More

    ಅಡುಗೆ ಎಣ್ಣೆ ದರ ನಿಯಂತ್ರಿಸಿ; ಪಿಎಂ, ಸಿಎಂ, ಆಹಾರ ಸಚಿವರಿಗೆ ಸಂಸದ ಡಿ.ಕೆ ಸುರೇಶ್ ಪತ್ರ

    ಬೆಂಗಳೂರು: ದಿನ ಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಅಡುಗೆ ಎಣ್ಣೆ ದರ ದುಪ್ಪಟ್ಟಾಗಿರುವುದರಿಂದ ಜನ ಹೈರಾಣಾಗಿದ್ದಾರೆ. ಹೀಗಾಗಿ ಅಡುಗೆ ಎಣ್ಣೆ ದರ ನಿರಂತರ ಏರಿಕೆ ನಿಯಂತ್ರಣ ಮಾಡುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

    ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಆಹಾರ ಸಚಿವ ಮತ್ತು ನಾಗರೀಕ ಸರಬರಾಜು ಸಚಿವ ಪಿಯೂಷ್ ಗೋಯಲ್, ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ರಾಜ್ಯ ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಅವರಿಗೆ ಪತ್ರ ಬರೆದಿರುವ ಸುರೇಶ್ ಮಾಡಿರುವ ಮನವಿ ಹೀಗಿದೆ;

    ‘ಲಾಕ್ ಡೌನ್, ಪೆಟ್ರೋಲ್, ಡೀಸೆಲ್ ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಜನಸಾಮಾನ್ಯರ ಮೇಲೆ ಆರ್ಥಿಕ ಒತ್ತಡ ತಂದಿದೆ. ಇದರ ಜತೆಗೆ ಅಡುಗೆ ಎಣ್ಣೆ ಬೆಲೆ ದುಪ್ಪಟ್ಟಾಗಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಪ್ರಸ್ತುತ ಅಡುಗೆ ಎಣ್ಣೆ ದರ ₹150ರಿಂದ 180ರವರೆಗೆ, ಬ್ರಾಂಡೆಡ್ ಅಡುಗೆ ಎಣ್ಣೆ ₹230 ವರೆಗೂ ಇದೆ. ಕೋವಿಡ್ ಲಾಕ್ ಡೌನ್ ನಿಂದ ಆದಾಯವಿಲ್ಲದ ಬಡವರು ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಅಡುಗೆ ಎಣ್ಣೆ ಬೆಲೆ ಏರಿಕೆ ಅವರಿಗೆ ಕೈಗೆಟುಕದಾಗಿದೆ.

    ಹೀಗಾಗಿ ಅಡುಗೆ ಎಣ್ಣೆ ದರ ನಿಯಂತ್ರಣ ಮಾಡಲು ಸರ್ಕಾರ ಮಧ್ಯಪ್ರವೇಶ ಮಾಡಿ ಕ್ರಮ ಕೈಗೊಳ್ಳಬೇಕು. ಅಡುಗೆ ಎಣ್ಣೆ ಮೇಲಿನ ಆಮದು ಸುಂಕ, ಜಿಎಸ್ ಟಿ ಪ್ರಮಾಣ ಕಡಿಮೆ ಮಾಡಿ, ದೇಶಿಯ ಉತ್ಪಾದನೆ ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಬೇಕು.

    ಇದನ್ನೂ ಓದಿ; ಬಿಯರ್​ ಮಾರಾಟದಲ್ಲಿ ಶೇ.50 ಕುಸಿತ, ನಿತ್ಯ 25 ರಿಂದ 30 ಸಾವಿರ ಬಾಕ್ಸ್​ ಸೇಲ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts