More

    ಬಿಯರ್​ ಮಾರಾಟದಲ್ಲಿ ಶೇ.50 ಕುಸಿತ, ನಿತ್ಯ 25 ರಿಂದ 30 ಸಾವಿರ ಬಾಕ್ಸ್​ ಸೇಲ್​

    ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಬಿಯರ್​ ಮಾರಾಟದಲ್ಲಿ ಶೇ.50 ಕುಸಿದಿದೆ. ರಾಜ್ಯದಲ್ಲಿ 3,907 (ಸಿಎಲ್​-2), 232 ಕ್ಲಬ್​ (ಸಿಎಲ್​-4), 1,037 ಹೋಟೆಲ್​ ಮತ್ತು ಗೃಹ(ಸಿಎಲ್​-7), 3,552 ಬಾರ್​ ಆ್ಯಂಡ್​ ರೆಸ್ಟೋರೆಂಟ್​(ಸಿಎಲ್​-9) ಹಾಗೂ 705 ಎಂಎಸ್​ಐಲ್​ (11ಸಿ) 438 ಇತರೆ ಸೇರಿ ಒಟ್ಟು 10,410 ಮದ್ಯದಂಗಡಿಗಳಿವೆ.

    ಸಾಮಾನ್ಯ ದಿನಗಳಲ್ಲಿ ನಿತ್ಯ ಆಂದಾಜು 70 ಸಾವಿರ ಬಿಯರ್​ ಬಾಕ್ಸ್​ಗಳು ಮಾರಾಟವಾಗುತ್ತಿತ್ತು. ಇದರಿಂದ ಇಲಾಖೆಗೆ 10 ಕೋಟಿ ರೂ.ಆದಾಯ ಬರುತ್ತಿತ್ತು. ಇದೀಗ ನಿತ್ಯ 25&30 ಸಾವಿರ ಬಾಕ್ಸ್​ಗಳು ಸೇಲಾಗುತ್ತಿವೆ.

    ಕುಸಿತಕ್ಕೆ ಕಾರಣಗಳೇನು?
    ಸಾಮಾನ್ಯವಾಗಿ ಬೇಸಿಗೆ ಆರಂಭವಾಗಿದ್ದರಿಂದ ಬಿಯರ್​ ಮಾರಾಟದಲ್ಲಿ ಏರಿಕೆಯಾಗುತ್ತಿತ್ತು. ಇದನ್ನು ಮನಗಂಡು ಮಾಲೀಕರು ಹೆಚ್ಚು ಬಂಡವಾಳ ಹೂಡಿ ಬಿಯರ್​ ಖರೀದಿಸಿ ತಮ್ಮ ಅಂಗಡಿಗಳಲ್ಲಿ ಸಂಗ್ರಹಿಟ್ಟಿದ್ದರು.

    ಕರೊನಾ ನಿಯಂತ್ರಿಸಲು ಲಾಕ್​ಡೌನ್​ ಹೇರುವುದರಿಂದ, ಮದ್ಯದಂಗಡಿಗಳಲ್ಲಿ ಪಾರ್ಸೆಲ್​ ಮೂಲಕ ಮದ್ಯ ಮಾರಾಟಕ್ಕೆ ಅನುಮತಿ ನೀಡಿರುವುದರಿಂದ, ಶೀತ ಸಮಸ್ಯೆಯಿಂದ ಬಳಲುತ್ತಿರುವವರು ಕುಡಿಯಲು ಹಿಂದೇಟು ಹಾಕುತ್ತಿರುವುದರಿಂದ ಹಾಗೂ ಮಳೆಗಾಲ ಸಮೀಪಿಸುತ್ತಿರುವುದು ಸೇರಿ ಇತ್ಯಾದಿ ಕಾರಣಗಳಿಂದ ಬಿಯರ್​ ಮಾರಾಟದಲ್ಲಿ ಕುಸಿತವಾಗಿದೆ. ಬಿಯರ್​ಕ್ಕಿಂತ ಇಂಡಿಯನ್​ ಮೇಡ್​ ಲಿಕ್ಕರ್​ಗೆ (ಐಎಂಎಲ್​) ಹೆಚ್ಚು ಬೇಡಿಕೆ ಬಂದಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ; ಬಿಲ್ ಬಾಕಿ; ಮೃತದೇಹ ಕೊಡಲು ನಿರಾಕರಿಸಿದ ಆಸ್ಪತ್ರೆ ವಿರುದ್ಧ ಕೇಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts