸಂದರ್ಭಗಳಲ್ಲೂ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಕೆಂಪು ಬಣ್ಣದ ಬುಸ್​..ಬುಸ್ ನಾಗರಹಾವು; ಅಬ್ಬಬ್ಬಾ ನಾಗಪ್ಪ ಇದು ವಿಚಿತ್ರ ಎಂದ್ರು ನೆಟ್ಟಿಗರು

    ಗಾಳಿ ರಭಸಕ್ಕೆ ಹಾರಿಹೋಗಿ ಐದು ವರ್ಷದ ಮಗು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts